ಭಟ್ಕಳ(BHATKAL): ಸೈಯದ್ ಝಮೀರುಲ್ಲಾ ಸಾಹಿತ್ಯ ಪ್ರತಿಷ್ಠಾನದ ಪ್ರಶಸ್ತಿಗೆ ಕಥಾ ಸಂಕಲನಗಳನ್ನು ಆಹ್ವಾನಿಸಲಾಗಿದೆ. ಇದು ರಾಜ್ಯ ಮಟ್ಟದ ಪ್ರಶಸ್ತಿಯಾಗಿದ್ದು ಆಸಕ್ತ ಕತೆಗಾರರು 2023-24ನೇ ಸಾಲಿನಲ್ಲಿ ಪ್ರಕಟವಾದ ತಮ್ಮ ಕಥಾ ಸಂಕಲನದ ತಲಾ ಮೂರು ಪ್ರತಿಗಳನ್ನು ಪ್ರಶಸ್ತಿಗಾಗಿ ಕಳಿಸಬಹುದು.

ಅಕ್ಟೋಬರ್ 15, 2024 ರ ಒಳಗಾಗಿ “ಶ್ರೀ ಪಿ. ಆರ್. ನಾಯ್ಕ, ಅಧ್ಯಕ್ಷರು. ಡಾ. ಸೈಯದ್ ಝಮೀರುಲ್ಲಾ ಷರೀಫ್ ಸಾಹಿತ್ಯ ಪ್ರತಿಷ್ಠಾನ, ಅಂಚೆ: ಹೊಳೆಗದ್ದೆ, ತಾ॥ ಕುಮಟಾ, ಉತ್ತರ ಕನ್ನಡ ಜಿಲ್ಲೆ” ಈ ವಿಳಾಸಕ್ಕೆ ಕಳಿಸಿಕೊಡುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸ್ಪರ್ಧೆಗೆ ಕಥಾಸಂಕಲನಗಳನ್ನು ಕಳಿಸುವವರು ಸದ್ಯದ ತಮ್ಮ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ಸ್ಪಷ್ಟವಾಗಿ ನಮೂದಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ 99024 26956 ಈ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಬಹುದು.

ಇದನ್ನು ಓದಿ : ಬೆಂಗಳೂರಿಂದ ಕರಾವಳಿಗೆ ವಿಶೇಷ ರೈಲು

ಶಿರೂರು ಕಾರ್ಯಾಚರಣೆ ಸ್ಥಗಿತ