ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ದೆಹಲಿ(Delhi): ದೆಹಲಿಯ ಕೆಂಪು ಕೋಟೆ(delhi Red Port) ಬಳಿ ಇರುವ ಮೆಟ್ರೋ ನಿಲ್ದಾಣದ ಗೇಟ್ ನಂಬರ್ 1 ರ ಸಮೀಪ ಬಾರೀ ಪ್ರಮಾಣದ ಸ್ಪೋಟ(Blast) ಸಂಭವಿಸಿದೆ. ಪಾರ್ಕಿಂಗ್ನಲ್ಲಿ ನಿಲ್ಲಿಸಿದ್ದ ಮಾರುತಿ ಇಕೋ ವ್ಯಾನ್(Maruti Echo Van) ಸ್ಫೋಟವಾಗಿದ್ದು ಹತ್ತಕ್ಕೂ ಅಧಿಕ ಜನ ಸಾವನ್ನಪ್ಪಿದ್ದಾರೆ
ಸ್ಫೋಟದ ತೀವ್ರತೆಗೆ ಸ್ಥಳದಲ್ಲಿ ಓಡಾಡುತ್ತಿದ್ದ ಹಲವರ ದೇಹಗಳು ಛಿದ್ರ ಛಿದ್ರವಾಗಿವೆ. ಕಾರಿನ ಮೇಲೆ, ರಸ್ತೆಗಳ ಮೇಲೆ ಮೃತದೇಹಗಳು ರಕ್ತ ಸಿಕ್ತವಾಗಿ ಬಿದ್ದು ಭಯಾನಕ ಸನ್ನಿವೇಶ ಸೃಷ್ಟಿಸಿದೆ. ಈ ಸಂದರ್ಭದಲ್ಲಿ ನಿಂತಿರುವ ಹಲವು ವಾಹನಗಳಿಗೆ ಬೆಂಕಿಯ ಜ್ವಾಲೆ ವ್ಯಾಪಿಸಿದ್ದು, 9ಕ್ಕೂ ಅಧಿಕ ವಾಹನಗಳೂ ಸಹ ಹೊತ್ತಿ ಉರಿದು ಹೋಗಿವೆ.
ಸದ್ಯ ದೇಶದಾದ್ಯಂತ ಹೈಅಲರ್ಟ್(High Alert) ಘೋಷಿಸಲಾಗಿದೆ. ಸ್ಫೋಟ ಘಟನೆ ಹಿನ್ನಲೆಯಲ್ಲಿ ರಾಜಧಾನಿ ಬೆಂಗಳೂರು(Capital Bangalore) ಸೇರಿದಂತೆ ಜಿಲ್ಲಾ ಕೇಂದ್ರಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎಂ ಎಂ ಸಲೀಂ ಆದೇಶ ಹೊರಡಿಸಿದ್ದಾರೆ. ಬಂದರು(Port) , ಏರ್ಪೋರ್ಟ್(Airport), ರೈಲು ನಿಲ್ದಾಣ(Railway Station), ಬಸ್ ನಿಲ್ದಾಣಗಳು(Bus Stands), ಮಾರ್ಕೆಟ್(Market) ಸೇರಿದಂತೆ ಜನನಿಬಿಡ ಪ್ರದೇಶಗಳು, ಸೂಕ್ಷ್ಮ ಪ್ರದೇಶಗಳಲ್ಲಿ(Sensitive Area) ನಿಗಾವಹಿಸುವಂತೆ ಆದೇಶಿಸಲಾಗಿದೆ.
ಇದನ್ನು ಓದಿ : ಪೋಷಕರೇ ಮಕ್ಕಳಿಗೆ ಆಹಾರ ನೀಡುವ ಮೊದಲು ಎಚ್ಚರ! ಬಿಸ್ಕೇಟ್ ನಲ್ಲಿ ಹುಳು ಪತ್ತೆ.
ನವೆಂಬರ್ 28ರಂದು ಗೋಕರ್ಣ ಪರ್ತಗಾಳಿಗೆ ಪ್ರಧಾನಿ ನರೇಂದ್ರ ಮೋದಿ .ಶ್ರೀರಾಮನ ಕಂಚಿನ ಮೂರ್ತಿ ಅನಾವರಣ.
ರಾತ್ರಿ ರಸ್ತೆಯಲ್ಲಿ ಬೃಹತ್ ಕಾಡಾನೆ ಪ್ರತ್ಯಕ್ಷ. ವಾಹನ ಸವಾರರ ಎದೆಯಲ್ಲಿ ನಡುಕ.

