ಭಟ್ಕಳ(BHATKAL) : ತಾಲೂಕಿನ ಯಲ್ವಡಿಕವೂರ ಪಂಚಾಯತ(YALVADI KAVURU PANCHAYAT) ವ್ಯಾಪ್ತಿಯ ಬೆಣಂದೂರು (BENANDURU) ಗರ್ಭಿಣಿ ಕಡವೆ ಭೇಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆಯೊಂದರ ಮೇಲೆ ಅರಣ್ಯ ಇಲಾಖೆ ದಾಳಿ ನಡೆಸಿದೆ.
ಭಟ್ಕಳದ ವ್ಯಕ್ತಿಯ ಮನೆಯೊಂದರ ಮೇಲೆ ದಾಳಿ ನಡೆಸಿ 20 ಕೆಜಿ ಮಾಂಸ ಹಾಗೂ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಶುಕ್ರವಾರ ಮಧ್ಯಾಹ್ನ ಮಹಿಯೋರ್ವಳು ಮೇವಿಗಾಗಿ ಬೆಣ0ದೂರಿಗೆ ಹೋಗುವ ರಸ್ತೆ ಪಕ್ಕದಲ್ಲಿ ಹೋಗಿದ್ದಾಗ ಬಂದ ಯಾರೋ ಭೇಟೆಗಾರರು ಹೆಣ್ಣು ಕಡವೆಯನ್ನು ಭೇಟೆಯಾಡಿ ಬಳಿಕ ಅದರ ತಲೆಯನ್ನು ಬೇರ್ಪಡಿಸಿ ಅಲ್ಲೇ ಎಸೆದು ಮಾಂಸವನ್ನು ಸಾಗಾಟ ಮಾಡಿಕೊಂಡು ಪರಾರಿಯಾಗಿದ್ದರು.
ಸ್ಥಳೀಯರು, ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಬಳಿಕ ಸ್ಥಳಕ್ಕೆ ಭಟ್ಕಳ ಅರಣ್ಯ ಇಲಾಖೆ(BHATKAL FOREST DEPARTMENT) ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದರು. ತನಿಖೆ ಕೈಗೊಂಡ ಅರಣ್ಯ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ಭಟ್ಕಳ ವ್ಯಕ್ತಿಯ ಮನೆಯೊಂದರ ಮೇಲೆ ದಾಳಿ(RAID) ನಡೆಸಿ ಮನೆಯಲ್ಲಿದ್ದ ಸುಮಾರು 20 ಕೆಜಿ ಮಾಂಸ ಹಾಗೂ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂದಿದ್ದಾರೆ.
ಬಳಿಕ ಮಾಂಸವನ್ನು ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ(FSL) ಕಳುಹಿಸಲಾಗಿದ್ದು. ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಅಧಿಕಾರಿಗಳು ಹೇಳಿದ್ದಾರೆ.
ಇದನ್ನು ಓದಿ : ಬೆಣಂದೂರು ಅರಣ್ಯದಲ್ಲಿ ಹಂತಕರು
ಅಕ್ರಮ ಗಾಂಜಾ, ಚರಸ್ ವಶಕ್ಕೆ
ನೇತ್ರಾಣಿ ನಡುಗುಡ್ಡೆಯಲ್ಲಿ ಸಮರಭ್ಯಾಸ
ಮೀನುಗಾರರ ಸಾಹಸದಿಂದ ಪ್ರವಾಸಿಗ ರಕ್ಷಣೆ
ಕರಾವಳಿಯಲ್ಲಿ ಬಾಂಗ್ಲಾ ದೇಶಿಯರು
ಕೇಂದ್ರ ಸರ್ಕಾರದಿಂದ ಉಡುಪಿ ಮತ್ತು ಉತ್ತರಕನ್ನಡ ಜಿಲ್ಲೆಗೆ ಗಿಫ್ಟ್