ಕೊಪ್ಪಳ(KOPPAL) : ರಾತ್ರಿ ಡ್ಯೂಟಿ ವೇಳೆ ಹಾಲು ಕದ್ದ ಪೊಲೀಸ್ ಸಿಬ್ಬಂದಿಯೊಬ್ಬರ ವಿಡಿಯೋ ವೈರಲ್ ಆಗುತ್ತಿದೆ.
ಕೊಪ್ಪಳ ನಗರದ ಕಿತ್ತೂರು ರಾಣಿ ಚೆನ್ನಮ್ಮ (KITTURU RANI CHENNAMMA) ವೃತ್ತದ ಬಳಿ ಹಾಲಿನ ಡೈರಿ ಬಳಿ ಪೊಲೀಸನ ಕೈಚಳಕ ಸಿಸಿಟಿವಿ(CCTV)ಯಲ್ಲಿ ಸೆರೆಯಾಗಿದೆ. ಪೊಲೀಸ್ ಪೇದೆ ಶಿವಾನಂದ ಸಜ್ಜನ್ ಹಾಲು ಕಳ್ಳತನ ಮಾಡಿದವರು. ಡಿವೈಎಸ್ಪಿ ಕಚೇರಿಯಲ್ಲಿ ಪೇದೆಯಾಗಿರುವ ಶಿವಾನಂದ ಸಜ್ಜನ್ ಅಗಸ್ಟ್ 29 ರಂದು ರಾತ್ರಿ ಕರ್ತವ್ಯದ ವೇಳೆ ಬಾಕ್ಸ್ ನಿಂದ ಹಾಲು ಏಗರಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಅಂದು ರಾತ್ರಿ ಬೈಕ್ ಮೂಲಕ ಬಂದಿದ್ದ ಶಿವಾನಂದ, ಹಾಲಿನ ಡೈರಿ ಮುಂದೆ ಇಟ್ಟಿದ್ದ ಟ್ರೇ ನಿಂದ ಹಾಲು(MILK) ಕಳ್ಳತನ ಮಾಡಿದ್ದಾರೆ. ಸಿಸಿ ಟಿವಿ ಇರುವುದನ್ನು ಗಮನಿಸಿಯೂ ಹಾಲು ಕದ್ದಿರೋದು ಯಾಕೆ ಎಂಬ ಪ್ರಶ್ನೆ ಉದ್ಭವವಾಗಿದೆ. ರಕ್ಷಕರೇ ಭಕ್ಷಕರಾದಾಗ ಇನ್ನೂ ಕಾಯ್ವರು ಯಾರು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದ್ದು, ಈ ಘಟನೆಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ : ಗಣೇಶ ವಿಸರ್ಜನೆ ವೇಳೆ ಕೊಚ್ಚಿ ಹೋಗುತ್ತಿದ್ದ ಬಾಲಕನ ರಕ್ಷಣೆ