ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಮುಂಡಗೋಡು(Mundgod) : ಸೈಬರ್ ವಂಚಕರ ಕಪಿ ಮುಷ್ಠಿಗೆ ನಿವೃತ್ತ ಶಿಕ್ಷಕರೊಬ್ಬರು(Retired Teacher) ಸಿಲುಕಿ ಬರೋಬ್ಬರಿ 1.61 ಕೋಟಿ ರೂ. ಕಳೆದುಕೊಂಡ ಘಟನೆ ನಡೆದಿದೆ.

ಉತ್ತರಕನ್ನಡ ಜಿಲ್ಲೆಯ ಮುಂಡಗೋಡ(Mundgod) ತಾಲೂಕಿನ ಟಿಬೆಟಿಯನ್ ಕಾಲನಿಯ(Tibetan Colony) ನಿವೃತ್ತ ಶಿಕ್ಷಕನಿಗೆ ಮುಂಬೈ ಪೊಲೀಸರ(Mumbai Police) ಹೆಸರಿನಲ್ಲಿ ಬಂದ ವಾಟ್ಸ್ ಆಪ್ ಕರೆಯಿಂದಾಗಿ ಹಣ ಕಳೆದುಕೊಂಡಿದ್ದಾರೆ. ಕುರಿತು ಸೈಬರ್ ಪೊಲೀಸ್ ಠಾಣೆಯಲ್ಲಿ(Cyber Police Station) ದೂರು ದಾಖಲಾಗಿದೆ.
ಟಿಬೆಟಿಯನ್ ಕ್ಯಾಂಪ್ ನಂ.8ರ ನಿವಾಸಿ ಪಲ್ಡೆನ್ ಲೋಬ್ಸಂಗ್ ಚೊಡಾಕ್ ವಂಚನೆಗೊಳಗಾದ ಶಿಕ್ಷಕ. ಕೇಂದ್ರಿಯ ಶಾಲೆಯ(Central School) ನಿವೃತ್ತ ಶಿಕ್ಷಕನಿಗೆ ವಂಚಕರು ‘ಡಿಜಿಟಲ್ ಆರೆಸ್ಟ್'(Digital Arrest) ಮಾಡುವ ಬೆದರಿಕೆ ಮೂಲಕ ಹಂತ ಹಂತವಾಗಿ ಹಣ ದೋಚಿದ್ದಾರೆ.
2025 ನವೆಂಬರ್ 29ರಂದು ಪಲ್ಡೆನ್ ಅವರಿಗೆ ಯುವತಿಯೊಬ್ಬಳು ವಾಟ್ಸ್ ಆಪ್ ಕರೆ ಮಾಡಿ ತಾನು ಮಹಾರಾಷ್ಟದ ಕೋಲವಾ ಪೊಲೀಸ್(Kolva Police Station) ಠಾಣೆಯಿಂದ ಮಾತನಾಡುತ್ತಿರುವುದಾಗಿ ತಿಳಿಸಿದ್ದಾಳೆ. ನಮ್ಮ ಇನ್ಸಪೆಕ್ಟರ್ ಮಾತನಾಡುತ್ತಾರೆ ಎಂದು ಬೇರೊಬ್ಬರಿಗೆ ಪೋನ್ ನೀಡಿದ್ದಾಳೆ. ಆಗ ಠಾಣೆಯ ಇನ್ಸಪೆಕ್ಟರ್ ಮಾತನಾಡುತ್ತಾ ಇತ್ತೀಚಿಗೆ ಮುಂಬೈನಲ್ಲಿ ಓ.ಎಮ್.ಅಬ್ದುಲಸಲಾಂ ಎಂಬ ಉಗ್ರವಾದಿ(Terrorist) ನಾಯಕನನ್ನು ಬಂಧಿಸಲಾಗಿದ್ದು ಆತನ ಬಳಿ ಸಿಕ್ಕ ಬರೋಬ್ಬರಿ 250 ಎ.ಟಿ.ಎಂ. ಕಾರ್ಡ್‌ಗಳಲ್ಲಿ ಸಿಕ್ಕಿದ್ದು ಅದರಲ್ಲಿ ನಿಮ್ಮ ಹೆಸರಿನ ಕೆನರಾ ಬ್ಯಾಂಕ್ ಕಾರ್ಡ್ ಕೂಡ ಇದೆ ಎಂದು ನಂಬಿಸಿದ್ದಾರೆ. ಅಷ್ಟೇ ಅಲ್ಲದೆ, ನಿಮ್ಮ ಬ್ಯಾಂಕ್ ಖಾತೆಯ ಮೂಲಕ ಕೋಟ್ಯಾಂತರ ರೂಪಾಯಿ ಮನಿ ಲಾಂಡ್ರಿಂಗ್ ನಡೆದಿದ್ದು, ನಿಮ್ಮ ಮೇಲೆ ಗಂಭೀರ ಪ್ರಕರಣ ದಾಖಲಾಗಿದೆ ಎಂದು ಭಯ ಬೀಳಿಸಿದ್ದಾನೆ.
ವಂಚಕನು ಪೊಲೀಸ್ ಸಮವಸ್ತ್ರ ಧರಿಸಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ವೀಡಿಯೋ ಕರೆ ಮಾಡಿ ಪೊಲೀಸ್ ಠಾಣೆಯನ್ನ ತೋರಿಸಿ ಪೂರ್ತಿಯಾಗಿ ನಂಬಿಸಿದ್ದಾನೆ. ಪಲ್ಡೆನ್ ಅವರ ಹೆಸರಿನಲ್ಲಿ ಕೋಟಿಗಟ್ಟಲೆ ಹಣ ವರ್ಗಾವಣೆಯಾಗಿರುವ ನಕಲಿ ಬ್ಯಾಂಕ್ ಸ್ಟೇಟ್‌ಮೆಂಟ್(Duplicate Bank Statements) ಕೂಡ ಕಳುಹಿಸಿ ಆರೆಸ್ಟ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.
ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ಪಲ್ಡೆನ್ ಹೇಳಿದಾಗ ತನಿಖೆಯ ನೆಪದಲ್ಲಿ ನಿಮ್ಮ ಖಾತೆಯಲ್ಲಿರುವ ಹಣವನ್ನು ‘ನ್ಯಾಷನಲ್ ಫಂಡ್’ಗೆ(National Fund) ಜಮಾ ಮಾಡಬೇಕು, ತನಿಖೆ ಮುಗಿದ ನಂತರ ಹಣ ವಾಪಸ್ ನೀಡಲಾಗುವುದು ಎಂದು ವಂಚಕನು ನಂಬಿಸಿದ್ದಾನೆ.
ವಿಷಯವನ್ನು ಯಾರೊಂದಿಗೂ ಹೇಳಬೇಡ ಎಂದು ಮತ್ತು ಪ್ರತಿ ಎರಡು ಗಂಟೆಗೊಮ್ಮೆ ವಾಟ್ಸ್ ಆಪ್ ಮೂಲಕ ವರದಿ ನೀಡುವಂತೆ (ಗುಡ್ ಮಾರ್ನಿಂಗ್, ಗುಡ್ ನೈಟ್ ಸಂದೇಶಗಳನ್ನು ಕಳಿಸಿ) ಆದೇಶಿಸಿ ಶಿಕ್ಷಕನನ್ನು ತಮ್ಮ ಹತೋಟಿಗೆ ತೆಗೆದುಕೊಂಡಿದ್ದಾನೆ.
ಸುಳ್ಳು ಬೆದರಿಕೆಗೆ ಹೆದರಿದ ಪಲ್ಡೆನ್ ತಮ್ಮ ಕೆನರಾ ಬ್ಯಾಂಕ್(Canara Bank), ಎಸ್‌ಬಿಐ(SBI) ಮತ್ತು ಕೆಡಿಸಿಸಿ ಬ್ಯಾಂಕ್‌ನಲ್ಲಿದ್ದ(KDCC Bank) ಸ್ಥಿರ ಠೇವಣಿ (FD) ಹಣವನ್ನು ಬಿಡಿಸಿಕೊಂಡು ಹಾಗೂ ಪರಿಚಿತರಿಂದ ಸಾಲ ಪಡೆದು, ಡಿಸೆಂಬರ್ 3 ರಿಂದ ಡಿಸೆಂಬರ್ 11ರ ಅವಧಿಯಲ್ಲಿ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 1,61,00,047 ರೂಪಾಯಿಗಳನ್ನು ವರ್ಗಾಯಿಸಿದ್ದಾರೆ. ನಂತರ ಪೋನ್ ಕರೆ ಮಾಡಿ ನಮ್ಮ ತನಿಖೆ ಮುಗಿದಿದೆ ತನಿಖೆಯ ನಂತರ ನಿಮ್ಮ ಹಣ ವರ್ಗಾವಣೆ ಮಾಡುತ್ತೇವೆ. ಇನ್ನೂ ಮುಂದೆ ಈಡಿ ತನಿಖೆ ನಡೆಯಲಿದೆ ಅವರು ಕೂಡ ನಿಮ್ಮ ನಿಮ್ಮ ಮನೆಗೆ ಬಂದು ಬಂಧಿಸುವ ಸಾಧ್ಯತೆ ಇದೆ ಎಂದು ಮತ್ತೆ 40 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದಾರೆ.
ಕಂಗಾಲಾದ ಶಿಕ್ಷಕ ತನ್ನ ಸ್ನೇಹಿತನ ಹತ್ತಿರ ಹೋಗಿ ಹಣ ನೀಡುವಂತೆ ಪಲ್ಡೇನ್ ಕೇಳಿದಾಗ ಏಕೆ ತುಂಬಾ ಅರ್ಜಂಟ್ ಮಾಡುತ್ತಿದಿ. ನಿನಗೆ ಯಾಕೆ ಹಣ ಬೇಕು ಏನಾಗಿದೆ ಹೇಳು, ಎಂದು ಸ್ನೇಹಿತ ಒತ್ತಡ ಹಾಕಿದಾಗ ನಡೆದ ವಿಷಯವನ್ನು ಸ್ನೇಹಿತನಿಗೆ ಹೇಳಿದ್ದಾನೆ.
ನಂತರ ಎಚ್ಚರಗೊಂಡ ಪಲ್ಡೇನ ತನ್ನ ಸ್ನೇಹಿತನ ಬಳಿ ವಂಚನೆ ಪುರಾಣವನ್ನ ಹೇಳಿದ್ದಾನೆ. ತಾನು ವಂಚನೆಗೊಳಗಾದ ಬಗ್ಗೆ ಸೈಬರ್ ಪೊಲೀಸ್ ಠಾಣೆಯಲ್ಲಿ(Cyber Police Station) ದೂರು ದಾಖಲಿಸಿದ್ದಾರೆ.
ಇದನ್ನು ಓದಿ : ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಅಂಗಡಿಗೆ ಬೆಂಕಿ. ಲಕ್ಷಾಂತರ ರೂ. ನಷ್ಟ
