ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಬೆಳಗಾವಿ(Beoagavi) : ಧ್ವಜಾರೋಹಣದ ಸಂದರ್ಭದಲ್ಲಿ ಪರೇಡ್ ವೀಕ್ಷಣೆಗೆ ತೆರಳುತ್ತಿರುವ ವೇಳೆ ಜೀಪ್ ನ ಡಿಸೇಲ್ ಸೋರಿಕೆಯಾಗಿ(Diesel Leakage) ಆತಂಕ ಉಂಟಾದ ಘಟನೆ ಕುಂದಾನಗರಿ ಬೆಳಗಾವಿಯಲ್ಲಿ(Belagavi) ನಡೆದಿದೆ.
ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವ ಅದ್ಧೂರಿಯಾಗಿ ಜರುಗಿತು. ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ರಾಜ್ಯೋತ್ಸವ ಸಮಾರಂಭದಲ್ಲಿ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಧ್ವಜಾರೋಹಣ ನೆರವೇರಿಸಿದರು. ಧ್ವಜಾರೋಹಣದ ಬಳಿಕ ಸಚಿವರು ಪರೇಡ್ ವೀಕ್ಷಣೆಗೆ ತೆರಳುವ ವೇಳೆ ಅನಾಹುತ ತಪ್ಪಿತು. ಸಚಿವರು ಹತ್ತಬೇಕಿದ್ದ ಜೀಪ್ನಲ್ಲಿ ಡಿಸೇಲ್ ಸೋರಿಕೆಯಾಗಿದ್ದು, ತಕ್ಷಣ ಅಗ್ನಿಶಾಮಕ ಸಿಬ್ಬಂದಿಗಳು ಫೈರ್ ಕಂಟ್ರೋಲ್ ಗ್ಯಾಸ್ ಸಿಂಪಡಿಸಿದರು. ನಂತರ ಪೊಲೀಸ್ ಸಿಬ್ಬಂದಿ ಜೀಪ್ನ್ನು ತಳ್ಳಿಕೊಂಡು ಮೈದಾನದಿಂದ ಹೊರತೆಗೆದರು.
ಸಚಿವರು ಧ್ವಜಾರೋಹಣಕ್ಕೂ ಮುನ್ನ ತಾಯಿ ಭುವನೇಶ್ವರಿ ಮೂರ್ತಿಗೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಶಾಸಕ ಆಸೀಫ್ ಸೇಠ್, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಪಂ ಸಿಇಒ ರಾಹುಲ್ ಸಿಂಧೆ ಹಾಗೂ ಪೊಲೀಸ್ ಕಮೀಷನರ್ ಭೂಷಣ್ ಬೊರಸೆ ಉಪಸ್ಥಿತರಿದ್ದರು.
ಪಥಸಂಚಲನದಲ್ಲಿ ಪೊಲೀಸರು, ಕೆಎಸ್ಆರ್ಪಿ ತುಕಡಿ, ಎನ್ಸಿಸಿ, ಸ್ಕೌಟ್ಸ್ ಹಾಗೂ ವಿವಿಧ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಯಾವುದೇ ತೊಂದರೆ ಇಲ್ಲದೆ ಸಮಾರಂಭ ಯಶಸ್ವಿಯಾಗಿ ಪೂರ್ಣಗೊಂಡಿತು.
ಇದನ್ನು ಓದಿ : ಸಂಸದ ಕಾಗೇರಿ, ಶಾಸಕ ಹೆಬ್ಬಾರ್ ನೇತೃತ್ವದಲ್ಲಿ ನಿಯೋಗ ಸಿಎಂ ಭೇಟಿ. ಶರಾವತಿ, ನದಿ ತಿರುವು ಯೋಜನೆ ಬಗ್ಗೆ ಚರ್ಚೆ.
ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗೆ ಆಪಾತ್ಬಾಂಧವ ಈಶ್ವರ ಮಲ್ಪೆ ರಾಯಬಾರಿ.
ಕಡಲ ಅಲೆಯ ಅಬ್ಬರಕ್ಕೆ ಸಮುದ್ರ ಪಾಲಾದ ಸಿನೆಮಾ ಸೆಟ್. ಜ್ಯೂ. ಎನ್ಟಿಆರ್ ಅವರ ಬಹುಕೋಟಿಯ ಚಿತ್ರ.

