ದಾಂಡೇಲಿ(DANDELI) : ಕೈಗಾರಿಕೆ ನಗರ ದಾಂಡೇಲಿಯಲ್ಲಿ ಗಾಂಜಾ ಹಾವಳಿ ಜಾಸ್ತಿಯಾಗಿದೆ. ನಗರದ ಅಂಬೇವಾಡಿ(AMBEWADI) ರೈಲ್ವೆ ಸ್ಟೇಷನ್ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಅಕ್ರಮ ಗಾಂಜಾ ಮಾರಾಟ ಮಾಡಲೆತ್ನಿಸಿದ್ದ ಇಬ್ಬರು ಯುವಕರನ್ನು ಬಂಧಿಸಿದ್ದಾರೆ.

ಗಾಂಧಿನಗರದ ನಿವಾಸಿ ಮಹೇಶ ಕೋಟಿ ಹಾಗೂ ಟೌನಶಿಪ್ ನಿವಾಸಿ ಅಮನ್‌ ತಹಶೀಲ್ದಾ‌ರ್ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲೆತ್ನಿಸುತ್ತಿದ್ದ ಆರೋಪಿಗಳು.

ಖಚಿತ ಮಾಹಿತಿಯಡಿ ನಗರ ಠಾಣೆಯ ಪೊಲೀಸರು ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ 50 ಸಾವಿರ ರೂ. ಮೌಲ್ಯದ 1 ಕೆಜಿ 216 ಗ್ರಾಂ ತೂಕದ ಗಾಂಜಾ ಹಾಗೂ  ಕೃತ್ಯಕ್ಕೆ ಬಳಸಲಾದ ದ್ವಿಚಕ್ರ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.  ದಾಂಡೇಲಿ ನಗರ ಠಾಣೆಯಲ್ಲಿ (DANDELI TOWN STATION) ಪ್ರಕರಣನ್ನು ದಾಖಲಿಸಿ ಮುಂದಿನ ಕ್ರಮವನ್ನು ಕೈಗೊಳ್ಳಲಾಗಿದೆ.

ಇದನ್ನು ಓದಿ : ಆಕಾಶದಿಂದ ವಿಪತ್ತಿದೆ: ಕೋಡಿಮಠ ಶ್ರೀ ಭವಿಷ್ಯ

ಹಾಲು ಕದ್ದ ಪೊಲೀಸ್. ದೃಶ್ಯ ಸೆರೆ