ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಶಿರಸಿ (Sirsi) : ಉತ್ತರಕನ್ನಡ ಜಿಲ್ಲೆಯಲ್ಲಿ ಘಟ್ಟದ ಭಾಗದಲ್ಲಿ ಬಾರೀ ಪ್ರಮಾಣದ ಮಳೆ ಸುರಿಯುತ್ತಿದೆ. ಪರಿಣಾಮವಾಗಿ ದೇವಿಮನೆ ಘಟ್ಟದಲ್ಲಿ(Devimane Ghat) ಗುಡ್ಡ ಕುಸಿತ ಉಂಟಾಗಿದೆ.
ಕರಾವಳಿ ಭಾಗದ ಕುಮಟಾ(Kumta) ಮತ್ತು ಮಲೆನಾಡು ಶಿರಸಿ(Sirsi) ತಾಲೂಕನ್ನ ಸಂಪರ್ಕಿಸುವ ದೇವಿಮನೆ ಹೆದ್ದಾರಿಯಲ್ಲಿಯೇ ಈ ಘಟನೆ ನಡೆದಿದೆ. ಶುಕ್ರವಾರ ರಾತ್ರಿ ಸ್ವಲ್ಪ ಪ್ರಮಾಣದ ಗುಡ್ದ ಕುಸಿದಿದ್ದು, ಮಣ್ಣು, ಕಲ್ಲುಗಳು ರಸ್ತೆಯ ಮೇಲೆ ಬಿದ್ದಿದ್ದವು. ಇಂದು ತೆರವುಗೊಳಿಸಲು ಮುಂದಾದಾಗ ಬೆಳಿಗ್ಗೆ ಮತ್ತೆ ಗುಡ್ಡ ಕುಸಿದಿದೆ(Landslide). ಹೀಗಾಗಿ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ.
ಕಳೆದ ಕೆಲ ವರ್ಷಗಳಿಂದ ಈ ಮಾರ್ಗದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು ಕೆಲವು ತಿಂಗಳಿಂದ ಬಾರೀ ವಾಹನಗಳ ಸಂಚಾರ ನಿರ್ಬಂಧಿಸಲಾಗಿತ್ತು. ಸ್ಥಳಿಯ ಲಘು ವಾಹನಗಳು ಮಾತ್ರ ಓಡಾಡುತ್ತಿದ್ದವು. ಇದೀಗ ಗುಡ್ಡ ಕುಸಿದಿದ್ದರಿಂದ ವಾಹನ ಸಂಚಾರಕ್ಕೆ ಆತಂಕ ಪಡಬೇಕಾದ ವಾತಾವರಣ ನಿರ್ಮಾಣವಾಗಿದೆ.
ಇದನ್ನು ಓದಿ : ಅಮ್ಮ ತೀರಿ ಹೋದ ವಾರದೊಳಗೆ ಅಪ್ಪನ ಸಾವು. ವಿಮಾನ ದುರಂತದಲ್ಲಿ ಅನಾಥರಾದ ಪುಟ್ಟ ಮಕ್ಕಳು.