ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಯಲ್ಲಾಪುರ (Yallapur) : ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ಪಟ್ಟಣದ(Yallapur Town) ಕಾಳಮ್ಮನಗರದಲ್ಲಿ ಸೋಮವಾರ ವಿವಾಹಿತ ಮಹಿಳೆಯೊಬ್ಬಳು(Married Women) ಇರಿತದಿಂದ ಮೃತಪಟ್ಟ ಘಟನೆ ವರದಿಯಾಗಿದೆ.
ಮೃತ ಮಹಿಳೆಯನ್ನು ರಂಜಿತಾ ಮಲ್ಲಪ್ಪ ಬನ್ಸೋಡೆ (31) ಎಂದು ಗುರುತಿಸಲಾಗಿದೆ. ಕಾಳಮ್ಮನಗರ ನಿವಾಸಿ(Kalammanagar Residency) ರಫಿಕ್ ಎಂಬಾತನೇ ಈ ಕೃತ್ಯ ಎಸಗಿ ಪರಾರಿಯಾಗಿದ್ದಾನೆ.
ಪ್ರಾಥಮಿಕ ಮಾಹಿತಿಯಂತೆ, ಮೃತ ಮಹಿಳೆಯ ಮೇಲೆ ಅರೋಪಿ ಪ್ರೀತಿ ಹೊಂದಿದ್ದ. ಮದುವೆ ಆಗೋಣ ಅಂತಾ ಟಾರ್ಚರ್ ನೀಡುತ್ತಿದ್ದ ಎನ್ನಲಾಗಿದೆ.. ಇಂದು ಮಧ್ಯಾಹ್ನ ರಂಜಿತಾ ಶಾಲೆಯಿಂದ ಮನೆಗೆ ಬರುತ್ತಿದ್ದ ವೇಳೆ ಅಡ್ಡಗಟ್ವಿದ್ದ ರಪಿಕ್ ಮದುವೆ ಆಗೋಣ ಎಂದು ಒತ್ತಾಯಿಸಿದ. ಆಕೆ ಬೇಡ ಎಂದಾಗ ಇಬ್ಬರ ನಡುವೆ ನಡೆದ ಕಲಹದ ವೇಳೆ ಆರೋಪಿ ಕತ್ತಿ ಇರಿದಿದ್ದಾನೆ. ಬಳಿಕ ಪರಾರಿಯಾಗಿದ್ದಾನೆ.
ಗಂಭೀರವಾಗಿ ಗಾಯಗೊಂಡಿದ್ದ ರಂಜಿತಾಳನ್ನು ಮನೆಯವರು ಹಾಗೂ ಸ್ಥಳೀಯರು ತಕ್ಷಣ ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ(Yallapur Government Hospital) ದಾಖಲಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಆಸ್ಪತ್ರೆಗೆ ರವಾನಿಸುವ ಮಾರ್ಗ ಮಧ್ಯೆ ಅವರು ಮೃತಪಟ್ಟಿದ್ದಾರೆ.
ಘಟನೆಯ ಮಾಹಿತಿ ಪಡೆದ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್(MLA Shivaram Hebbar) ಅವರು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು. ಯಲ್ಲಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೊಲೆಯಾದ ರಂಜಿತ್ ಈ ಹಿಂದೆ ಮದುವೆಯಾಗಿದ್ದು 10 ವರ್ಷದ ಮಗನಿದ್ದಾನೆ. ಗಂಡನಿಂದ ಡೈವೋರ್ಸ್ ಪಡೆದ ಮೇಲೆ ತಾಯಿ ಮನೆಯಲ್ಲಿದ್ದಳು.ಶಾಲೆಯಲ್ಲಿ ಬಿಸಿಯೂಟ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದಳು.
ಘಟನೆ ಸಂಬಂಧ ಯಲ್ಲಾಪುರ ಪೊಲೀಸರು(Yallapur Police) ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿ ರಫಿಕ್‌ಗಾಗಿ ಶೋಧ ನಡೆಸಿದ್ದಾರೆ.
ಇದನ್ನು ಓದಿ : ಭಟ್ಕಳದ ದುಬೈ ಮಾರ್ಕೆಟಲ್ಲಿ ಪೊಲೀಸರ ಕಾರ್ಯಾಚರಣೆ. ನಿಷೇಧಿತ ವಸ್ತುಗಳ ಜಪ್ತಿ. ಓರ್ವ ಆರೆಸ್ಟ್.
ಸೈಬರ್ ವಂಚಕರ ಕಪಿ ಮುಷ್ಠಿಗೆ ಸಿಲುಕಿದ ನಿವೃತ್ತ ಶಿಕ್ಷಕ. ಬರೋಬ್ಬರಿ 1.61 ಕೋಟಿ ರೂ. ವಂಚನೆ.
