ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಯಲ್ಲಾಪುರ(Yallapur) : ತಾಲೂಕಿನ ಕೆಳಾಸೆ(Kelase) ಸಮೀಪದ ಕೈಗಡಿ ಹೊಳೆಯಲ್ಲಿ(Kaigadi River) ನೀರುಪಾಲಾಗಿದ್ದ ಯುವಕ ಶವವಾಗಿ ಪತ್ತೆಯಾಗಿದ್ದಾನೆ.
ಯಲ್ಲಾಪುರ(Yallapur) ತಾಲೂಕಿನ ಸಬಗೇರಿಯ(Sabageri) ಸಾಗರ್ ದೇವಾಡಿಗ ಮೃತ ದುರ್ದೈವಿ. ಸಾಗರ್ ತನ್ನ ಸ್ನೇಹಿತರೊಂದಿಗೆ ಬರ್ತ್ ಡೇ ಪಾರ್ಟಿಗೆಂದು(Birthday Party) ಕೆಳಾಸೆ ಬಳಿ ಹೋಗಿದ್ದ ಎನ್ನಲಾಗಿದೆ. ಈ ವೇಳೆ ನೀರಲ್ಲಿ ಮುಳುಗಿ ನಾಪತ್ತೆಯಾಗಿದ್ದ, ಇಂದು ಶವವಾಗಿ ಪತ್ತೆಯಾಗಿದೆ.
ಕೈಗಡಿ ನಿವಾಸಿಗಳಾದ ಗಣಪ ಸಿದ್ದಿ, ರಾಮ ಸಿದ್ದಿ, ವೆಂಕ ಸಿದ್ದಿ ಹಾಗೂ ನಾರಾಯಣ ಸಿದ್ದಿ ನದಿಯಲ್ಲಿ ಶೋಧ ನಡೆಸಿದ್ದು ಶವ ಪತ್ತೆ ಮಾಡಿದ್ದಾರೆ.
ಶೋಧಕಾರ್ಯದಲ್ಲಿ ಪೊಲೀಸರು(Policr), ಅಗ್ನಿಶಾಮಕ ದಳದ(Fire Brigade) ಸಿಬ್ಬಂದಿಗಳು ಭಾಗವಹಿಸಿದ್ದರು. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ(Ankola Police Station) ಪ್ರಕರಣ ದಾಖಲಾಗಿದೆ.
ಇದನ್ನು ಓದಿ : ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆದ ಕಾಂತಾರ 1. ಪ್ರಾದೇಶಿಕ ಸಿನೆಮಾ ಸಾರ್ವತ್ರಿಕವಾಗಿದ್ದಕ್ಕೆ ರಿಷಬ್ ಶೆಟ್ಟಿ ಹರ್ಷ.
ಭಟ್ಕಳ ಮೂಲದ ಆರ್ ಐ ನಾಪತ್ತೆ. ಕುಮಟಾ ಪುರಸಭೆ ಮುಖ್ಯಾಧಿಕಾರಿ ವಿರುದ್ದ ಸಿಬ್ಬಂದಿಗಳಿಂದ ಆಕ್ರೋಶ.
ಶಾಲಾ ಆವರಣದಲ್ಲಿ ವಾಮಾಚಾರ. ಯುವತಿಯಿಂದ ಕೃತ್ಯ. ಎಸ್ಕೇಪ್ ಆಗಲು ಪ್ರಯತ್ನ.