ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ದಾಂಡೇಲಿ (Dandeli): ನಗರದ ಹಳೆ ದಾಂಡೇಲಿಯ ಸಾರಿಗೆ ಡಿಪೋದಲ್ಲಿ ಬಸ್ ಚಾಲಕನೋರ್ವ(Bus Driver) ಆತ್ಮಹತ್ಯೆಗೆ ಯತ್ನಿಸಿದ(Attempt) ಘಟನೆ ಸೋಮವಾರ ನಡೆದಿದೆ.
ದಾಂಡೇಲಿ ಸಾರಿಗೆ ಘಟಕದ (Dandeli Bus Depot) ಸಿಟಿ ಬಸ್ ಚಾಲಕ ಆರ್. ಬಿ. ಗಿಡಜಾಡರ ಎಂಬವರೇ ಆತ್ಮಹತ್ಯೆಗೆ ಯತ್ನಿಸಿದವರು. ಸಾರಿಗೆ ಡಿಪೋದಲ್ಲಿ ಪೀನಾಯಿಲ್ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದಾರೆ. ವಿಷಯ ತಿಳಿದ ಸಾರಿಗೆ ಘಟಕದ ಸಿಬ್ಬಂದಿಗಳು ತಕ್ಷಣವೇ ಸಾರಿಗೆ ಬಸ್ಸಿನಲ್ಲಿ ನಗರದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತಂದಿದ್ದಾರೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಸಾರ್ವಜನಿಕ ಆಸ್ಪತ್ರೆಗೆ ಸಾರಿಗೆ ಘಟಕದ ವ್ಯವಸ್ಥಾಪಕ ಎಲ್ ಎಚ್ ರಾಥೋಡ್ ಹಾಗೂ ಸಾರಿಗೆ ಘಟಕದ ಸಿಬ್ಬಂದಿಗಳು ಭೇಟಿ ನೀಡಿದ್ದಾರೆ.
ಆದರೆ ಆತ್ಮಹತ್ಯೆಗೆ ಯತ್ನಿಸಿದ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ದಾಂಡೇಲಿ ನಗರ ಠಾಣಾ (Dandeli Town Station) ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನು ಓದಿ : ಯೋಜನೆ ವಿರೋಧಿಸಿ ಸಮುದ್ರಕ್ಕೆ ಜಿಗಿದ ಮಹಿಳೆಯರು. ಮೂವರು ಅಸ್ವಸ್ಥ.