ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಣ್ಣೂರು (Kannuru): ಯು ಟ್ಯೂಬ್ ನೋಡಿ ಯುವತಿಯೋರ್ವಳು  ಸಂಪೂರ್ಣ ತೂಕ ಇಳಿಸಲು ಹೋಗಿ  ಪ್ರಾಣವನ್ನೇ ಕಳೆದುಕೊಂಡ ಘಟನೆ ಮಾಡಿದಿದೆ.

ಕೇರಳ ರಾಜ್ಯದ ಕಣ್ಣೂರಿನ ಕೂತುಪರಂ ಮೇರುವಂಬೈ ಮೂಲದ ಶ್ರೀನಂದ ಎಂಬಾಕೆ  ಅನೋರೆಕ್ಸಿಯಾ ನರ್ವೋಸಾದಿಂದ ಮೃತಪಟ್ಟಿದ್ದಾರೆ.  ಈಕೆ ಮಟ್ಟನ್ನೂರಿನ ಪಳಸ್ಸಿ ರಾಜಾ ಎನ್‌ಎಸ್‌ಎಸ್ ಕಾಲೇಜಿನಲ್ಲಿ ಪದವಿಪೂರ್ವ ವಿದ್ಯಾರ್ಥಿನಿಯಾಗಿ ವ್ಯಾಸಂಗ ಮಾಡುತ್ತಿದ್ದಳು. ತೂಕ ಕಡಿಮೆ ಮಾಡಲು ಯೂಟ್ಯೂಬ್(You Tube) ನೋಡುತ್ತಾ ಡಯಟ್ ಮಾಡುತ್ತಿದ್ದ ಶ್ರೀನಂದ, ಆಹಾರವನ್ನು ಸರಿಯಾಗಿ ಸೇವಿಸುತ್ತಿರಲಿಲ್ಲ. ಇದರಿಂದ ದಿನಕಳೆದಂತೆ ಆಕೆಯ ಆರೋಗ್ಯವು ಕ್ಷೀಣವಾಗಿದೆ.

ಇತ್ತೀಚೆಗೆ ಆರೋಗ್ಯ ಹದಗೆಟ್ಟ ಹಿನ್ನೆಲೆ ಶ್ರೀನಂದ ಅವರನ್ನು ತಲಸ್ಸೆರಿಯ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಆಕೆಯ ಸ್ಥಿತಿ ಗಂಭೀರವಾಗಿರುವುದರಿಂದ ಹೆಚ್ಚಿನ ಚಿಕಿತ್ಸೆಗೆ ಕೋಝಿಕ್ಕೋಡ್‌ನ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಿ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಲಾಯಿತು. ಆದರೆ, ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಇದನ್ನು ಓದಿ : ಕುಂಭ ಮೇಳದಲ್ಲಿ 30 ಕೋಟಿ ಗಳಿಸಿದ ನಾವಿಕ ಕುಟುಂಬಕ್ಕೆ ಟ್ಯಾಕ್ಸ್ ಸಂಕಷ್ಟ.

ಚಾಂಪಿಯನ್ಸ್ ಟ್ರೋಫಿ ಭಾರತದ ಮುಡಿಗೆ. ಭಟ್ಕಳದಲ್ಲಿ ವಿಜಯೋತ್ಸವ ವೇಳೆ ಅಭಿಮಾನಿಗಳನ್ನ ನಿಯಂತ್ರಿಸಲು ಹರಸಾಹಸ.

ಕಣ ಕಣದಲ್ಲಿ ಕೇಸರಿ. ಮೂವರು ನಟರಿಗೆ ಸಂಕಷ್ಟರೀ.

ಮಹಿಳೆಗೆ ಚುಡಾಯಿಸಲು ಮುಂದಾದ ಯುವಕರಿಗೆ ಧರ್ಮದೇಟು. ಬೈಕ್ ಬಿಟ್ಟು ಪರಾರಿ.