ಬೆಳಗಾವಿ(BELAGAVi) – ವಿವಿಧತೆಯಲ್ಲಿ ಏಕತೆ ಸಾರುವ ದೇಶ ಭಾರತ. ಇಲ್ಲಿ ಎಲ್ಲಾ ಧರ್ಮೀಯರು ವಾಸ ಮಾಡುಟ್ಟಿದ್ದಾರೆ., ಪರಸ್ಪರ ಸಾಮರಸ್ಯ, ಬಾಂಧವ್ಯ, ಸಹೋದರತೆ ಇನ್ನು ಕೂಡ ಜೀವಂತವಾಗಿವೆ ಎಂಬುದಕ್ಕೆ ಇಲ್ಲೊಂದು ಉದಾಹರಣೆ ಇದೆ.
ಐಎಎಸ್(IAS) ಅಧಿಕಾರಿಯಾಗಿರುವ ಬೆಳಗಾವಿ ಡಿಸಿ ಮಹ್ಮದ್ ರೋಷನ್ (BELAGAVI DC MOHMED ROSHAN) ಅವರ ಕೋಮುಸೌಹಾರ್ದತೆಯೇ ಇದಕ್ಕೆ ಸಾಕ್ಷಿ. ಇಂದು ಗಣೇಶ ಹಬ್ಬವನ್ನ ಸ್ವತಃ ರೋಶನ್ ಅವರೇ ಜಬರ್ದಸ್ತಾಗಿ ಆಚರಿಸಿದರು. ತಲೆಯ ಮೇಲೆ ಗಾಂಧಿ ಟೋಪಿ, ಹಣೆಯ ಮೇಲೆ ಕೆಂಪು ನಾಮ, ಕೇಸರಿ ಝುಬ್ಬಾ ಹಾಕಿಕೊಂಡು ಗಣೇಶ ಮೂರ್ತಿಗೆ ಆರತಿ ಬೆಳಗಿ ಪೂಜೆ ಸಲ್ಲಿಸಿದರು.
ಗಣೇಶ ಮೂರ್ತಿಯನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಆರಾಧಿಸಿದರು. ಬೆಳಗಾವಿಯ ಚನ್ನಮ್ಮನ ವೃತ್ತ(CHENNAMMA CIRCLE) ದಲ್ಲಿರುವ ಗಣಪತಿ ಮಂದಿರದಲ್ಲಿ ಶ್ರೀಮತಿ ಅಂಕಿತಾ ಹಾಗು ಪುತ್ರ ಅಯಾನ್ ಜೊತೆ ಆಗಮಿಸಿದ ಬೆಳಗಾವಿ ಜಿಲ್ಲಾಧಿಕಾರಿ ಮಹ್ಮದ್ ರೋಷನ್ ಅವರು ತಾವೇ ಖುದ್ದಾಗಿ ಗಣೇಶ್ ಮೂರ್ತಿಯನ್ನ ತಮ್ಮ ಸರ್ಕಾರಿ ಬಂಗಲೆಗೆ ಕೊಂಡೋಯ್ದರು. ಬಳಿಕ ಪ್ರತಿಷ್ಟಾಪಿಸಿ ಅತ್ಯಂತ ಶ್ರದ್ಧಾಭಕ್ತಿಯಿಂದ ಪೂಜಿಸಿದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ವಿಜಯಕುಮಾರ್ ಹೊನಕೇರಿ ಹಾಗೂ ಕಚೇರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಜಿಲ್ಲಾಧಿಕಾರಿಗಳ ಗಣೇಶನ ಭಕ್ತಿ ನಾಡಿಗೆ ಸಾಮರಸ್ಯದ ಸಂದೇಶ ಸಾರಿದಂತೂ ಸತ್ಯ.
ಇದನ್ನು ಓದಿ : ಹೆದ್ದಾರಿಯಲ್ಲಿ ತೈಲ ಸೋರಿಕೆ
ಗಣೇಶನ ಹಬ್ಬಕ್ಕಾಗಿ ಕುಟುಂಬದವರ ಜಗಳ ಕೊಲೆಯಲ್ಲಿ ಅಂತ್ಯ
ಕೊಂಕಣ ರೈಲ್ವೆ ಮಾರ್ಗದಲ್ಲಿ ತಪ್ಪಿದ ದುರಂತ