ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಅಂಕೋಲಾ(Ankola) : ತಾಲೂಕಿನ ಕೇಣಿಯಲ್ಲಿ(Keni) ಉದ್ದೇಶಿಸಿರುವ ವಾಣಿಜ್ಯ ಬಂದರು(Commercial Port) ಯೋಜನೆ ವಿರೋಧಿಸಿ ಮಂಗಳವಾರ ಅಂಕೋಲಾ ಪಟ್ಟಣದಲ್ಲಿ(Ankola Town) ವಿನೂತನ ರೀತಿಯ ಬೃಹತ್ ಪ್ರತಿಭಟನೆ ನಡೆಯಿತು.
ಕಳೆದ ಒಂದು ವರ್ಷದಿಂದ ಯೋಜನೆ ವಿರೋಧಿಸಿ ಪ್ರತಿಭಟನೆ ಧರಣಿಗಳು ನಡೆದಿವೆ. ಸಾರ್ವಜನಿಕ ಆಲಿಕೆ(Public Hearing) ಸಭೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದವು. ಹೋರಾಟ (Struggle) ಆರಂಭಗೊಂಡು ವರ್ಷ ಸಮೀಪಿಸಿದ ಹಿನ್ನಲೆಯಲ್ಲಿ ಇಂದು ಕರಾಳ ದಿನಾಚರಣೆ(Black Day) ಮತ್ತು ಅಂಕೋಲಾ ಬಂದ್ ಗೆ(Ankola Bund) ಕರೆ ನೀಡಲಾಗಿತ್ತು. ಹೀಗಾಗಿ ಪಟ್ಟಣದ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು.
ಕೇಣಿ ಬಂದರು ವಿರೋಧಿ ಹೋರಾಟ ಸಮಿತಿ(Kei Port Oppose Struggle Committee) ಕರೆಯ ಮೇರೆಗೆ ಜೈಹಿಂದ್ ವೃತ್ತದಲ್ಲಿ ಸೇರಿದ ಸಹಸ್ರಾರು ಸಂಖ್ಯೆಯ ನಾಗರಿಕರು ಕಪ್ಪು ಪಟ್ಟಿ(Black Ribbon) ಧರಿಸಿ ಆಕ್ರೋಶ ವ್ಯಕ್ತಪಡಿಸಿದರು. ಶಾಸಕರು(MLA), ಸಚಿವರು(Mimister), ಸರ್ಕಾರದ(Government) ವಿರುದ್ಧ ಹರಿಹಾಯ್ದರು.
ಕಳೆದೊಂದು ವರ್ಷದಿಂದ ವಿನಾಶಕಾರಿ ಯೋಜನೆ ಜಾರಿ ಮಾಡಬಾರದೆಂದು ಹಂತಹಂತವಾಗಿ ಪ್ರತಿಭಟನೆ, ಹೋರಾಟ ನಡೆಯುತ್ತಿದ್ದರೂ ಯಾರೂ ಕೂಡ ಲಕ್ಷ್ಯ ಹಾಕಿಲ್ಲ. ಬಂದರು ಯೋಜನೆಯ ಅಣಕು ಶವದ ಪ್ರತಿಕ್ರತಿ ಮೆರವಣಿಗೆ ನಡೆಸಲಾಯಿತು. ಜೈಹಿಂದ್ ಸರ್ಕಲ್ ನಿಂದ(Jaihind Circle) ದಿನಕರ ದೇಸಾಯಿ ರಸ್ತೆಯ(Dinakar Desai Road) ಮೂಲಕ ಸಂಚರಿಸಿದ ಮೆರವಣೆಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ಇಂದಿನ ಪ್ರತಿಭಟನೆಯಲ್ಲಿ ಸುಮಾರು 103 ಹಳ್ಳಿಗಳ ನಾಗರಿಕರು ಭಾಗವಹಿಸಿದ್ದರು. ಕರಾಳ ದಿನಾಚರಣೆ(Black Day) ಹಿನ್ನಲೆಯಲ್ಲಿ ಹೊನ್ನಾವರ(Honnavar), ಕುಮಟಾ(Kumta), ಕಾರವಾರ(Karwar) ಸೇರಿದಂತೆ ವಿವಿಧ ಭಾಗಗಳಿಂದ ಸಂಘಟನೆಯ ಮುಖಂಡರು ಪಾಲ್ಗೊಂಡಿದ್ದರು.
ಇದನ್ನು ಓದಿ : ವಂದೇ ಭಾರತ್ ರೈಲು ಹಾಯ್ದು ಇಬ್ಬರು ವಿದ್ಯಾರ್ಥಿಗಳ ಮೃತ್ಯು
