ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಅಂಕೋಲಾ(Ankola) : ರೇಬಿಸ್ ಕಾಯಿಲೆಗೆ ತುತ್ತಾದ ಹೋರಿಯೊಂದು ವ್ಯಕ್ತಿಗೆ  ತಿವಿದ ಘಟನೆ ತಾಲೂಕಿನ ಹಾರವಾಡದಲ್ಲಿ(Harwad) ನಡೆದಿದೆ.

ಸೈರೋಬಾ ಪಟೇ ಎಂಬಾತನೇ ಹೋರಿಯಿಂದ ತಿವಿತಕ್ಕೊಳಗಾಗಿ ತೀವೃ ಗಾಯಗೊಂಡ ವ್ಯಕ್ತಿಯಾಗಿದ್ದಾನೆ. ಗಾಯಾಳುವನ್ನು ಚಿಕಿತ್ಸೆಗಾಗಿ ಕಾರವಾರದ ಜಿಲ್ಲಾಸ್ಪತ್ರೆಗೆ(Karwar District Hospital) ದಾಖಲಿಸಲಾಗಿದೆ.

ರೇಬಿಸ್(Rabies) ಪೀಡಿತ ನಾಯಿ ಕಚ್ಚಿದ ಪರಿಣಾಮ ಹೋರಿಯೊಂದು ಕೆಲ ದಿನಗಳಿಂದ  ರಂಪಾಟ ಮಾಡುತಿತ್ತು. ಸಿಕ್ಕ ಸಿಕ್ಕಲ್ಲಿ ಕುಣಿಯುತ್ತಾ ಕಂಡವರನ್ನು ತಿವಿಯಲು ಬರುತ್ತಿತ್ತು. ಹೋರಿಯು ಇನ್ನೊಂದು ಆಕಳಿಗೂ ತಿವಿದು ಗಾಯಗೊಳಿಸಿದೆ. ಹೀಗಾಗಿ ಹಾರವಾಡ ಗ್ರಾಮದ ನಾಗರಿಕರು  ಪಶು ವೈದ್ಯಕೀಯ ಇಲಾಖೆ ಹಾಗೂ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಗ್ರಾಮಸ್ಥರ ಸಹಾಯದಿಂದ ಹೋರಿಯನ್ನು ಹಿಡಿದ ಡಾ. ಪ್ರಶಾಂತ್ ಅವರು  ರೇಬೀಸ್ ಕಾಯಿಲೆ(Rabies Deceased) ತೀವ್ರವಾಗಿದ್ದರಿಂದ  ಇಂಜೆಕ್ಷನ್ ನೀಡಿದ್ದಾರೆ.

ಇದನ್ನು ಓದಿ : ಹುಡೇದಓಣಿಯ ನಾಯ್ಕರ ಕುಟುಂಬದ ಮಲ್ಲವ್ವ ನಿಧನ. ಮಂಗಳವಾರ ಶಿವಗಣಾರಾಧನೆ.

ರೈಲ್ವೆ ಪ್ಲಾಟ್ ಫಾರ್ಮ್ ನಲ್ಲಿಯೇ ಮಹಿಳೆಗೆ ಹೆರಿಗೆ ಮಾಡಿಸಿದ ಸೇನಾ ವೈದ್ಯ

ಗುರು ನಮನ ಬಳಗದಿಂದ ಸ್ಕೂಲ್ ಬ್ಯಾಗ್ ವಿತರಣೆ

.