ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal) : ಯಾವುದೇ ಅಧಿಕೃತ ಪರವಾನಗಿ ಇಲ್ಲದೆ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು ಆರು ಲಕ್ಷ ರೂ. ಮೌಲ್ಯದ ಎರಡು ಕೋಣಗಳನ್ನು() ಭಟ್ಕಳ ಗ್ರಾಮೀಣ ಠಾಣೆ(Bhatkal Rural Station) ಪೊಲೀಸರು ರಕ್ಷಣೆ ಮಾಡಿದ್ದಾರೆ.
ಪ್ರಕರಣದಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಭಟ್ಕಳದ ಬಂದರ್ ರೋಡ್ 3ನೇ ಕ್ರಾಸ್ ನಿವಾಸಿ, ಬಟ್ಟೆ ವ್ಯಾಪಾರಿ ಸರೋಶ್ ಹುಸೇನ್ ಅಸ್ಲಂ ಶಾಬಂದ್ರಿ (37, ಬೆಂಗಳೂರು ಸಿಂಗಸಂದ್ರ ಲೇಔಟ್ನ ಷಣ್ಮುಖ ಕೆಎಸ್ ಬಂಧಿತರಾಗಿದ್ದಾರೆ.
ಕೇರಳದ ಮಲಪ್ಪುರಂನಿಂದ ಭಟ್ಕಳಕ್ಕೆ(Keral malappuram to Bhatkal) ‘KA-01/AN-5893’ ನೋಂದಣಿ ಸಂಖ್ಯೆಯ ವಾಹನದಲ್ಲಿ ಎರಡು ಕೋಣಗಳನ್ನು ತರಲಾಗುತ್ತಿತ್ತು. ಆದರೆ ಯಾವುದೇ ಪರವಾನಗಿ ಇಲ್ಲದೇ ಕಸಾಯಿಖಾನೆಗೆ ಕದ್ದುಮುಚ್ಚಿ ಸಾಗಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ(Bhatkal Rural Station) ನಿರೀಕ್ಷಕ ವೆಂಕಟೇಶ್ ಮುರನಾಳ್ ಸಿಬ್ಬಂದಿಯೊಂದಿಗೆ ದಿಢೀರ್ ದಾಳಿ ನಡೆಸಿ ಜಾನುವಾರುಗಳನ್ನು ಹಾಗೂ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ. ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನು ಓದಿ : ಕೆಎಸ್ಆರ್ಟಿಸಿ ಬಸ್–ಓಮ್ನಿ ನಡುವೆ ಭೀಕರ ಅಪಘಾತ ಡಿಕ್ಕಿ. ಚಾಲಕ ಸ್ಥಳದಲ್ಲೇ ಸಾವು.
ಕಾರವಾರದಲ್ಲಿ ಸತ್ಯಸಾಯಿಸೇವಾ ಸಂಸ್ಥೆ ಆಯೋಜಿಸಿದ ಏಕತಾ ಓಟ ಮತ್ತು ಸೈಕಲ್ ಸವಾರಿಯಲ್ಲಿ ಪಾಲ್ಗೊಂಡ ಸಾವಿರಾರು ಮಂದಿ.
ಭೀಕರ ಅಪಘಾತ — ಮೂವರು ಸಬ್ ಇನ್ಸಪೆಕ್ಟರ್ ಗಳು ಸ್ಥಳದಲ್ಲೇ ಸಾವು, ಇಬ್ಬರಿಗೆ ಗಂಭೀರ ಗಾಯ
