ಜೋಯಿಡಾ(Joida) :   ಜಿಂಕೆ ಬೇಟೆಯಾಡಿ(Deer Hunting) ಮಾಂಸ ಮತ್ತು ಚರ್ಮವನ್ನು ಬೇಯಿಸುತ್ತಿದ್ದ ಸಂದರ್ಭದಲ್ಲಿ ಗುಂದ ವಲಯದ ಅರಣ್ಯಾಧಿಕಾರಿಗಳು(Gunda Range Forest) ದಾಳಿ ನಡೆಸಿ ಆರೋಪಿಗಳಿಗೆ ಹೆಡೆಮುರಿ ಕಟ್ಟಿದ ಘಟನೆ ತಾಲೂಕಿನ ಕಾಳಿ ಹುಲಿ ಸಂರಕ್ಷಿತ ಪ್ರದೇಶದ(Kali Tiger Reserve Forest) ಗುಂದ ಅರಣ್ಯದ ಯರಮುಖ ಭಾಗದಲ್ಲಿ ನಡೆದಿದೆ.

   ನಂದಿಗದ್ದಾ ಗ್ರಾಮ ಪಂಚಾಯತ (Nandigadda Grama Panchayat) ವ್ಯಾಪ್ತಿಯ ಯರಮುಖ ನಿವಾಸಿ ನಾರಾಯಣ ದಬ್ಗಾರ, ಮಹದೇವ ದಬ್ಗಾರ, ಅನಂತ ಎಲ್ಲೆಕರ, ದೀಪಕ ವಸಂತ ನಾಯ್ಕ ಆರೋಪಿಗಳು. ನಾಲ್ವರು  ಜಿಂಕೆ ಬೇಟೆಯಾಡಿ ಅದರ ಮಾಂಸವನ್ನು ತಮ್ಮ ಮನೆಯ ಶೆಡ್ಡಿನಲ್ಲಿ ಬೇಯಿಸಿ ತಿನ್ನುವ ಸಂದರ್ಭದಲ್ಲಿ ಗುಂದ ವಲಯ ಅರಣ್ಯಾಧಿಕಾರಿ ನೀಲಕಂಠ ದೇಸಾಯಿ ಮತ್ತು ಸಿಬ್ಬಂದಿಗಳು ಅವರನ್ನು ‌ಸೆರೆಹಿಡಿದಿದ್ದಾರೆ.  ಈ ಸಂದರ್ಭದಲ್ಲಿ ನಾರಾಯಣ ದಬ್ಗಾರ ಮತ್ತು ದೀಪಕ ನಾಯ್ಕ ಎಸ್ಕೇಪ್ ಆಗಿದ್ದಾರೆ. ನಾಪತ್ತೆಯಾದವರಿಗಾಗಿ  ಅಧಿಕಾರಿಗಳು  ಕಾಡಿನಲ್ಲಿ ಹುಡುಕಾಟ ನಡೆಸಿದ್ದಾರೆ.

ದಾಳಿ ಸಂದರ್ಭದಲ್ಲಿ 4.40ಕೆ.ಜಿ ಜಿಂಕೆ ಮಾಂಸ, ಬಕೆಟ್ , ಮತ್ತು ಅಡಿಕೆ ಕಂಬಿಯನ್ನು ವಶಪಡಿಸಿಕೊಳ್ಳಲಾಗಿದೆ. ಮಹದೇವ ದಬ್ಗಾರ ಮತ್ತು ಅನಂತ ಎಲ್ಲೆಕರ ಅವರ ಮೇಲೆ  ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

  ಕಾರ್ಯಾಚರಣೆಯಲ್ಲಿ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ನಿಲೇಶ ಸಿಂಧೆ, ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ಎಮ್ ಎಸ್ ಕಳ್ಳಿಮಠ ಅವರ ಮಾರ್ಗದರ್ಶನದಲ್ಲಿ ಗುಂದ ವಲಯ(Gunda Range) ಅರಣ್ಯಾಧಿಕಾರಿ ನೀಲಕಂಠ ದೇಸಾಯಿ, ಫಣಸೋಲಿ ವಲಯ(Pansoli Range) ಅರಣ್ಯಾಧಿಕಾರಿ ರವಿಕಿರಣ್ ಸಂಪಗಾವಿ, ಕುಳಗಿ ವಲಯ(Kulagi Range) ಅರಣ್ಯಾಧಿಕಾರಿ ಮಾಹಂತೇಶ ಪಾಟೀಲ್ , ಗುಂದ ವಲಯದ ಡಿ.ಆರ್ ಎಫ್ ಓ ಶರತ ಐಹೊಳೆ, ಸಿಬ್ಬಂದಿಗಳಾದ ಬಸವರಾಜ ಹಾವೇರಿ, ಮಂಜುನಾಥ ಜಾದವ್, ಕೃಷ್ಣ ಎಡಗೆ, ಇತರ ಅರಣ್ಯಇಲಾಖೆ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು‌.

ವನ್ಯ ಜೀವಿಗಳನ್ನ ರಾಜಾ ರೋಷವಾಗಿ ಬೇಟೆಯಾಡುತ್ತಿರುವುದು ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹೆಚ್ಚಾಗುತ್ತಿದೆ. ಕಾನೂನು ವ್ಯವಸ್ಥೆ ಸಡಿಲವಾಗಿದ್ದರಿಂದ ಈ ರೀತಿ ಬೇಟೆಯಾಡಿ ಜಾಮೀನು ಪಡೆದು ಹೊರ ಬರಬಹುದೆಂಬ ಭಾವನೆ ಇದೆ. ಹೀಗಾಗಿ ಕಾನೂನು ಬಿಗಿಯಾಗಬೇಕು ಎಂಬುದು ಪರಿಸರವಾದಿಗಳ ಹೇಳಿದ್ದಾರೆ. ಕಠಿಣ ಕಾನೂನ್ನ ಜಾರಿಗೆ ತರಬೇಕೆಂದು ಒತ್ತಾಯಿಸಿದ್ದಾರೆ.

ಇದನ್ನು ಓದಿ : ಅರೆಬೈಲ್ ಘಟ್ಟದಲ್ಲಿ ಲಾರಿ ಪಲ್ಟಿ. ಟ್ರಾಫಿಕ್ ಜಾಮ್

ಮಿಡಿಯುವ ಹೃದಯಕ್ಕೆ ಸ್ಪಂದಿಸಿದ ಕೇರಳ ಸಂಘ ಸಂಸ್ಥೆಗಳು

ಮಾಜಾಳಿ ಗೇಟಲ್ಲಿ ಚಾಲಕನಿಗೆ ಥಳಿತ. ರೋಧನೆ ವಿಡಿಯೋ ವೈರಲ್