ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ದಾಂಡೇಲಿ(Dandeli) : ನಗರದ ಬಿ.ಸಿ.ಕಾಲೋನಿಯಲ್ಲಿರುವ ಸ.ಹಿ.ಪ್ರಾ ಕನ್ನಡ ಮಾಧ್ಯಮ ಶಾಲೆಯಲ್ಲಿ ಕಳ್ಳರು ಕಳ್ಳತನಕ್ಕೆ ವಿಫಲ ಯತ್ನ(Theft Attempt) ನಡೆಸಿದ ಘಟನೆ ನಡೆದಿದೆ.

ಸೋಮವಾರ ಬೆಳಿಗ್ಗೆ ನಗರ ಪೊಲೀಸ್ ಠಾಣೆಯಲ್ಲಿ(Town Police Station) ದೂರು ನೀಡಲಾಗಿದೆ. ಬಿ.ಸಿ.ಕಾಲೋನಿಯಲ್ಲಿರುವ ಸ.ಹಿ.ಪ್ರಾ ಕನ್ನಡ ಮಾಧ್ಯಮ ಶಾಲೆಯ(Government HP Kannada Medium School) ತರಗತಿ ಕೊಠಡಿಯೊಂದರ ಬೀಗ ಮುರಿಯಲಾಗಿದೆ. ಆದರೆ ತರಗತಿ ಕೊಠಡಿ ಆಗಿರುವುದರಿಂದ ಕಳ್ಳರಿಗೆ  ಯಾವುದೇ ವಸ್ತುಗಳನ್ನು ಕಳ್ಳತನ(Theft) ಮಾಡಲು‌ ಆಗಲಿಲ್ಲ. ಆದರೆ ಬಿಸಿಯೂಟದ ಆಹಾರ ವಸ್ತುಗಳನ್ನು ಸಂಗ್ರಹಿಸಿಟ್ಟಿರುವ ಕೊಠಡಿಯ ಬೀಗ ಮುರಿಯಲು ವಿಫಲ ಪ್ರಯತ್ನ ನಡೆಸಿದ್ದಾರೆ.  ಭಾನುವಾರ ತಡರಾತ್ರಿ ಇಲ್ಲವೇ ಸೋಮವಾರ ನಸುಕಿನ ವೇಳೆ ಈ ಘಟನೆ ನಡೆದಿರಬಹುದು ಎಂದು ಅಂದಾಜಿಸಲಾಗಿದೆ.

ದಾಂಡೇಲಿ ನಗರ ಠಾಣೆಯ(Dandeli  Town Station) ಪೊಲೀಸರು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದು ತನಿಖೆ ನಡೆಸಲಾಗಿದೆ.