ಕಾರವಾರ :  ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಅಂಕೋಲಾ ತಾಲೂಕಿನ ಶಿರೂರು ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ.

ಮಧ್ಯಾಹ್ನ 2-15 ಗಂಟೆಗೆ ಭೂ ಕುಸಿತ ಘಟನಾ ಪ್ರದೇಶಕ್ಕೆ ಭೇಟಿ ನೀಡಲಿರುವ ಸಿಎಂ ಸ್ಥಳ ಪರಿಶೀಲನೆ ನಡೆಸಲಿದ್ದಾರೆ. ಮತ್ತು ಕಾರ್ಯಾಚರಣೆಯನ್ನ ಖುದ್ದು ನೋಡಲಿದ್ದಾರೆ.

ಮಧ್ಯಾಹ್ನ 4 ಗಂಟೆ ಸುಮಾರಿಗೆ  ಕಾರವಾರದಲ್ಲಿ ಪ್ರವಾಹ ಮುಂಜಾಗ್ರತೆ ಸಂಬಂಧ ಅಧಿಕಾರಿಗಳ ಸಭೆ ನಡೆಸುವರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಸಹ ಉಳುವರೆ ಗ್ರಾಮಕ್ಕೆ  ಭೇಟಿ ನೀಡಿ ಸಂತ್ರಸ್ತರ ಅಹವಾಲು ಸ್ವೀಕರಿಸಲಿದ್ದಾರೆ. ಇವರ ಜೊತೆ ಬಿಜೆಪಿಯ ಶಾಸಕರು, ಮುಖಂಡರು ಸಾಥ್ ನೀಡಲಿದ್ದಾರೆ.