ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ನಗರದ ಬಸ್ ನಿಲ್ದಾಣದ ಮುಂಬದಿಯ ಅಂಗಡಿಯೊಂದರಲ್ಲಿ ಯುವಕನೋರ್ವ ಮೊಬೈಲ್ ಕದ್ದಿದ್ದಾನೆ(Mobile Theft).
ಸೋಮವಾರ ರಾತ್ರಿ ಸುಮಾರು 7.23ರ ಸಂದರ್ಭದಲ್ಲಿ ಗ್ರಾಹಕರ ವೇಷದಲ್ಲಿ ಬಂದಿದ್ದ ವ್ಯಕ್ತಿಯೋರ್ವ ಕೌಂಟರ್ ಮೇಲೆ ಇಟ್ಟಿದ್ದ ಮೊಬೈಲ್ ಫೋನ್‌ನ್ನು ಕ್ಷಣಾರ್ಧದಲ್ಲೇ ಎತ್ತಿಕೊಂಡು ಜೇಬಿನಲ್ಲಿ ಹಾಕಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ.
ಯುವಕ ಮೊಬೈಲ್ ಕಳ್ಳತನದ(Mobile Theft) ದೃಶ್ಯ ಸಿಸಿಟಿವಿಯಲ್ಲಿ(CCTV) ಸೆರೆಯಾಗಿದೆ. ಕಳ್ಳತನದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ(Social Media) ವೈರಲ್ ಅಗುತ್ತಿದ್ದು, ಕಳ್ಳನ ಗುರುತು ಪತ್ತೆಯಾದಲ್ಲಿ ಮಾಹಿತಿ ನೀಡುವಂತೆ ಅಂಗಡಿ ಮಾಲೀಕರು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ. ಘಟನೆಯಿಂದ ಕಾರವಾರ ಪೊಲೀಸರು(Karwar Police) ಸ್ಥಳಕ್ಕೆ ತೆರಳಿ ಮಾಹಿತಿ ಪಡೆದಿದ್ದಾರೆ.
ಇದನ್ನು ಓದಿ : ಕಾರವಾರದಲ್ಲಿ ದೇವಾಲಯ ಕಳ್ಳತನ. ಪೊಲೀಸರಿಂದ ತನಿಖೆ
ಸ್ಕೂಟಿಗೆ ಟಿಪ್ಪರ್ ಡಿಕ್ಕಿ: ಮಹಿಳೆ ಸ್ಥಳದಲ್ಲಿ ಸಾವು. ಇಬ್ಬರಿಗೆ ಗಾಯ.