ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಗೋಕರ್ಣ(Gokarn) : ಉತ್ತರಕನ್ನಡ ಜಿಲ್ಲೆಯ ಪ್ರವಾಸಿ ತಾಣ ಗೋಕರ್ಣದ ಓಂ ಕಡಲ ತೀರದಲ್ಲಿ(Om Beach) ಸೆಲ್ಫಿ(Selphi) ತೆಗೆದುಕೊಳ್ಳುವ ವೇಳೆ ಪ್ರವಾಸಿಗನೋರ್ವ ಕಾಲು ಜಾರಿ ಸಮುದ್ರಕ್ಕೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ.

ಅಸ್ಲಾಂ (45) ಮೃತ ಪ್ರವಾಸಿಗನೆಂದು ತಿಳಿದುಬಂದಿದೆ. ಈತ ಶಿವಮೊಗ್ಗ ಮೂಲದ(Shivamogga Native) ಲಗೇಜ್ ರಿಕ್ಷಾ ಚಾಲಕನಾಗಿದ್ದ. ಶುಕ್ರವಾರ ಮುಂಜಾನೆ ಒಟ್ಟು 10 ಜನರ ತಂಡ ಪ್ರವಾಸಕ್ಕಾಗಿ ಗೋಕರ್ಣಕ್ಕೆ ಬಂದಿದ್ದರು. ಓಂ ಕಡಲತೀರದ ಡೆಂಜರ್ ಏರಿಯಾಕ್ಕೆ(Danger Area) ತೆರಳಿ ಸೆಲ್ಫಿ ಫೋಟೋ ತೆಗೆದುಕೊಳ್ಳಲು ಮುಂದಾಗಿದ್ದಾರೆ. ತೀರ ಮುಂದಕ್ಕೆ ತೆರಳಿದ್ದ ಅಸ್ಲಾಂ ಕಾಲು ಜಾರಿ ಸಮುದ್ರಕ್ಕೆ ಬಿದ್ದಿದ್ದಾನೆ ಎನ್ನಲಾಗಿದೆ.

ಸುದ್ದಿ ತಿಳಿದ ಸ್ಥಳೀಯ ಬೋಟ್ ಒಂದನ್ನ ತೆಗೆದುಕೊಂಡು ಹುಡುಕಾಟ ನಡೆಸಲಾಯಿತು. ಲೈಪ್ ಗಾರ್ಡ್(Life Guard) ಸಿಬ್ಬಂದಿಗಳಾದ ಪ್ರಭಾಕರ ಅಂಬಿಗ, ಹರೀಶ ಮೂಡಂಗಿ ಮತ್ತು ಮಂಜೇಶ ಹರಿಕಾಂತ ಅವರು ಹರ ಸಾಹಸಪಟ್ಟು ಮೃತ ದೇಹವನ್ನು ತಂದಿದ್ದಾರೆ. ನಂತರ ಮೃತದೇಹವನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದೆ. ಸ್ಥಳಕ್ಕೆ ಗೋಕರ್ಣ ಪೋಲೀಸರು(Gokarn Police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೂರು ವರ್ಷದ ಹಿಂದೆ ಹಾವೇರಿಯ ಕುಮಾರ ಎಂಬಾತ ಸೆಲ್ಪಿ ತೆಗೆಯಲು ಹೋಗಿ ಸಾವನ್ನಪ್ಪಿದ್ದ. ಪ್ರವಾಸಕ್ಕೆ ಬರುವ ಪ್ರವಾಸಿಗರಲ್ಲಿ ಸೆಲ್ಫಿ ಕ್ರೇಜ್ ಹೆಚ್ಚಾಗುತ್ತಿದ್ದು ಸನ್ ಸೈಟ್ ನೋಡಲು ಅಪಾಯಕಾರಿ ಪ್ರದೇಶಕ್ಕೆ ಮುಗಿ ಬೀಳುತ್ತಿದ್ದಾರೆ. ಲೈಪ್ ಗಾರ್ಡ್ ಸಿಬ್ಬಂದಿಗಳು, ಪೊಲೀಸರು ಏಷ್ಟೆ ಎಚ್ಚರಿಕೆ ನೀಡಿದರೂ ನಿರ್ಲಕ್ಷಿಸುತ್ತಿದ್ದಾರೆ. ಪ್ರವಾಸಿಗರ ನಿರ್ಲಕ್ಷ್ಯದಿಂದ ಅವಘಡಗಳು ಸಂಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ, ಪ್ರವಾಸೋದ್ಯಮ ಇಲಾಖೆ(Tourism Department) ಸುರಕ್ಷತಾ ದೃಷ್ಟಿಯಿಂದ ಕ್ರಮ ಕೈಗೊಳ್ಳಬೇಕಾಗಿದೆ.

ಇದನ್ನು ಓದಿ : ಅರಬ್ಬಿ ಸಮುದ್ರದಲ್ಲಿ ಐದು ತಾಸು ಈಜಿದ. ಆಪಾದಗಬಾಂಧವರಂತೆ ಬಂದು ಕಾಪಾಡಿದ ಮಲ್ಪೆ ಮೀನುಗಾರರು