ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal) : ಭಟ್ಕಳ ನಗರದ(Bhatkal Town) ಅಭಿವೃದ್ಧಿಗೆ ಪೂರಕವಾಗುವ ಮಹತ್ವದ ನಿರ್ಧಾರವೊಂದನ್ನು ರಾಜ್ಯ ಸರ್ಕಾರ  (State Government) ತೆಗೆದುಕೊಂಡಿದೆ. ಇನ್ಮುಂದೆ ಭಟ್ಕಳ ಪುರಸಭೆಯು ನಗರಸಭೆಯಾಗಿ ಕಾರ್ಯನಿರ್ವಹಿಸಲಿದೆ

ಭಟ್ಕಳ ಪುರಸಭೆ, ಜಾಲಿ ಪಟ್ಟಣ ಪಂಚಾಯತಿ ಮತ್ತು ಹೆಬಳೆ ಗ್ರಾಮ ಪಂಚಾಯತಿಗಳನ್ನು ಸೇರ್ಪಡೆಗೊಳಿಸಿ, ಭಟ್ಕಳ ನಗರಸಭೆ (Municipal Council) ಆಗಿ ಮಾಡಲು  ರಾಜ್ಯ ಸಚಿವ ಸಂಪುಟ ಗುರುವಾರ ಅಂಗೀಕರಿಸಿದೆ.

ಇದರಿಂದ ಭಟ್ಕಳಕ್ಕೆ ಹೆಚ್ಚಿನ ಆರ್ಥಿಕ ನೆರವು, ಉತ್ತಮ ಮೂಲಸೌಕರ್ಯಗಳು ಮತ್ತು ಸ್ಥಳೀಯ ಆಡಳಿತದಲ್ಲಿ ಸ್ವತಂತ್ರತೆ ದೊರೆಯಲಿದೆ ಎಂದು ಭಾವಿಸಲಾಗಿದೆ. ಇದೊಂದು  ಐತಿಹಾಸಿಕ ಸಾಧನೆಯಾಗಿದ್ದು  ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಮತ್ತು ಪೌರಾಡಳಿತ ಸಚಿವ ರಹೀಮ್ ಖಾನ್ ಮಹತ್ವದ ಪಾತ್ರವಹಿಸಿದ್ದಾರೆ.

ಭಟ್ಕಳ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಬಂದರು-ಮೀನುಗಾರಿಕೆ ಸಚಿವರಾದ ಮಂಕಾಳ ವೈದ್ಯರು(Mankal Vaidya), ಈ ನಿರ್ಧಾರಕ್ಕಾಗಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಂಪುಟ ಸಹೋದ್ಯೋಗಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಸರ್ಕಾರದ  ನಿರ್ಧಾರದ ಬಗ್ಗೆ  ಭಟ್ಕಳದ ಜನತೆ ಖುಷಿಯಾಗಿದ್ದು ಸಚಿವ ಮಂಕಾಳ ವೈದ್ಯರನ್ನು ಅಭಿನಂದಿಸಿದ್ದಾರೆ.

ಇದನ್ನು ಓದಿ : ಮಹಿಳೆಯ ಇಂಪಾದ ಹಾಡಿಗೆ ಆತ್ಮೀಯತೆ ತೋರಿಸಿದ ಆನೆ.

ಯಲ್ಲಾಪುರದಲ್ಲಿ ನರೆಗಾ ಅಕ್ರಮ: ತನಿಖೆಗೆ ಬಂದ ತನಿಖಾಧಿಕಾರಿ ವಿರುದ್ಧವೇ ಭ್ರಷ್ಟಾಚಾರ ಆರೋಪ