ಹೊನ್ನಾವರ(Honnavar) : ಸಹೋದರರ ಜಗಳ ಓರ್ವನ ಕೊಲೆಯಲ್ಲಿ ಪರ್ಯಾವಸನಗೊಂಡ ಘಟನೆ ತಾಲೂಕಿನ ಗುಂಡಿಬೈಲ್ ಹೆಬೈಲ್‌ನಲ್ಲಿ (Gundibail Hrbbail) ನಡೆದಿದೆ.

ಒಡಹುಟ್ಟಿದ ಅಣ್ಣನೇ ತಮ್ಮನನ್ನು ಕೊಲೆ ಮಾಡಿದ್ದಾನೆ.  ನಾಗೇಶ್ ಹನುಮಂತ ನಾಯ್ಕ ಕೊಲೆಯಾದ ದುರ್ದೈವಿ. ಸುಬ್ರಾಯ ಹನುಮಂತ ನಾಯ್ಕ  ಎಂಬಾತನೆ ಕೊಲೆ ಮಾಡಿದವ.

ಕುಡಿತದ ಚಟ ಹೊಂದಿದ ಇಬ್ಬರು ಸಹೋದರರ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಕಳೆದ ನಾಲೈದು ತಿಂಗಳ ಹಿಂದೆ ಇಬ್ಬರ ನಡುವೆ ಜಗಳ ಉಂಟಾಗಿ ತಮ್ಮ ನಾಗೇಶ್ ಅಣ್ಣ ಸುಬ್ರಾಯನ ಮೇಲೆ ಹಲ್ಲೆ ಮಾಡಿ ಆತನ ಕಾಲು ಮುರಿದಿದ್ದ ಎನ್ನಲಾಗಿದೆ. ನಿನ್ನೆ ರಾತ್ರಿ ಸಹ ಊಟ ಮಾಡುವ ಸಮಯದಲ್ಲಿ ತಮ್ಮ ನಾಗೇಶ ಅಣ್ಣನಿಗೆ ಖಾಸಗಿ ವಿಚಾರದಲ್ಲಿ ಮಾತಾಡಿದ್ದ ಎನ್ನಲಾಗಿದೆ. ಇದರಿಂದ ಕೋಪಗೊಂಡ ಅಣ್ಣ ಮಂಜುನಾಥ ಚಾಕುವಿನಿಂದ ಇರಿದು ಕೊಲೆಗೈದಿದ್ದಾನೆ.

ಸ್ಥಳಕ್ಕೆ ಹೊನ್ನಾವರ ಪೊಲೀಸರು(Honnavar Police) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದನ್ನು ಓದಿ : ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರುವ ಭಕ್ತರಿಗೆ ಸೂಚನೆ

ಶಿರಸಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

ಬಿಗ್ ಬಾಸ್ ಸ್ಪರ್ಧಿ ಶೋಭಾ ಗೆ ಅನಾರೋಗ್ಯ

ಆರು ಎಸೆತಕ್ಕೆ ಆರು ವಿಕೆಟ್