ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಚಿಕ್ಕಮಗಳೂರು(Chikkamagaluru) : ವ್ಯಕ್ತಿಯೋರ್ವ ಜಮೀನಿನ ಸರ್ವೇಗೆ(Land Serve) ಬಂದ ಅಧಿಕಾರಿಗಳ ಮುಂದೆ ಬೆಂಕಿಯ ಪಂಜನ್ನು ಕೈಯಲ್ಲಿ ಹಿಡಿದು ದೈವ ಬಂದವರಂತೆ ನಟಿಸಿ ಪೊಲೀಸರ ಸಮ್ಮುಖದಲ್ಲಿ ತನ್ನ ಅತ್ತಿಗೆಗೆ ಥಳಿಸಿದ(Assault) ಘಟನೆ ನಡೆದಿದೆ.
ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಕೊಪ್ಪ ತಾಲೂಕಿನ(Koppa) ಚಿಕ್ಕನಗುಂಡಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮದ ನಿವಾಸಿ ಸುರೇಶ್ ಎಂಬಾತ ಈ ರೀತಿಯ ವರ್ತನೆ ಮಾಡಿದ್ದಾನೆ. ಕಾಂತಾರ(Kantara) ದೈವದಂತೆ ನಟಿಸಿದ ಸುರೇಶ್ ಹಾಗೂ ಆತನ ಸಹೋದರ ಹರೀಶ್ ನಡುವೆ ಪಿರ್ತಾಜಿತ ಆಸ್ತಿ ಸಂಬಂಧ ಕಳೆದ ಅನೇಕ ವರ್ಷಗಳಿಂದ ವಿವಾದ ನಡೆಯುತ್ತಿದೆ.
ಜಮೀನಿಗೆ ಸಂಬಂಧಿಸಿ ಕಾನೂನು ಹೋರಾಟಗಳು ಎರಡೂ ಕುಟುಂಬಗಳ ನಡುವೆ ನಡೆಯುತ್ತಿತ್ತು. ಅವರ ವ್ಯಾಜ್ಯದ ವಿಚಾರಣೆ ನಡೆಸುತ್ತಿದ್ದ ಕೊಪ್ಪ ಜೆಎಂಎಫ್‌ಸಿ ಕೋರ್ಟ್(Koppa JMFC Court) ಜಮೀನಿನ ಸರ್ವೇ ನಡೆಸುವಂತೆ ಆದೇಶಿಸಿತ್ತು.
ಹೀಗಾಗಿ ಜಮೀನಿಗೆ ಆಗಮಿಸಿದ ಅಧಿಕಾರಿಗಳು ಹಾಗೂ ಪೊಲೀಸರು ಸರ್ವೇಗೆ ಮುಂದಾಗಿದ್ದರು . ಈ ಸಂದರ್ಭದಲ್ಲಿ ದೈವ ಬಂದಂತೆ ನಾಟಕವಾಡಿದ(Drana) ಸುರೇಶ್ ಬಳಿಕ ತಮ್ಮನ ಪತ್ನಿ ರಮ್ಯಾ ಮೇಲೆ ಹಲ್ಲೆ ನಡೆಸಿ ಸ್ಥಳದಿಂದ ಓಡಿ(Escape) ಹೋಗಿದ್ದಾನೆ.
ಘಟನೆ ಬಗ್ಗೆ ಮಾತಾಡಿದ ಅವರ ಸಹೋದರ ಹರೀಶ್, ಜಮೀನಿನ ಸರ್ವೇ ನಡೆಯುವುದನ್ನು ತಪ್ಪಿಸುವ ಸಲುವಾಗಿ ಸುರೇಶ್ ಈ ರೀತಿ ನಾಟಕ ಮಾಡಿದ್ದಾನೆ. ಆತನ ವರ್ತನೆ ತನಿಖೆಗೆ ಅಡ್ಡಿಪಡಿಸುವ ಪ್ರಯತ್ನ ಎಂದು ಹೇಳಿದ್ದಾರೆ.
ಇದನ್ನು ಓದಿ : ಶಾಸಕ ಸತೀಶ ಸೈಲ್ ಗೆ ಮತ್ತೆ ಬೇಲೇಕೇರಿ ಪ್ರಕರಣದ ಉರುಳು. ಬಂಧನ ವಾರಂಟ್.
ಹೆದ್ದಾರಿಯಲ್ಲಿ ನಿಲ್ಲಿಸಿದ್ದ ವಾಹನಕ್ಕೆ ಬೆಂಕಿ. ಸ್ಥಳದಲ್ಲಿ ಆತಂಕದ ವಾತಾವರಣ.
ಸೋನಾರಕೇರಿಯ ಕೆರೆಯಲ್ಲಿ ಮೀನು ಹಿಡಿಯಲು ಹೋದ ಬಾಲಕ ದುರ್ಮರಣ.
ಮಾಜಿ ಐಪಿಎಸ್ ಅಧಿಕಾರಿ ಸಿಡಿದಿದ್ಯಾಕೆ. ಸಿಂಗಂ ಖ್ಯಾತಿಯ ಅಣ್ಣಾ ಮಲೈ ಬಿಜೆಪಿಗೆ ಗುಡ್ ಬೈ?

