ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಇದೇ ಸಪ್ಟೆಂಬರ್ 22ರಿಂದ ಆರಂಭವಾಗುವ ಜಾತಿಗಣತಿ ಸಂದರ್ಭದಲ್ಲಿ ಕೆಲ ಜಾತಿಗಳಲ್ಲಿ ಗೊಂದಲ ಉಂಟಾಗಿದೆ. ಹೀಗಾಗಿ  ನಮ್ಮ ಸಮಾಜದವರು ಬಾಂಧಿ ಎಂದು ಗುರುತಿಸಿಕೊಳ್ಳುವ ಬದಲಾಗಿ ನಮ್ಮ ಅಸ್ಮಿತೆಯಾದ ಬಾಂದಿ ಎಂದು ನಮೂದಿಸುವ ಮೂಲಕ  ಈ ಹಿಂದಿನಂತೆ ಗುರುತಿಸಬೇಕು ಎಂದು ಬಾಂದಿ ಸಮಾಜೋನ್ನತಿ ಸಂಘದ ಅಧ್ಯಕ್ಷ ಕೃಷ್ಣಾನಂದ ಬಾಂದೇಕರ ಹೇಳಿದ್ದಾರೆ.

ಕಾರವಾರದ  ಪತ್ರಿಕಾಭವನದಲ್ಲಿ ಬುಧವಾರ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಅವರು  ವಿಷಯ ತಿಳಿಸಿದ್ದಾರೆ. ಉತ್ತರಕನ್ನಡ ಜಿಲ್ಲೆಯಲ್ಲಿರುವ ಬಾಂದೇಕರ ಅಥವಾ ಬಾಂದಿ ಸಮಾಜವನ್ನು ಕನ್ನಡದಲ್ಲಿ ಬಾಂದಿ ಹಾಗೂ ಆಂಗ್ಲ ಭಾಷೆಯಲ್ಲಿ bandi ಎಂದು ಬರೆಯುತ್ತಾರೆ. ಇದು ಬ್ರಿಟೀಷ್ ಕಾಲದಿಂದಲೂ ಚಾಲ್ತಿಯಲ್ಲಿದೆ. 1976ರ ಕರ್ನಾಟಕ ಸರಕಾರದ(Karnataka Government) ರಾಜ್ಯ ಪತ್ರದಲ್ಲಿ ಬಾಂದಿ ಎಂದು ನಮೂದಾಗಿದೆ. ಅದಕ್ಕೂ ಮೊದಲು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಇದ್ದ ಬಾಂದಿಯನ್ನು 1977ರ ರಾಜ್ಯ ಪತ್ರದಂತೆ ಕೈ ಬಿಡಲಾಗಿದೆ. ಅಲ್ಲದೇ ಪರಿಶಿಷ್ಟ ಜಾತಿ(Schedule Caste) ಪ್ರಮಾಣಪತ್ರ ಪಡೆದವರ ವಿರುದ್ಧ ಸುಳ್ಳು ಜಾತಿ ಪ್ರಮಾಣಪತ್ರ ಪಡೆದಿದ್ದಾರೆ ಎಂದು ಪ್ರಕರಣ ಹಾಕಲಾಗಿದೆ ಎಂದು ಅವರು ಹೇಳಿದ್ದಾರೆ.

24 ವರ್ಷಗಳ ಅತಂತ್ರ ಸ್ಥಿತಿಯ ಬಳಿಕ 2002 ರಂದು ಸಮಾಜ ಕಲ್ಯಾಣ ಇಲಾಖೆ ಬಾಂಧಿ ಎನ್ನುವ ಯಾವದೇ ಪೂರ್ವಪರ ಇಲ್ಲದ ಐತಿಹಾಸಿಕ ದಾಖಲೆಯೇ ಇಲ್ಲದೆ ಜಾತಿಯೊಂದನ್ನು ಹುಟ್ಟಿಹಾಕಿ ಹಿಂದುಳಿದ ವರ್ಗದ ಎ ಗುಂಪಿನಲ್ಲಿ ಸೇರಿಸಿತು. ಆದರೆ ಕೇಂದ್ರ ಸರಕಾರದ ಪ್ರಕಾರ ನಾವು ಹಿಂದುಳಿದ ವರ್ಗ ಅಲ್ಲ. ಇದರಿಂದ ಸಮಸ್ಯೆಯಾಗಿದೆ ಎಂದರು. ನಮ್ಮ ಸಮಾಜದವರಿಗೆ ಪರಿಶಿಷ್ಟ ಜಾತಿಯ ಅಥವಾ ಹಿಂದುಳಿದ ವರ್ಗದ ಪ್ರಮಾಣಪತ್ರ ಬೇಡ. ಆದರೆ ಈ ಹಿಂದಿನಂತೆ ನಮ್ಮನ್ನು ಗುರುತಿಸಲು ಜಾತಿ ಗಣತಿಯ ವೇಳೆ ನಮ್ಮಸಮಾಜದವರು ಬಾಂದಿ  ಎಂದು ನಮೂದಿಸಬೇಕು ಎಂದು ಅವರು ವಿನಂತಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಸಮಾಜದ ನಾಗೇಶ ಯಲ್ಲಾಪುರಕರ, ರಾಮಕೃಷ್ಣ ಲೋಲೇಕರ,  ಪ್ರಮೋದ ಬಾಂದೇಕರ, ಚಂದ್ರಶೇಖರ ಬಾಂದೇಕರ, ಬಾಬು ಬಾಂದೇಕರ, ಮನೋಜ ಬಾಂದೇಕರ, ರಾಜಾ ಬಾಂದೇಕರ, ಸಂಜಯ ಬಾಂದೇಕರ, ಸಂಧ್ಯಾ ಬಾಡ್ಕರ ಹಾಗೂ ಇತರರು ಹಾಜರಿದ್ದರು.

ಇದನ್ನು ಓದಿ : ಭಟ್ಕಳದ ದೇವಸ್ಥಾನ ಕಳ್ಳರ ಪತ್ತೆ ಹಚ್ಚಿದ ಗ್ರಾಮೀಣ ಠಾಣೆ ಪೊಲೀಸರು.

ಬನವಾಸಿಯನ್ನ ಶಿರಸಿ-ಸಿದ್ದಾಪುರ ಕ್ಷೇತ್ರಕ್ಕೆ ಸೇರಿಸಿ. ಈ ಹಿಂದಿನಂತೆ ಮೀಸಲು ಕ್ಷೇತ್ರ ಮಾಡಲು ಆಗ್ರಹ.

ಕಾರವಾರದ ಹೊಟೇಲ್ ಮೇಲಿಂದ ಬಿದ್ದ ರಷ್ಯಾ ಪ್ರಜೆ. ಸ್ಥಳಕ್ಕೆ ಎಸ್ಪಿ ಭೇಟಿ.