ಭಟ್ಕಳ(BHATKAL) : ಲಂಚ ಸ್ವೀಕರಿಸುತ್ತಿರುವ ವೇಳೆ ಪುರಸಭೆ ಮುಖ್ಯಾಧಿಕಾರಿ(Chief Officer) ಲೋಕಾಯುಕ್ತ ಬಲೆಗೆ(Lokayukta Net) ಬಿದ್ದ ಘಟನೆ ನಡೆದಿದೆ.
ಭಟ್ಕಳ ಪುರಸಭೆ ಮುಖ್ಯಾಧಿಕಾರಿ(Bhatkal Chief 9officer) ನೀಲಕಂಠ ಮೇಸ್ತಾ ಲೋಕಾಯುಕ್ತ(Lokayukta) ಬಲೆಗೆ ಬಿದ್ದವರು. ಮೊಹ್ಮದ ಇದ್ರಿಸ್ ಮೋಹತೇಶಾಮ್ ಎನ್ನುವವರ ನೀಡಿದ ದೂರಿನ ಆಧಾರದ ಮೇಲೆ ಶುಕ್ರವಾರ(Friday) ಕಾರವಾರ ಲೋಕಾಯುಕ್ತ ತಂಡ ದಾಳಿ(Raid) ನಡೆಸಿದೆ.
ನೀಲಕಂಠ ಮೇಸ್ತಾ ಅವರು ಗುಳ್ಮಿಯಲ್ಲಿ ಒಳಚರಂಡಿ(UGD Connection) ಜೋಡಣೆಗೆ 3 ಲಕ್ಷ ಲಂಚ ಕೇಳಿದ್ದರು. ಈಗಾಗಲೇ 2 ಲಕ್ಷ ಹಣವನ್ನು ನೀಡಿದ್ದು . ಶುಕ್ರವಾರ 50 ಸಾವಿರ ಹಣ ನೀಡುವ ವೇಳೆ ದಾಳಿ ನಡೆಸಲಾಗಿದೆ
ಲೋಕಾಯುಕ್ತ ಎಸ್ಪಿ(Lokayukta SP) ಕುಮಾರ ಚಂದ್ರ ಹಾಗೂ ಪ್ರಭಾರಿ ಲೋಕಾಯುಕ್ತ ಡಿವೈಎಸ್ಪಿ ವಿನಾಯಕ ಬಿಲ್ಲವ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ಸದ್ಯ ಲೋಕಾಯುಕ್ತ ಅಧಿಕಾರಿಗಳು ಪುರಸಭೆ ಕಚೇರಿಯ ಮುಖ್ಯಾಧಿಕಾರಿ ನೀಲಕಂಠ ಮೇಸ್ತಾರನ್ನು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನು ಓದಿ : ಕಾರವಾರ ಮಹಿಳೆ ಸೇರಿ ಮೂವರ ಬಂಧನ
ಶಿರಸಿ ಯಲ್ಲಿ ಜಿಂಕೆ ಬೇಟೆಯಾಡಿದವರ ಬಂಧನ
ಭಟ್ಕಳದಲ್ಲಿ ರೈಲಿಗೆ ಅಡ್ಡ ಬಂದು ವ್ಯಕ್ತಿ ಸಾವು