ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಹೊನ್ನಾವರ(Honnavar) : ಏರ್ ಗನ್‌ನಿಂದ ಆಕಸ್ಮಿಕವಾಗಿ ಗುಂಡು ಸಿಡಿದು ಯುವಕನೋರ್ವ  ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಗೇರುಸೊಪ್ಪ ಸಮೀಪದ  ಹಾಡಗೇರಿ(Gerusoppa Haadgeri) ಗ್ರಾಮದಲ್ಲಿ ನಡೆದಿದೆ.

ಇಂದು  ಸಂಜೆ ದುರ್ಘಟನೆ ಸಂಭವಿಸಿದ್ದು, ಸುಬ್ರಹ್ಮಣ್ಯ ಮಂಜ ಮರಾಠಿ (18) ಮೃತ ಯುವಕ ಎಂದು ಗುರುತಿಸಲಾಗಿದೆ.  ಗ್ರಾಮದಲ್ಲಿ ಮಂಗಗಳ(Monkeys) ಹಾವಳಿ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಅವುಗಳನ್ನು ಓಡಿಸಲು ಸುಬ್ರಹ್ಮಣ್ಯ ಏರ್ ಗನ್(Airgun) ತೆಗೆದುಕೊಂಡು ಹೊರಟಿದ್ದ ಎನ್ನಲಾಗಿದೆ.

ಈ ಸಂದರ್ಭದಲ್ಲಿ ಅಕಸ್ಮಿಕವಾಗಿ ಅವನು ಜಾರಿ ಬಿದ್ದಿದ್ದು, ಕೈಯಲ್ಲಿದ್ದ ಏರ್ ಗನ್‌ನಿಂದ ಗುಂಡು ಸಿಡಿದು ಎದೆ ಭಾಗಕ್ಕೆ ತಗುಲಿದ ಪರಿಣಾಮ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾನೆ ಎನ್ನಲಾಗಿದೆ.  ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ್ದು  ಹೊನ್ನಾವರ ಪೊಲೀಸರು(Honnavar Police) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನು ಓದಿ : ಹೆದ್ದಾರಿಯಲ್ಲಿ ಬೈಕ್–ಕಾರು ಅಪಘಾತ. ಬೈಕ್ ಸವಾರರು ಗಂಭೀರ ಗಾಯ