ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಶಿರಸಿ (Sirsi): ಶಿರಸಿ ಮಾರಿಕಾಂಬಾ ಪ್ರೌಢ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಸಹನಾ ವೆಂಕಟೇಶ ಮೊಗೇರ ರಾಜ್ಯಕ್ಕೆ 10ನೇ ಸ್ಥಾನ ಪಡೆದಿದ್ದಾಳೆ.
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625 ಕ್ಕೆ 616 ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾಳೆ. ಈಕೆ ಭಟ್ಕಳ ತಾಲೂಕಿನ ಮುಂಡಳ್ಳಿ ಮೂಲದ ವೆಂಕಟೇಶ ಮೊಗೇರ ಮತ್ತು ಉಷಾ ಉಗ್ರಾಣಕರ ಇವಳ ಪುತ್ರಿಯಾಗಿದ್ದಾಳೆ. ಸಹನಾಳ ಸಾಧನೆಯನ್ನು ಶ್ರೀ ಮಾರಿಕಾಂಬಾ ಶಾಲೆಯ ಶಿಕ್ಷಕ ವೃಂದದವರು ಪಾಲಕರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.
ಚಿಕ್ಕಂದಿನಿಂದಲೂ ಓದಿನ ಜೊತೆಗೆ ಸಂಗೀತದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಸಹನಾ ಪಠ್ಯತರ ಚಟುವಟಿಕೆಗಳಲ್ಲೂ ಸದಾ ಮುಂದಿದ್ದಳು. ಸಾಧನೆ ಮಾಡುವ ಮೂಲಕ ಮೊಗೇರ ಸಮಾಜಕ್ಕೆ ಕೀರ್ತಿ ತಂದಿದ್ದಾಳೆ. ಈಕೆಯ ಸಾಧನೆಗೆ ಕುಟುಂಬದವರು ಅಭಿನಂದನೆ ಸಲ್ಲಿಸಿದ್ದಾರೆ.
ಇದನ್ನು ಓದಿ: ಗೋವಾದ ಜಾತ್ರೆಯಲ್ಲಿ ಕಾಲ್ತುಳಿತ. ಆರಕ್ಕೂ ಹೆಚ್ಚು ಭಕ್ತರ ಸಾವು
ಕನ್ನಡಿಗರ ಮೇಲೆ ನಾಲಿಗೆ ಹರಿ ಬಿಟ್ಟ ಗಾಯಕ. ಸೋನು ನಿಗಮ್ ಮೇಲೆ ದೂರು ದಾಖಲು.
ಮಕ್ಕಳ ಬಗ್ಗೆ ಪಾಲಕರೇ ಎಚ್ಚರ. ಸಿಮೆಂಟ್ ಚೌಕಟ್ಟು ತೆಗೆಯಿತು ಮಗುವಿನ ಪ್ರಾಣ.