ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ನಗರದಲ್ಲಿಕಳೆದ ಏಳು ದಿನಗಳಿಂದ ನಡೆಯುತ್ತಿರುವ ಕರಾವಳಿ ಉತ್ಸವಕ್ಕೆ(Karavali Utsav) ಭಾನುವಾರ ರಾಜ್ಯದ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್(DCM D K Shivkumar) ಆಗಮಿಸಲಿದ್ದಾರೆ.

ಡಿಸೆಂಬರ್ 28 ರಂದು ಸಂಜೆ 7 ಗಂಟೆಗೆ ಕಾರವಾರದ ರವೀಂದ್ರನಾಥ ಠಾಗೋರ್ ಕಡಲತೀರದಲ್ಲಿ(Rabimdranath Tagore Beach) ಆಯೋಜಿಸಿರುವ ಕರಾವಳಿ ಉತ್ಸವದ ಸಮಾರೋಪ ಸಮಾರಂಭದಲ್ಲಿ(Closing Ceremony) ಅವರು ಪಾಲ್ಗೊಳ್ಳಲಿದ್ದಾರೆ ಎಂದು ಅವರ ಆಪ್ತ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರಾವಳಿ ಉತ್ಸವದ ಆರಂಭದ ದಿನವೇ ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiha)  ಮತ್ತು ಉಪಮುಖ್ಯಮಂತ್ರಿಗಳು ಆಗಮಿಸುತ್ತಾರೆಂದು ಸಂಘಟಕರು ಹೇಳಿದ್ದರು. ಆದರೆ ಆರು ದಿನಗಳ ಕಾಲ ಸಿಎಂ ಡಿಸಿಎಂ ಬಂದಿರಲಿಲ್ಲ. ಕೊನೆಯ ದಿ‌ನ ಸಮಾರೋಪ ಕಾರ್ಯಕ್ರಮಕ್ಕೆ ಡಿಸಿಎಂ ಬರುತ್ತಿದ್ದಾರೆ. ಹೀಗಾಗಿ ಜಿಲ್ಲಾಡಳಿತ ಬರಮಾಡಿಕೊಳ್ಳಲು ಸಿದ್ಧತೆ ನಡೆಸಿವೆ.

ಡಿಸೆಂಬರ್ 19ರಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಗೋಕರ್ಣ ಮತ್ತು ‌ಅಂಕೋಲಾ ತಾಲೂಕಿನ ಅಂದ್ಲೆ ಶ್ರೀ ಜಗದೀಶ್ವರಿ ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸಿ ವಾಪಾಸ್ಸಾಗಿದ್ದರು.

ಇದನ್ನು ಓದಿ : ರಾಷ್ಟ್ರಪತಿ ಪ್ರವಾಸ : ಮೀನುಗಾರಿಕೆಗೆ ನಿರ್ಬಂಧ

ಉಸಿರು ಕಳೆದುಕೊಂಡ ಮಗಳ ಗುರುತಿಸಲಾಗದೆ ವಾಪಸ್ ಆದ ತಂದೆ.

ಬಟ್ಟೆ ಬದಲಿಸುವಾಗ ನರ್ಸ್ ಗಳ ಖಾಸಗಿ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ಆಸಾಮಿ. ಪೊಲೀಸರಿಂದ ಬಂಧನ