ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಬೆಳಗಾವಿ / ಹುಬ್ಬಳ್ಳಿ: ಉತ್ತರ ಕರ್ನಾಟಕದ(Uttarkarnataka) ಪ್ರಮುಖ ಮಹಾನಗರ ಪಾಲಿಕೆಗಳಾದ ಬೆಳಗಾವಿ(Belagavi) ಹಾಗೂ ಹುಬ್ಬಳ್ಳಿ-ಧಾರವಾಡ(Hubli-Dharwad) ಪಾಲಿಕೆಗಳಿಗೆ ಸೋಮವಾರ ಅಪರಿಚಿತ ಇಮೇಲ್ ಮೂಲಕ ಬಾಂಬ್ ಬೆದರಿಕೆ ಕರೆ ಬಂದಿದ್ದು, ಸಾರ್ವಜನಿಕರು ಹಾಗೂ ಸಿಬ್ಬಂದಿಯಲ್ಲಿ ತೀವ್ರ ಆತಂಕ ವಾತಾವರಣ ಸೃಷ್ಟಿಯಾಗಿದೆ.

ಬೆಳಗಾವಿ ಪಾಲಿಕೆಯಲ್ಲಿ ಬಾಂಬ್ ಭೀತಿ:
ಬೆಳಗಾವಿ(Belagavi) ಮಹಾನಗರ ಪಾಲಿಕೆಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಮಾರ್ಕೆಟ್ ಪೊಲೀಸ್ ಇನ್ಸ್ಪೆಕ್ಟರ್ ಜೆ.ಎಂ. ಕಾಲಿಮಿರ್ಜಿ ಅವರು ಸ್ಥಳಕ್ಕೆ ಧಾವಿಸಿದ್ದು, ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳದೊಂದಿಗೆ ಪಾಲಿಕೆಯ ಕಚೇರಿಯ ಮೂಲೆ ಮೂಲೆಯನ್ನೂ ತೀವ್ರ ಪರಿಶೀಲನೆಗೆ ಒಳಪಡಿಸಿದರು.

ಹುಬ್ಬಳ್ಳಿ-ಧಾರವಾಡ ಪಾಲಿಕೆಗೂ ಇಮೇಲ್ ಬೆದರಿಕೆ:
ಇತ್ತ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ(Hubli-Dharwad Metropolitan’s City) ಆಯುಕ್ತರ ಅಧಿಕೃತ ಇಮೇಲ್ಗೂ ಬೆಳಿಗ್ಗೆ 11:35ಕ್ಕೆ ಅಪರಿಚಿತ ವ್ಯಕ್ತಿಯಿಂದ ಬೆದರಿಕೆ ಸಂದೇಶ ರವಾನೆಯಾಗಿದೆ. [email protected] (ವೆಯಿಟ್ ಸ್ಮಿತ್) ಎಂಬ ಇಮೇಲ್ ಐಡಿಯಿಂದ ಈ ಬೆದರಿಕೆ ರವಾನೆಯಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಶೃತಿ ಅವರು ಪಾಲಿಕೆಗೆ ಭೇಟಿ ನೀಡಿ, ಆಯುಕ್ತರ ಕಚೇರಿ ಒಳಗೆ ಪರಿಶೀಲನೆ ನಡೆಸಿ, ಸಿಬ್ಬಂದಿಯಿಂದ ಮಾಹಿತಿ ಕಲೆಹಾಕಿದ್ದಾರೆ.

ಬೆದರಿಕೆ ಇಮೇಲ್ನಲ್ಲಿ ಏನೇನಿದೆ?
-
ಖಲಿಸ್ತಾನ್ ಉಲ್ಲೇಖ: ಇಮೇಲ್ನಲ್ಲಿ ಖಲಿಸ್ತಾನ್ ಪರ ಘೋಷಣೆಗಳನ್ನು ಬರೆಯಲಾಗಿದ್ದು, ‘Khalistan National Army’ ಹಾಗೂ ‘Babbar Khalsa (Parmar-Canada)’ ಸಂಘಟನೆಗಳ ಹೆಸರನ್ನು ಉಲ್ಲೇಖಿಸಲಾಗಿದೆ.
-
ದಲ್ಜಿತ್ ದೋಸಾಂಜ್ ಕಾರ್ಯಕ್ರಮಕ್ಕೆ ಬೆದರಿಕೆ: ನವೆಂಬರ್ 29ರಂದು ಬೆಂಗಳೂರಿನ NICE ಸೆಂಟರ್ನಲ್ಲಿ ನಡೆಯಲಿರುವ ಖ್ಯಾತ ಗಾಯಕ ದಲ್ಜಿತ್ ದೋಸಾಂಜ್ ಕಾರ್ಯಕ್ರಮದ ವೇದಿಕೆಯಲ್ಲಿ IED ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಒಡ್ಡಲಾಗಿದೆ. ಅಂದು NICE ಗ್ರೌಂಡ್ಗೆ ಯಾರೂ ಹೋಗಬಾರದು ಎಂದು ಎಚ್ಚರಿಸಲಾಗಿದೆ.
-
ಮೆಟ್ರೋ ಪ್ರಯಾಣಿಕರಿಗೆ ಮುನ್ನೆಚ್ಚರಿಕೆ: ಬೆಂಗಳೂರಿನ ಮೆಟ್ರೋ ನಿಲ್ದಾಣದಲ್ಲಿ IED ಬಾಂಬ್ ಇರಿಸಿರುವುದಾಗಿ ತಿಳಿಸಲಾಗಿದ್ದು, ನವೆಂಬರ್ 29ರಂದು ಮಧ್ಯಾಹ್ನ 3:11ರಿಂದ ರಾತ್ರಿ 11:11ರ ಅವಧಿಯಲ್ಲಿ ಮೆಟ್ರೋದಲ್ಲಿ ಪ್ರಯಾಣಿಸದಂತೆ ಸೂಚಿಸಲಾಗಿದೆ.
-
ಅಮಿತಾಭ್ ಬಚ್ಚನ್ ಮನೆಗೆ ಬೆದರಿಕೆ: ನವೆಂಬರ್ 27ರಂದು ಬಾಲಿವುಡ್ ನಟ(Bollywood Actor) ಅಮಿತಾಭ್ ಬಚ್ಚನ್ ಅವರ ನಿವಾಸದ ಬಳಿ ಸ್ಫೋಟ ನಡೆಸುವುದಾಗಿ ಬೆದರಿಕೆ ಹಾಕಲಾಗಿದೆ.
-
ಐಫೋನ್ ಮುಟ್ಟದಂತೆ ಸೂಚನೆ: ಸಾರ್ವಜನಿಕ ಸ್ಥಳಗಳಲ್ಲಿ ಯಾರಾದರೂ ಐಫೋನ್ (iPhone) ಬಿಟ್ಟುಹೋಗಿದ್ದರೆ ಅದನ್ನು ಎತ್ತಿಕೊಳ್ಳಬಾರದು ಅಥವಾ ಮುಟ್ಟಬಾರದು ಎಂದು ಸಂದೇಶದಲ್ಲಿ ಉಲ್ಲೇಖಿಸಲಾಗಿದೆ.
-
1984ರ ಸಿಖ್ ದಂಗೆ: 1984ರ ಸಿಖ್ ನರಮೇಧದ ವಿಷಯವನ್ನು ಇಮೇಲ್ನಲ್ಲಿ ಪ್ರಸ್ತಾಪಿಸಲಾಗಿದ್ದು, ಹಲವು ಪ್ರಮುಖ ವ್ಯಕ್ತಿಗಳ ಹೆಸರುಗಳನ್ನೂ ಉಲ್ಲೇಖಿಸಲಾಗಿದೆ.
-
ಪ್ರಸ್ತುತ ಪೋಲಿಸ್ ಇಲಾಖೆ ಹಾಗೂ ಸೈಬರ್ ಕ್ರೈಮ್ ವಿಭಾಗವು ಈ ಬೆದರಿಕೆ ಇಮೇಲ್ ಮೂಲದ ಕುರಿತು ತೀವ್ರ ತನಿಖೆ ನಡೆಸುತ್ತಿದ್ದು, ಸಾರ್ವಜನಿಕರು ಯಾವುದೇ ಊಹಾಪೋಹಗಳಿಗೆ ಕಿವಿಗೊಡದೆ ಶಾಂತಿ ಮತ್ತು ಜಾಗರೂಕತೆ ವಹಿಸುವಂತೆ ಮನವಿ ಮಾಡಲಾಗಿದೆ.
-



