ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal): ಕೆಲ ತಿಂಗಳ ಹಿಂದೆ ಬಂದ ಬೆದರಿಕೆಯ(Threat) ಆರೋಪಿಗಳನ್ನ ಪೊಲೀಸರು ಬಂಧಿಸಿದ ಸುದ್ದಿ ಮರೆಯಾಗುವ ಮುನ್ನ ಮತ್ತೆ ಭಟ್ಕಳ ತಹಶೀಲ್ದಾರ್ ಕಚೇರಿಗೆ(Bhatkal Tahasildar Office) ಬಾಂಬ್ ಸ್ಫೋಟದ ಬೆದರಿಕೆ ಸಂದೇಶ(Bomb Blast Threat Message) ಬಂದಿದೆ.
ಮಂಗಳವಾರ ಬೆಳಿಗ್ಗೆ ಸುಮಾರು 7.20ರ ವೇಳೆಗೆ ಗಯನಾ ರಮೇಶ್(Gaina Ramesh) ಹೆಸರಿನ ಮೇಲ್ ಖಾತೆಯಿಂದ ಭಟ್ಕಳ ತಹಶೀಲ್ದಾರ್ ಅವರಿಗೆ ಮೇಲ್(Mail) ಒಂದು ಬಂದಿದ್ದು ಕಚೇರಿಯಲ್ಲಿ ಶೀಘ್ರದಲ್ಲೇ ಪ್ರಬಲ ಬಾಂಬ್ ಸ್ಫೋಟ ಸಂಭವಿಸಲಿದೆ ಎಂದು ಬೆದರಿಕೆ ಸಂದೇಶ ರವಾನಿಸಿದ್ದಾರೆ, ಇದರಲ್ಲಿ ತಮಿಳರು ಮತ್ತು ಪಾಕಿಸ್ತಾನಿಗಳ ಸೇಡು ಎಂಬ ಉಲ್ಲೇಖಿಸಿದ್ದಾರೆ.
ಬೆದರಿಕೆ ಸಂದೇಶ ಲಭಿಸಿದ ಕೂಡಲೇ ತಹಶೀಲ್ದಾರ್ ಕಚೇರಿ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ತಕ್ಷಣವೇ ಭಟ್ಕಳ ಪೊಲೀಸರು(Bhatkal Police) ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ಕಾರವಾರದಿಂದ ಬಾಂಬ್ ನಿಷ್ಕ್ರೀಯ ದಳವನ್ನು(Bomb Squad) ಭಟ್ಕಳಕ್ಕೆ ಕರೆಸಿಕೊಳ್ಳಲಾಗಿದೆ.
ಪ್ರಾಥಮಿಕ ಪರಿಶೀಲನೆಯಲ್ಲಿ ಇದು ಹುಸಿ ಬಾಂಬ್ ಬೆದರಿಕೆ(Fake Bomb Threat) ಇರಬಹುದೆಂಬ ಶಂಕೆ ವ್ಯಕ್ತವಾಗಿದ್ದರೂ, ಯಾವುದೇ ಅಪಾಯ ಸಂಭವಿಸದಂತೆ ಕಚೇರಿ ಆವರಣ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ತೀವ್ರ ತಪಾಸಣೆ ನಡೆಸಲಾಗಿದೆ.
ಈ ಹಿಂದೆ ಭಟ್ಕಳ ಪೊಲೀಸ್ ಠಾಣೆಗೆ(Bhatkal Police Station) ಕೂಡ ಇದೇ ರೀತಿಯ ಬಾಂಬ್ ಬೆದರಿಕೆ ಬಂದಿದ್ದು, ಆ ಸಂದರ್ಭದಲ್ಲಿ ಆರೋಪಿಯನ್ನು ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದರು. ಇದೀಗ ಮತ್ತೆ ತಹಶೀಲ್ದಾರ್ ಕಚೇರಿಗೆ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ.
ಈ ಸಂಬಂಧ ಭಟ್ಕಳ ಪೊಲೀಸ್ ಠಾಣೆಯಲ್ಲಿ(Bhatkal Police Station) ಪ್ರಕರಣ ದಾಖಲಾಗಿದ್ದು, ಬೆದರಿಕೆ ಸಂದೇಶ ರವಾನಿಸಿದ ಮೇಲ್ ಖಾತೆಯ ಮೂಲ ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ. ಭಟ್ಕಳ ನಗರದಲ್ಲಿ ಪೊಲೀಸ್ ಕಟ್ಟೆಚ್ಚರ(Alert) ವಹಿಸಲಾಗಿದೆ.
ಇದನ್ನು ಓದಿ : ಕಾರವಾರದಲ್ಲಿ ಅಗ್ನಿ ಅವಘಢ. ಆಟೋರಿಕ್ಷಾ ಸ್ಪೋಟ. ಕಾರುಗಳು ಭಸ್ಮ
ನಡು ರಸ್ತೆಯಲ್ಲಿ ಪ್ರತ್ಯಕ್ಷವಾದ ಒಂಟಿಸಲಗ. ಅರ್ಧಗಂಟೆ ಸಂಚಾರ ಸ್ಥಗಿತ
ಜಿಲ್ಲಾ ಕಾರಾಗೃಹದಲ್ಲಿ ದಿಡೀರ್ ತಪಾಸಣೆ. ಕೈದಿಗಳ ಬಳಿ ಮತ್ತೆ ಮೊಬೈಲ್ ಪತ್ತೆ.
