ಗೋವಾ(GOA) :  ಹೊರ ರಾಜ್ಯಗಳಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ವಲಸೆ ಕೂಲಿ ಕಾರ್ಮಿಕರ ಪರಿಶೀಲನೆಯನ್ನ ಗೋವಾ ಪೊಲೀಸರು ಮಾಡಲು ಮುಂದಾಗಿದ್ದಾರೆ.

ಗೋವಾದ ವಿವಿಧೆಡೆ ಕಳ್ಳತನ, ಕೊಲೆ, ಅತ್ಯಾಚಾರ ಸೇರಿದಂತೆ ಅಪರಾಧ ಪ್ರಕರಣ ಹೆಚ್ಚಾಗುತ್ತಿದೆ. ಹೀಗಾಗಿ  ಸತ್ತರಿ ತಾಲೂಕಿನಲ್ಲಿ  ವಾಳಪೈ ಪೊಲೀಸ್ ಠಾಣೆ ವಾಪ್ತಿಯಲ್ಲಿ ಕಳೆದ ಮೂರು ದಿನಗಳಿಂದ ಪರಿಶೀಲನೆ ಆರಂಭಿಸಲಾಗಿದೆ.

ಸತ್ತರಿ ತಾಲೂಕಿನಲ್ಲಿ ಅಧಿಕ ಸಂಖ್ಯೆಯಲ್ಲಿ ವಲಸೆ ಕಾರ್ಮಿಕರಿದ್ದು,  ಬಿಹಾರ(BIHAR), ಉತ್ತರಪ್ರದೇಶ(UTTARAPRADESHA), ಜಾರ್ಖಂಡ(JARKHAND) , ಕರ್ನಾಟಕ(KARNATAKA), ಒರಿಸ್ಸಾದವರಿದ್ದಾರೆ. ವಾಳಪೈ ನಗರ ಮತ್ತು ಗ್ರಾಮಾಂತರ ಪ್ರದೇಶದ ಕಾರ್ಮಿಕರು ಮತ್ತು ಆಯಾ ಮನೆ ಮಾಲೀಕರು ತಮ್ಮ ಬಿ ಫಾರ್ಮ್ ಅನ್ನು ಭರ್ತಿ ಮಾಡಿ ವಾಳಪೈ ಪೊಲೀಸ್‌ ಠಾಣೆಗೆ ವಿವರವಾದ ಮಾಹಿತಿಯನ್ನು ನೀಡಬೇಕೆಂದು ಸೂಚಿಸಲಾಗಿದೆ.

ಕಾರ್ಮಿಕರ ಮಾಹಿತಿ ಮರೆಮಾಚಿ ಬಾಡಿಗೆ ನೀಡುವವರ  ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೋಲಿಸ್ ಅಧಿಕಾರಿಗಳು ಎಚ್ಚರಿಕೆ ಸಂದೇಶ ನೀಡಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಇನ್‌ಸ್‌ಪೆಕ್ಟರ್ ವಿದೇಶ್ ಶಿರೋಡ್ಕ‌ರ್,  ಗೋವಾದ ಸತ್ತರಿ ತಾಲೂಕಿನಲ್ಲಿ ಹಾಗೂ ವಾಳಪೈ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ವಾಸಿಸುವ ಕಾರ್ಮಿಕರ ಮಾಹಿತಿ ಪೊಲೀಸ್ ಠಾಣೆಗೆ ಅಗತ್ಯವಾಗಿದೆ. ಬಹುತೇಕ ಕಾರ್ಮಿಕರ ಪರಿಶೀಲನೆ ಪ್ರಕ್ರಿಯೆ ಶನಿವಾರ ಪೂರ್ಣಗೊಂಡಿದೆ. ಈ ಪ್ರಕ್ರಿಯೆಯನ್ನು ನಿರಂತರವಾಗಿ ಪ್ರಾರಂಭಿಸಲಾಗುವುದು. ಆದಾಗ್ಯೂ, ಅನೇಕ ಮನೆ ಮಾಲೀಕರು ತಮ್ಮ ಮನೆಗಳಲ್ಲಿ ಬಾಡಿಗೆಯಲ್ಲಿ ಉಳಿದುಕೊಂಡಿರುವ ಕಾರ್ಮಿಕರ ಬಗ್ಗೆ ಮಾಹಿತಿಯನ್ನು ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಪೋಲಿಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗೋವಾದ ವಾಳಪೈ ಪಟ್ಟಣದಲ್ಲಿ ಒಂದು ವರ್ಷದಿಂದ ಬಾಂಗ್ಲಾ ದೇಶಿ ನುಸುಳುಕೋರರು   ಇದ್ದು  ಅವರ ವಿರುದ್ಧ  ಪೊಲೀಸರು ತನಿಖೆ ನಡೆಸಬೇಕು ಎಂದು ಜನತೆ ಆಗ್ರಹಿಸಿದ್ದಾರೆ.

ಇದನ್ನು ಓದಿ : ದನಿಯಿಲ್ಲದವರಿಗೆ ದನಿಯಾಗಿ : ಜಿಲ್ಲಾಧಿಕಾರಿ

ಆಸ್ಪತ್ರೆಗೆ ಹೋಗಿ ಬರುವಷ್ಟರಲ್ಲಿ ಮನೆ ಕಳ್ಳತನ