ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal) : ಟ್ಯಾಂಕರ್ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿ ಸಾವನ್ನಪ್ಪಿದ ಘಟನೆ ರಾ ಹೆದ್ದಾರಿ 66 ನೂರ್ ಮಸೀದಿ ಎದುರು ಶನಿವಾರ ಬೆಳಿಗ್ಗೆ ನಡೆದಿದೆ.
ಬೈಕ್ ಹಿಂಬದಿಯಲ್ಲಿ ಕುಳಿತಿದ್ದ ಪತ್ನಿ ಸ್ವಲ್ಪದರಲ್ಲೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಮೃತರು ಮುರ್ಡೇಶ್ವರ ಬಸ್ತಿಯ ದೇವಿಕಾನ್ ನಿವಾಸಿಯಾಗಿದ್ದು, ಮೂಲತಃ ಕರಿಕಲ್ ಗ್ರಾಮದವರು ಎಂದು ಹೇಳಲಾಗಿದೆ. ಹೆಸರು ಗೊತ್ತಾಗಿಲ್ಲ.
ಇಬ್ಬರೂ ತಮ್ಮ ಮನೆಯಿಂದ ಬೈಕ್ ಮೂಲಕ ಭಟ್ಕಳದ ದೇವಸ್ಥಾನವೊಂದಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ. ಟ್ಯಾಂಕರ್ ಹಾಗೂ ಬೈಕ್ ಶಿರಾಲಿ ಕಡೆಯಿಂದ ಭಟ್ಕಳ ಬೈಪಾಸ್ ಕಡೆ ತೆರಳುತಿತ್ತು. ಈ ವೇಳೆ ಬೈಕ್ಗೆ ಟ್ಯಾಂಕರ್ ಢಿಕ್ಕಿ ಹೊಡೆದು ಸವಾರನ ಮೇಲೆ ಮುಂಭಾಗದ ಚಕ್ರ ಹರಿದಿದೆ. ಹೆಲೈಟ್ ಧರಿಸಿದ್ದರೂ ಕೂಡ ಚಕ್ರಕ್ಕೆ ತಲೆ ಛಿದ್ರವಾಗಿದೆ. ಈ ವೇಳೆ ಹಿಂಬದಿ ಕುಳಿತಿದ್ದ ಮೃತನ ಪತ್ನಿ ಸ್ವಲ್ಪದರಲ್ಲೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೃತ ದೇಹದ ಮುಂದೆ ಪತ್ನಿಯ ಆಕ್ರಂದನ ಹೃದಯ ಕಲುಕುವಂತಿತ್ತು. ಭಟ್ಕಳ ಶಹರ ಠಾಣೆ(Bhatkal Town Station) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನು ಓದಿ : ಹಣ ಕೊಟ್ಟು ಜನರನ್ನ ಕರೆಸಿತಾ ಕಂಪನಿ. ಸಾರ್ವಜನಿಕ ಅಹವಾಲು ಸಭೆಯಲ್ಲಿ ಕೋಲಾಹಲ.