ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಯಲ್ಲಾಪುರ(Yallapur) : ಆಸ್ತಿಗಾಗಿ‌(Property) ತಂದೆಯನ್ನೇ ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದ ಆರೋಪಿ ಪುತ್ರನನ್ನ  ಯಲ್ಲಾಪುರ ಪೊಲೀಸರು(Yallapur Police) ‌ಬಂಧಿಸಿದ್ದಾರೆ.

ಯಲ್ಲಾಪುರ ತಾಲ್ಲೂಕಿನ ಬೆಳ್ಳುಂಬಿ ಬಳಿಯ ಮಾವಿನಕಟ್ಟಾದಲ್ಲಿ(Mavinakatta) ಹಣದ ಆಸೆಗಾಗಿ ತನ್ನ ತಂದೆ ನಾರಾಯಣ ಪರಶು ಮರಾಠಿ(51) ಅವರನ್ನು  ಮಗ ಹರೀಶ್ ಮರಾಠಿ(29)ಕೊಂದು ಪರಾರಿಯಾಗಿದ್ದ. ಆರೋಪಿಯನ್ನ  ಪೊಲೀಸರು ಅರಣ್ಯ ಪ್ರದೇಶದಲ್ಲಿ ಬೆನ್ನಟ್ಟಿ ಬಂಧಿಸಿದ್ದಾರೆ.

ಕೊಲೆಗೆಕಾರಣ:  ಮಾವಿನಕಟ್ಟಾದ ನಿವಾಸಿ ನಾರಾಯಣ ಮರಾಠಿ ಅವರಿಗೆ ಹರೀಶ್ ಮರಾಠಿ ಮತ್ತು ತಾರಾ ಮರಾಠಿ(26) ಎಂಬ ಇಬ್ಬರು ಮಕ್ಕಳಿದ್ದಾರೆ. ತೋಟದ ಕೆಲಸ ನೋಡಿಕೊಳ್ಳುತ್ತಿದ್ದ ಹರೀಶ್ ಮರಾಠಿ ಅವರಿಗೆ ವಿವಾಹವಾಗಿದ್ದು, ಪತ್ನಿ ಸವಿತಾ ಮತ್ತು ಮಗಳು ಸುರಕ್ಷಾ ಜೊತೆ ಒಂದೇ ಮನೆಯಲ್ಲಿ ಪ್ರತ್ಯೇಕವಾಗಿ ವಾಸವಾಗಿದ್ದರು.

ಘಟನೆಗೂ ಮುನ್ನ ಹರೀಶ್ ಪತ್ನಿ ಸವಿತಾ ಮರಾಠಿ ಮತ್ತು ತಂಗಿ ತಾರಾ ಮರಾಠಿ ನಡುವೆ ವೈಮನಸ್ಸು ಮೂಡಿತ್ತು. ಈ ವೈಮನಸ್ಸಿನಿಂದಾಗಿ ಆಗಾಗ ಜಗಳಗಳು ನಡೆಯುತ್ತಿದ್ದು, ಪತ್ನಿಯ ಮಾತು ಕೇಳುತ್ತಿದ್ದ ಹರೀಶ್ ಮರಾಠಿ ಅವರು ತಂಗಿ ತಾರಾ ಮರಾಠಿ ಅವರಿಗೆ ಹಲ್ಲೆ ಮಾಡುತ್ತಿದ್ದರು.

ಶನಿವಾರ(ನ.8) ರಂದು ನಡೆದ ಜಗಳ ಅಲ್ಲಿಯೇ ಮುಗಿದಿತ್ತು. ಆದರೆ, ಭಾನುವಾರ(ನ.9)ರಂದು ಹಿಂದಿನ ದಿನದ ಜಗಳ(Clash) ಮತ್ತೆ ಮುಂದುವರೆದಿದೆ. ಸವಿತಾ ಮರಾಠಿ ಅವರು ಮನೆ ಸ್ವಚ್ಛ ಮಾಡುತ್ತಿದ್ದಾಗ ತಾರಾ ಅವರು ಅಲ್ಲಿಗೆ ಬಂದಿದ್ದು ಜಗಳಕ್ಕೆ ಕಾರಣವಾಗಿತ್ತು. ಈ ವಿಷಯವನ್ನು ಸವಿತಾ ಅವರು ಪತಿ ಹರೀಶ್ ಬಳಿ ಹೇಳಿಕೊಂಡಿದ್ದಳು. ಪತ್ನಿಯ ಪರವಾಗಿ ನಿಂತ ಹರೀಶ್ ಮರಾಠಿ ಕೋಪದಲ್ಲಿ ಕೂಗಾಡುತ್ತಾ ತಂಗಿ ತಾರಾಗೆ ಹೊಡೆದಿದ್ದಾನೆ. ಅಣ್ಣನ  ಏಟಿಗೆ ತಾರಾ ಮರಾಠಿ ಮೂಗಿನಿಂದ ರಕ್ತ ಸುರಿಯಿತು.

ಮಧ್ಯಾಹ್ನ ತೋಟದಿಂದ ಮನೆಗೆ ಬಂದ ತಂದೆಗೆ ಮಗಳು ವಿಷಯ ತಿಳಿಸಿದ್ದಾಳೆ.   ಮಗಳ ಮೇಲೆ ಕೈ ಮಾಡಿದ ಕಾರಣ ತಂದೆ ನಾರಾಯಣ ಮಗ ಹರೀಶ್ ಗೆ ಬೈದು, “ನಿನ್ನ ವಿರುದ್ಧ ದೂರು ನೀಡಿ ಬರುವೆ” ಎಂದು ಗದರಿಸಿದ್ದರು.

ತಂದೆಯ ಮಾತಿನಿಂದ ಕೆರಳಿದ ಹರೀಶ್ ಮರಾಠಿ, “ಈಗಲೇ ಈ ಮನೆ ಬಿಟ್ಟು ಹೋಗು” ಎಂದು ಗದರಿಸಿದ.  ಅಲ್ಲಿಯೇ ನಿಂತಿದ್ದ ತಂದೆಯ ತಲೆಗೆ ಕೊಡಲಿ ಬೀಸಿದರು. “ಮನೆ ಸಾಲ ಮತ್ತು ಮದುವೆ ಸಾಲವನ್ನು ನಾನೇ ತೀರಿಸಿದ್ದು, ಆದರೂ ನನಗೆ ಆಸ್ತಿ ಕೊಡಲಿಲ್ಲ,” ಎಂದು ಕೂಗಿದ ಹರೀಶ್, ನಾರಾಯಣ ಮರಾಠಿ ಅವರ ಕಡೆ ಮತ್ತೊಮ್ಮೆ ಕೊಡಲಿ ಬೀಸಿದರು. ಎಡ ಕಿವಿಯ ಬಳಿ ಕೊಡಲಿ ತಾಗಿದ ಪರಿಣಾಮ ನಾರಾಯಣ ಮರಾಠಿ ಅವರು ರಕ್ತದ ಮಡುವಿನಲ್ಲಿ ಕುಸಿದುಬಿದ್ದು ಸಾವನ್ನಪ್ಪಿದ್ದ.

ನಂತರ ಆರೋಪಿ ಹರೀಶ್ ಮರಾಠಿ ಕೊಡಲಿ ಸಹಿತ ಸ್ಥಳದಿಂದ ಓಡಿ ಪರಾರಿಯಾಗಿದ್ದ.  ಸಹೋದರನ ಕ್ರೌರ್ಯದ ಬಗ್ಗೆ ತಾರಾ ಮರಾಠಿ ಅವರು ಪೊಲೀಸ್ ದೂರು ನೀಡಿದ ತಕ್ಷಣವೇ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ.

ಯಲ್ಲಾಪುರ ಪಿಐ(Yallapur PI) ರಮೇಶ್ ಹಾನಾಪುರ ಅವರ ಸೂಚನೆ ಮೇರೆಗೆ ಪಿಎಸ್‌ಐ(PSI) ರಾಜಶೇಖರ ವಂದಲಿ ನೇತೃತ್ವದಲ್ಲಿ, ಸಿದ್ದಪ್ಪ ಗುಡಿ ಹಾಗೂ ಸಿಬ್ಬಂದಿ ಬಸವರಾಜ ಹಗೇರಿ, ಸುರೇಶ್ ಕಾಂಟ್ರೆಕ್ಟ್ ಮತ್ತು ಗಿರೀಶ ಲಮಾಣಿ ಅವರನ್ನೊಳಗೊಂಡ ವಿಶೇಷ ತಂಡವು ಶೋಧ(Special Team Search) ಕಾರ್ಯ ನಡೆಸಿತು.

ಹೆಮ್ಮಾಡಿ ಬಸ್ ನಿಲ್ದಾಣ(Hemmadi Bus Stop) ಸಮೀಪದ ಅರಣ್ಯ ಪ್ರದೇಶದಲ್ಲಿ(Forest Area) ಆರೋಪಿ ಅಡಗಿರುವುದು ಪತ್ತೆಯಾಯಿತು. ಪೊಲೀಸರು ತಕ್ಷಣ ಆರೋಪಿಯನ್ನು ಅಡ್ಡಗಟ್ಟಿ ವಶಕ್ಕೆ ಪಡೆದರು. ಕೊಲೆಗೆ ಬಳಸಿದ ಆಯುಧವಾದ ಕೊಡಲಿಯನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಾನೂನಾತ್ಮಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪಿಎಸ್‌ಐ ರಾಜಶೇಖರ ವಂದಲಿ ಅವರು ಪ್ರಕರಣ ದಾಖಲಿಸಿ, ತನಿಖೆ ಮುಂದುವರಿಸಿದ್ದಾರೆ.

ಇದನ್ನು ಓದಿ : ಕಾರವಾರದಿಂದ ಬಿಣಗಾ ಕಡೆ ತೆರಳುವ ವಾಹನ ಸವಾರರೇ ಎಚ್ಚರ! ರಸ್ತೆಯಲ್ಲಿ ಬಿದ್ದಿದೆ ಬಾರೀ ಹೊಂಡ

ಅನಾರೋಗ್ಯದ ನಡುವೆ ಓಡಾಟ ನಡೆಸುತ್ತಿರೋದ್ಯಾಕೆ? ಶಾಸಕ ಸತೀಶ ಸೈಲ್ ಗೆ ಗುರುವಾರದವರೆಗೆ ಜಾಮೀನು ವಿಸ್ತರಣೆ.

ದೆಹಲಿ ಬಾರೀ ಸ್ಪೋಟ. ಹತ್ತಕ್ಕೂ ಹೆಚ್ಚು ಜನರ ದುರ್ಮರಣ. ದೇಶಾದ್ಯಂತ ಹೈ ಅಲರ್ಟ್.

ಪೋಷಕರೇ ಮಕ್ಕಳಿಗೆ ಆಹಾರ ನೀಡುವ ಮೊದಲು ಎಚ್ಚರ! ಬಿಸ್ಕೇಟ್ ನಲ್ಲಿ ಹುಳು ಪತ್ತೆ.

ನವೆಂಬರ್ 28ರಂದು ಗೋಕರ್ಣ ಪರ್ತಗಾಳಿಗೆ ಪ್ರಧಾನಿ ನರೇಂದ್ರ ಮೋದಿ .ಶ್ರೀರಾಮನ ಕಂಚಿನ ಮೂರ್ತಿ‌ ಅನಾವರಣ.