ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ದಾಂಡೇಲಿ(Dandeli) :  ನಗರದಲ್ಲಿ ಕಾಣೆಯಾಗಿದ್ದ ಎಂದು ಆತಂಕ ಹುಟ್ಟಿಸಿದ್ದ ನಾಲ್ಕು ವರ್ಷದ ಬಾಲಕನೋರ್ವ(child)  ಕೊನೆಗೆ ಮನೆಯಲ್ಲೇ ಸುರಕ್ಷಿತವಾಗಿ ಪತ್ತೆಯಾಗಿರುವ ಘಟನೆ ದಾಂಡೇಲಿಯಲ್ಲಿ(Dandeli) ನಡೆದಿದೆ.

ಲಮಾಣಿ ಚಾಳ ಪ್ರದೇಶದ ಅಜಾನ್ ಮಹ್ಮದ್ ಯಾಸಿನ್ ಹೆಬ್ಬಳಿ(4) ಎಂಬ ಬಾಲಕ ಶುಕ್ರವಾರ ಬೆಳಿಗ್ಗೆ ಸಂಬಂಧಿಕರ ಮನೆಗೆ ಹೋಗಿ ಬರುತ್ತೇನೆ ಎಂದು ಹೋಗಿದ್ದ. ಮನೆಯಲ್ಲಿ ತನಗೆ ಔಷಧಿ(Medicine) ಕುಡಿಸುತ್ತಾರೆಂದ ಹೋಗಿದ್ದ ಎಂದು ಕುಟುಂಬಸ್ಥರು ಹೇಳಿದ್ದರು. ಬಾಲಕ ಕಾಣೆಯಾಗಿರುವ(Boy Missing) ಸುದ್ದಿ ಓಣಿಯಲ್ಲೇ ಅಲ್ಲದೆ ನಗರದೆಲ್ಲೆಡೆ ಕಾಳ್ಗಿಚ್ವಿನಂತೆ ಹರಡಿತ್ತು.

ಬಾಲಕನ ಪತ್ತೆಗಾಗಿ ಸ್ಥಳೀಯ ಪೊಲೀಸ್ ಠಾಣೆಗೆ(Police Station) ಮಾಹಿತಿ ನೀಡಲಾಗಿದ್ದು, ಹಳಿಯಾಳ(Haliyal) ಮತ್ತು ಜೊಯಿಡಾ ಪೊಲೀಸ್ ಠಾಣೆಗಳಿಗೂ(Joida Police Station) ಎಚ್ಚರಿಕೆ ರವಾನಿಸಲಾಗಿತ್ತು. ನಗರದ ಹಲವು ಪ್ರಮುಖ ಕಡೆಗಳಲ್ಲಿ ಚೆಕ್ ಪೋಸ್ಟ್‌ಗಳಲ್ಲೂ(Check Post) ಕಣ್ಗಾವಲು ಹೆಚ್ಚಿಸಲಾಗಿತ್ತು.

ಬಾಲಕ ಕಾಣೆಯಾಗಿದ್ದರಿಂದ ಕುಟುಂಬಸ್ಥರು ಹಾಗೂ ನೆರೆಹೊರೆಯವರು ಆತಂಕದಲ್ಲಿ ಹುಡುಕಾಟ(Search) ನಡೆಸುತ್ತಿದ್ದರು. ಎಲ್ಲೆಡೆ ಬಾಲಕನಿಗಾಗಿ ಶೋಧ ಕಾರ್ಯ ಮುಂದುವರಿದಿತ್ತು. ಆದರೆ ಸುಮಾರು ನಾಲ್ಕು ಗಂಟೆಗಳ ನಂತರ ಮನೆಯನ್ನೇ ಮತ್ತೆ ಪರಿಶೀಲಿಸಿದಾಗ ಬಾಲಕ ಮನೆಯ ಮೇಲ್ಮಹಡಿಯ ಮೆಟ್ಟಿಲುಗಳ ಕೆಳಭಾಗದಲ್ಲಿ ಮಲಗಿರುವುದು ಕಂಡುಬಂದಿದೆ.

ಬಾಲಕ ಸುರಕ್ಷಿತವಾಗಿ ಪತ್ತೆಯಾಗುತ್ತಿದ್ದಂತೆ ಕುಟುಂಬಸ್ಥರು ಹಾಗೂ ನೆರೆಹೊರೆಯವರು ನಿರಾಳತೆ ಅನುಭವಿಸಿದರು. ಸುಮಾರು ನಾಲ್ಕೈದು ಗಂಟೆಗಳ ಕಾಲ ಬಾಲಕ ಕಾಣೆಯಾಗಿರುವುದರಿಂದ ನಗರದಲ್ಲಿ ಸಾಕಷ್ಟು ಗೊಂದಲ ಉಂಟಾಗಿತ್ತು. ಬಾಲಕ ಸುರಕ್ಷಿತವಾಗಿ ಪೋಷಕರಿಗೆ ಸಿಕ್ಕಿದ್ದರಿಂದ ಎಲ್ಲರೂ ಸಂತೋಷ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ : ರೈಲಿನಲ್ಲಿ ನ್ಯಾಯಾಧೀಶರ ಪತ್ನಿ ಮೃತ ದೇಹ ಪತ್ತೆ.

ಶಾಸಕ ಸೈಲ್ ರಾಜೀನಾಮೆ ವಾಪಾಸ್. ಕಾರವಾರದಲ್ಲಿ ಸೂಪರ್ ಸ್ಪೆಷಲಿಟಿ ಆಸ್ಪತ್ರೆ ಘೋಷಣೆ ಮಾಡಿದ ಸಿಎಂ ಸಿದ್ದರಾಮಯ್ಯ.

ಖ್ಯಾತ ಈಜು ಪಟು, ಚಿತ್ರ ಕಲಾವಿದ ಮೋಹನ ತಾಂಡೇಲ ವಿಧಿವಶ.