ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ನವದೆಹಲಿ(Newdelhi) : ರಾಜ್ಯ ಸೇರಿದಂತೆ ದೇಶದ ಹಲವು ಕಡೆಗಳಲ್ಲಿ ಬಾರೀ ಮಳೆಯಾಗುತ್ತಿದೆ. ಈ ನಡುವೆ ಹವಾಮಾನ ಇಲಾಖೆ(Metrology Department) ಮಹತ್ವದ ಎಚ್ಚರಿಕೆ ನೀಡಿದ್ದು ಅಕ್ಟೋಬರ್ 28ಕ್ಕೆ ‘ಮೊಂಥ ಚಂಡಮಾರುತ'(Montha Cyclone) ಅಪ್ಪಳಿಸಲಿದೆ ಎಂದು ಸೂಚಿಸಿದೆ.
ಅಕ್ಟೋಬರ್ 28 ರಂದು 100 ಕಿ.ಮೀ. ವೇಗದಲ್ಲಿ ಆಂಧ್ರ ಪ್ರದೇಶ ಕರಾವಳಿ(Andrapradesh Coastal) ತೀರ ಪ್ರದೇಶಕ್ಕೆ ಚಂಡಮಾರುತ(Cyclone) ಅಪ್ಪಳಿಸಲಿದೆ. ಅತೀ ವೇಗದಲ್ಲಿ ಅಪ್ಪಳಿಸುವ ಕಾರಣ ಮಳೆ ಪ್ರಮಾಣವೂ ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ(IMD) ಎಚ್ಚರಿಸಿದೆ.
ಮೊಂಥ ಚಂಡಮಾರುತದಿಂದ ಒಡಿಶಾ(Odissa), ಆಂಧ್ರ ಪ್ರದೇಶ(Andrapradesh), ತಮಿಳು ರಾಜ್ಯಗಳ(Tamilu States) ಜೊತೆಗೆ ಪುದುಚೇರಿಯಲ್ಲೂ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ(Metrology Department) ತಿಳಿಸಿದೆ. ಪರಿಣಾಮ ಕರ್ನಾಟಕದ(Karnataka) ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಗಳ ಬಗ್ಗೆ ತಿಳಿಸಿದೆ.
ಇನ್ನೆರಡು ದಿನ ಕರ್ನಾಟಕದಲ್ಲಿ ಹೆಚ್ಚಿನ ಮಳೆ : ರಾಜ್ಯದ ಹಲವು ಕಡೆಗಳಲ್ಲಿ ಅಕ್ಟೋಬರ್ 27 ಹಾಗೂ 28ಕ್ಕೆ ಮಳೆ ಪ್ರಮಾಣ ಅಧಿಕವಾಗಲಿದೆ. ಈಗಾಗಲೇ ದಕ್ಷಿಣ ಕನ್ನಡ(South Canara), ಕೊಡಗು(Kodagu), ಉತ್ತರ ಕನ್ನಡ(Uttarakannada) ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಬೆಂಗಳೂರು(Bangalore) ಸೇರಿದಂತೆ ಕೆಲ ಜಿಲ್ಲೆಗಳಲ್ಲೂ ಮತ್ತೆ ಮಳೆ ಅಬ್ಬರಿಸಲಿದೆ.
ಆಂಧ್ರ ಪ್ರದೇಶ, ತಮಿಳುನಾಡು, ಒಡಿಶಾದಲ್ಲಿ ಮಳೆ ಹೆಚ್ಚಾಗುವ ಹಿನ್ನಲೆಯಲ್ಲಿ ಎನ್‌ಡಿಆರ್‌ಎಫ್(NDRF), ಎಸ್‌ಡಿಆರ್‌ಎಫ್(SDRF) ರಕ್ಷಣಾ ತಂಡಗಳು(Defence Team) ಕಾರ್ಯಾಚರಣೆಗೆ ಸಜ್ಜಾಗಿದೆ. ಈಗಾಗಲೇ ತಂಡಗಳನ್ನು ಈಗಾಗಲೇ ಕರಾವಳಿ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ.
ಇದನ್ನು ಓದಿ : ಈ ಶ್ರೀಗಂಧ ಸ್ಮಗ್ಲರ್ ಗಳಿಗೆ ಪುಷ್ಪಾ ಸಿನೇಮಾ ಪ್ರೇರಣೆ. ಪೊಲೀಸರಲ್ಲಿ ಲಾಕ್ ಆದ ನಾಲ್ವರು ಚೋರರು.
ದಿ. ಬಂಗಾರಪ್ಪ ಸಾಮಾಜಿಕ ನ್ಯಾಯದ ಪ್ರತಿಪಾದನೆಯ ಧೀಮಂತ ನಾಯಕ: ರವೀಂದ್ರ ನಾಯ್ಕ
ಮಣ್ಕುಳಿಯಿಂದ ಸ್ಯಾಂಡಲ್‌ವುಡ್‌ಗೆ ಯುವ ಪ್ರತಿಭೆ ಜಯ್ ಡಿ. ಭಟ್ಕಳ. ಅಕ್ಟೋಬರ್ 31ಕ್ಕೆ ಪ್ಯಾನ್ ಇಂಡಿಯಾ ಸಿನೇಮಾ.
ಬೈಕ್ ನಲ್ಲಿ ಪಟಾಕಿ ಸಿಡಿಸಿ ಸ್ಟಂಟ್. ಕಾರವಾರ ಟ್ರಾಫಿಕ್ ಪೊಲೀಸರಿಂದ ಯುವಕರಿಬ್ಬರು ವಶಕ್ಕೆ.

