ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ದಾಂಡೇಲಿ(Dandeli) : ಉತ್ತರಕನ್ನಡ ಜಿಲ್ಲೆಯಲ್ಲಿ ಬೌ ಬೌ ಹಾವಳಿ ಹೆಚ್ಚಾಗಿದೆ. ದಾಂಡೇಲಿ ನಗರದ(Dandeli Town) ವಿವಿಧ ಕಡೆಗಳಲ್ಲಿ  ಬೀದಿ ನಾಯಿಗಳು(Street Dogs)  ಅಟ್ಟಹಾಸ ಮೆರೆದಿವೆ.


ದಾಂಡೇಲಿ ಸಮೀಪದ ಕುಳಗಿ ರಸ್ತೆ(Kulagi Road) ಮಾರ್ಗದ  ಸೈಂಟ್ ಮೈಕಲ್ ಶಾಲೆಯ ಹತ್ತಿರ ಐವರ ಮೇಲೆ ಬೀದಿ ನಾಯಿಗಳು ದಾಳಿ(Dogs attack) ನಡೆಸಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಶಾಲೆಗೆ ತೆರಳುಬ ಮಕ್ಕಳನ್ನ‌‌ ಹಿಂಬಾಲಿಸಿ ನಾಯಿ ದಾಳಿ ಮಾಡಿದೆ. ಸುಭಾಷ್ ನಗರದ(Subhas nagar) ಐದು ವರ್ಷದ ಪುಟ್ಟ ಮಗುವಿಗೆ ಗಾಯಗೊಳಿಸಿದೆ. ಅಲ್ಲದೇ ನಿರ್ಮಲ ನಗರದ(Normal nagar) ವೃದ್ಧೆ ರೋಜಿ ಡಯಾಸ್ ಎಂಬುವವರು ದಾಳಿಯಿಂದ ಗಾಯಗೊಂಡಿದ್ದಾರೆ. ಗಾಯಗೊಂಡ ಮೂವರು ದಾಂಡೇಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ(Dandeli  hospital) ಚಿಕಿತ್ಸೆ ಪಡೆದಿದ್ದಾರೆ.

ಕಳೆದ ಒಂದು ವರ್ಷದಲ್ಲಿ ನಗರದಲ್ಲಿ ಬೀದಿ ನಾಯಿಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದ್ದು,  ಸ್ಥಳೀಯರು ಆತಂಕಗೊಂಡಿದ್ದಾರೆ. ಈ ಸಂಬಂಧ ನಗರಸಭೆ ಮತ್ತು ಪಶುವೈದ್ಯ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದಷ್ಟು‌ ಬೇಗ  ಬೀದಿ ನಾಯಿಗಳ ನಿಯಂತ್ರಣಕ್ಕೆ ತ್ವರಿತ ಕ್ರಮ ಕೈಗೊಳ್ಳುವಂತೆ ನಾಗರಿಕರು  ಒತ್ತಾಯಿಸಿದ್ದಾರೆ.

ಇದನ್ನು ಓದಿ : ಬೆಳಿಗ್ಗೆಯಿಂದ ಎರಡು ಅಪಘಾತ. ಆರು ಜನರ ದುರ್ಮರಣ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊತ್ತು ಉರಿದ ಲಾರಿ. ಸಂಚಾರ ಅಸ್ತವ್ಯಸ್ತ

ಆಕ್ಷಿಜನ್ ಕೊಟ್ಟು ಮರೆಯಾದ ಅಜ್ಜಿ. ಸಾಲು ಮರದ ತಿಮ್ಮಕ್ಕ ಇನ್ನೂ ನೆನಪು ಮಾತ್ರ.