ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಭಟ್ಕಳ(Bhatkal):  ನಕಲಿ ವಿದೇಶಿ ನೋಟುಗಳನ್ನು ಚಲಾವಣೆ ಮಾಡುವ ಉದ್ದೇಶದಿಂದ ಇಟ್ಟುಕೊಂಡಿದ್ದ ವ್ಯಕ್ತಿಯೋರ್ವನನ್ನು   ಭಟ್ಕಳ ಶಹರ ಠಾಣೆ(Bhatkal Town Station) ಪೊಲೀಸರು ಬಂಧಿಸಿದ್ದಾರೆ.

ರವೀನ್ ಪ್ರಕಾಶ ಐತಪ್ಪ ಪೂಜಾರಿ (44) ಬಂಧಿತ ಆರೋಪಿ. ದಕ್ಷಿಣಕನ್ನಡ  ಜಿಲ್ಲೆಯ ಮಂಗಳೂರಿನ ಬೋಂದೆಲ್ ಪದವಿನಂಗಡಿ ನಿವಾಸಿ ಎಂದು ಗುರುತಿಸಲಾಗಿದೆ. ಶುಕ್ರವಾರದಂದು ಈತನನ್ನು  ಭಟ್ಕಳ ತಾಲೂಕಿನ ಬಂದರ ರಸ್ತೆಯ ಮೈಸೂರು ಕೆಫೆ(Mysore Cafe) ಎದುರು ಬಂಧಿಸಲಾಗಿದೆ.

ಈತನ ಬಳಿಯಿದ್ದ ಯುಎಇ(UAE) ದೇಶದ ನಕಲಿ ದಿರಮ್ ನೋಟುಗಳನ್ನು ಪೊಲೀಸರು ವಶಕ್ಕೆ  ಪಡೆದಿದ್ದಾರೆ. ಭಟ್ಕಳ ಶಹರ ಠಾಣೆ ಇನ್ಸೆಕ್ಟರ್ ದಿವಾಕರ ಪಿ ಎಮ್ ಪ್ರಕರಣ ದಾಖಲಿಸಿಕೊಂಡು  ತನಿಖೆ ಕೈಗೊಂಡಿದ್ದಾರೆ.

ಇದನ್ನು ಓದಿ : ಅರಣ್ಯದಲ್ಲಿ ಜಾನುವಾರು ನಿಷೇಧ. ಕಾನೂನು ಮತ್ತು ಸರ್ಕಾರದ ಆದೇಶಕ್ಕೆ ವಿರುದ್ಧ ಅರಣ್ಯ ಸಚಿವರ ಹೇಳಿಕೆ : ರವೀಂದ್ರ ನಾಯ್ಕ