ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಅಂಕೋಲಾ(Ankola) : ಮುಖ್ಯಮಂತ್ರಿ ಹುದ್ದೆ ನಿರೀಕ್ಷೆಯಲ್ಲಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್(Deputy Chief Minister D K Shuvakumar) ಇದೀಗ ಟೆಂಪಲ್ ರನ್(Temple Run) ಮುಂದುವರಿಸಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ‌ಆಂದ್ಲೆ ಗ್ರಾಮದ ಶ್ರೀ ಜಗದೀಶ್ವರಿ ಅಮ್ಮನವರ(Andle Village Sri Jagadeeshwari Amma) ದೇವಾಲಯಕ್ಕೆ ಶುಕ್ರವಾರ ಆಗಮಿಸುತ್ತಿದ್ದಾರೆ.

ಅಮವಾಸ್ಯೆಯ ದಿನದಂದು(Smavasye Day) ತಮ್ಮ ಕಷ್ಟಗಳು ಹಾಗೂ ಅಡೆತಡೆಗಳ ನಿವಾರಣೆಗಾಗಿ ಡಿಕೆಶಿ ಎಳ್ಳು ಅಮವಾಸ್ಯೆ ಪೂಜೆ ಸಲ್ಲಿಸಲಿದ್ದಾರೆ.  ಒಂದು ತಾಸಿನವರೆಗೆ ದೇವಾಲಯದಲ್ಲಿದ್ದು ವಿಶೇಷ ಪ್ರಾರ್ಥನೆಯನ್ನ(Special Prayer) ಅವರು ಮಾಡಲಿದ್ದಾರೆ.

2019ರಲ್ಲಿ ಅಕ್ರಮ ಹಣ ಸಂಬಂಧ ಶಿವಕುಮಾರ್ ಇಡಿ‌(ED) ಬಂಧನದಿಂದ ಮುಕ್ತರಾದಾಗ ಶ್ರೀ ಜಗದೀಶ್ವರಿ ದೇವಾಲಯಕ್ಕೆ ಆಗಮಿಸಿದ್ದರು. ಕಾರಣ ಬಂಧನ ಸಮಯದಲ್ಲಿ ಅವರ ಪತ್ನಿ ಹಾಗೂ ತಾಯಿ ಈ ದೇವಾಲಯಕ್ಕೆ ಬಂದು ಬೇಡಿಕೊಂಡಿದ್ದರು. ಆಗ ದರ್ಶನದಲ್ಲಿ ಇನ್ನು ಒಂಬತ್ತು ದಿನದೊಳಗೆ ಬಿಡುಗಡೆಯಾಗುವ ಅಭಯ ಸಿಕ್ಕಿತ್ತು. ಅದರಂತೆ ಡಿ ಕೆ ಶಿವಕುಮಾರ್ ಬಿಡುಗಡೆ(Released) ಹೊಂದಿದ್ದರು. ಹೀಗಾಗಿ ಅವರು ಮತ್ತೆ ಅಮ್ಮನವರ ದೇವಾಲಯಕ್ಕೆ ಆಗಮಿಸುತ್ತಿದ್ದಾರೆ.

ಕಳೆದ ಒಂದುವರೆ ತಿಂಗಳಿಂದ ಮುಖ್ಯಮಂತ್ರಿ ‌ಸ್ಥಾನಕ್ಕೆ(Chief Minister) ಡಿಕೆಶಿ ಕಸರತ್ತು ನಡೆಸುತ್ತಿದ್ದಾರೆ. ಹೈಕಮಾಂಡ್(Hi command) ಇದುವರೆಗೆ ಸ್ಪಷ್ಟ ನಿಲುವನ್ನ ತೆಗೆದುಕೊಂಡಿಲ್ಲ ಹೀಗಾಗಿ ಡಿಕೆಶಿ ದೇವರ ಮೊರೆ ಹೋಗುತ್ತಿದ್ದಾರೆ. ದೇವರು ಎಲ್ಲ ಅಡೆತಡೆಗಳನ್ನ ನಿವಾರಿಸಲಿ ಎಂದು ಅವರು ಬೇಡಿಕೊಳ್ಳುತ್ತಿದ್ದಾರೆ.

ಇದನ್ನು ಓದಿ : ಕಾರವಾರ ಕಡಲ ತೀರದಲ್ಲಿ ಅನುಮಾನಾಸ್ಪದ ಹಕ್ಕಿ. ಫಾರೆನ್ಸಿಕ್ ಪರೀಕ್ಷೆಗೆ ರವಾನೆಯಾದ ಡಿವೈಸ್.

ಕರ್ತವ್ಯ ನಿರತ ಪೊಲೀಸ್ ಅಧಿಕಾರಿಯ ಚಿನ್ನದ ಸರ ಕಳ್ಳತನ.