ಪಣಜಿ(PANAJI) : ಮುಖ್ಯಮಂತ್ರಿ ಪ್ರಮೋದ ಸಾವಂತ(PRAMOD SAWANT) ಹೊರ ರಾಜ್ಯದ ಬೋಟುಗಳು ಅಕ್ರಮ ಮೀನುಗಾರಿಕೆಯ ಎಚ್ಚರಿಕೆ ನೀಡಿದ ಬೆನ್ನಲ್ಲೇ ಗೋವಾ ಪೊಲೀಸರು(GOA POLICE) ಮಲ್ಪೆಯ ಎರಡು ದೋಣಿಗಳನ್ನು ವಶಕ್ಕೆ ಪಡೆದಿದ್ದಾರೆ.
ಮೀನುಗಾರಿಕೆ ಇಲಾಖೆ(FISHERIES DEPARTMENT) ಮತ್ತು ಗೋವಾ ಪೊಲೀಸರು ಸ್ಥಳೀಯ ಮೀನುಗಾರರ ಸಹಯೋಗದೊಂದಿಗೆ ಈ ಕಾರ್ಯಾಚರಣೆ ನಡೆಸಿದ್ದಾರೆ. ವಶಪಡಿಸಿಕೊಂಡ ದೋಣಿ ಮತ್ತು ಮೀನುಗಾರರ ಮೇಲೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಕೆಲ ದಿನಗಳಿಂದ ಮಲ್ಪೆಯ(MALPE) ಕೆಲವು ಬೋಟುಗಳು ಗೋವಾ ಸಮೀಪದ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿರುವುದಾಗಿ ದೂರುಗಳು ಕೇಳಿ ಬಂದಿದ್ದವು. ಸ್ಥಳೀಯ ಮೀನುಗಾರರ ಸಂಘಟನೆಗಳು ಪ್ರತಿಭಟನೆಯನ್ನೂ ನಡೆಸಿದ್ದವು. ಇದಕ್ಕೆ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಪ್ರಮೋದ ಸಾವಂತ ಹೊರ ರಾಜ್ಯದ ದೋಣಿಗಳು ರಾಜ್ಯದ ಜಲ ಗಡಿಯೊಳಗೆ ಅಕ್ರಮ ಮೀನುಗಾರಿಕೆ(FISHING) ನಡೆಸಿದರೆ, ದೋಣಿಗಳನ್ನು ಜಫ್ತು ಮಾಡಿ 10 ಲಕ್ಷ ರೂಪಾಯಿಯವರೆಗೆ ದಂಡ(FINE) ವಿಧಿಸುವುದಾಗಿ ಎಚ್ಚರಿಕೆ ನೀಡಿದ್ದರು. ಅಲ್ಲದೇ ಮೀನುಗಾರಿಕೆ ಇಲಾಖೆಯ ನಿರ್ದೇಶಕರನ್ನು ಈ ಸಂಪೂರ್ಣ ಕಾರ್ಯಕ್ಕೆ ಉಸ್ತುವಾರಿಯನ್ನಾಗಿ ನೇಮಿಸಿದ್ದರು.
ಸೂಚಿಸಿದ ಕೆಲವೇ ಗಂಟೆಗಳಲ್ಲಿ ಮೀನುಗಾರಿಕೆ ಇಲಾಖೆಯ ನಿರ್ದೇಶಕರು, ಪೊಲೀಸ್ ಇಲಾಖೆ(POLICE DEPARTMENT), ಕಸ್ಟಮ್ಸ್ ಇಲಾಖೆ(CUSTOMS DEPARTMENT), ಕೋಸ್ಟ್ ಗಾರ್ಡ್(COAST GUARD) ಮತ್ತು ಸ್ಥಳೀಯ ಮೀನುಗಾರರ ಸಭೆ ನಡೆಸಿ, ಕಾರ್ಯತಂತ್ರವನ್ನು ರೂಪಿಸಿದ್ದರು. ಸ್ಥಳೀಯ ಮೀನುಗಾರರ ಸಹಾಯದಿಂದ ಮೀನುಗಾರಿಕೆ ಇಲಾಖೆಯ ಗಸ್ತು ದೋಣಿಯು ಗೋವೆಯ ಗಡಿಯೊಳಕ್ಕೆ ನುಸುಳಿ ಮೀನುಗಾರಿಕೆ ನಡೆಸುತ್ತಿರುವ ಮಲ್ಪೆಯ ದೋಣಿಗಳನ್ನ ಒಮ್ಮೆಲೇ ಸುತ್ತುವರೆದ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಶ್ರೀಕೃಷ್ಣ ಪ್ರಸಾದ ಹೆಸರಿನ ಮಲ್ಪೆಯ ದೋಣಿಯು(MALPE BOAT) ಗೋವಾ ಮೀನುಗಾರಿಕೆ ಇಲಾಖೆಯ ಅಧೀನದಲ್ಲಿದ್ದು ಮೀನುಗಾರರೆಲ್ಲ ಸುರಕ್ಷಿತವಾಗಿದ್ದಾರೆ. “ದೋಣಿಯಲ್ಲಿರುವ ಮೀನುಗಳನ್ನೆಲ್ಲ ಹರಾಜು ಹಾಕಲಾಗುವುದು ಮತ್ತು ಮೀನುಗಾರರನ್ನು ಸದ್ಯಕ್ಕೆ ದೋಣಿಯಲ್ಲಿಯೇ ಇರಿಸಲಾಗುವುದು” ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಿಎಂ ಸೂಚನೆಯಂತೆ 10ಲಕ್ಷ ರೂಪಾಯಿ ದಂಡ ವಿಧಿಸುವ ಬಗ್ಗೆ ವಿಚಾರಿಸಿದಾಗ “ಗೋವಾ ಮರೈನ್ ಫಿಶರೀಸ್ ಕಾಯಿದೆಯ(GOA MARINE FISHRIES ACT) ಅನ್ವಯವೇ ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದ್ದಾರೆ.
ಇದನ್ನು ಓದಿ : ಗೋವಾ ಗಡಿಯಲ್ಲಿ ಯಾಂತ್ರಿಕ ಬೋಟುಗಳ ಜಲಯುದ್ಧ
ಇನ್ನೂ ನಾನು ಹಿಂತಿರುಗಿ ಬರುವುದಿಲ್ಲ