ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಬೆಳಗಾವಿ(Belagavi) : ಇಲ್ಲಿನ ಬಿಮ್ಸ್‌ (BIMS) ಆಸ್ಪತ್ರೆಯಲ್ಲಿ  ನರ್ಸಿಂಗ್ ವಿದ್ಯಾರ್ಥಿನಿ ಎಂದು ಹೇಳಿಕೊಂಡು ಕಾರವಾರ ಮೂಲದ(Karwar Native) ಯುವತಿಯೋರ್ವಳು  ಚಿಕಿತ್ಸೆ ನೀಡುತ್ತಿದ್ದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಕಾರವಾರ ಮೂಲದ ಸನಾ ಶೇಖ್ ಎಂಬ ಯುವತಿ ಕಳೆದ ಎರಡು ಮೂರು ತಿಂಗಳಿಂದ ತಾನು ನರ್ಸಿಂಗ್ ವಿದ್ಯಾರ್ಥಿನಿ(Nursing Student) ಎಂದು ಹೇಳಿಕೊಂಡು ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಳು ಎಂದು ಆಸ್ಪತ್ರೆ ಸಿಬ್ಬಂದಿಯಿಂದಲೇ ವಿಷಯ ಬಹಿರಂಗಗೊಂಡಿದೆ.

ಈಕೆ ಆಸ್ಪತ್ರೆಯ ವಿವಿಧ ವಿಭಾಗಗಳಲ್ಲಿ  ಇಂಜೆಕ್ಷನ್ ನೀಡುವುದು  ರೋಗಿಗಳ ಚಿಕಿತ್ಸೆ ನೀಡುವುದು ಸೇರಿದಂತೆ ಹಲವು ಕೆಲಸಗಳನ್ನ ಮಾಡುತ್ತಿದ್ದಳು. ಸಿಬ್ಬಂದಿಗಳಿಗೆ ಅನುಮಾನ ಬಂದ ಬಳಿಕ ವಿಚಾರಣೆ ನಡೆಸಿದಾಗ, ಆಕೆ ನಿಜವಾದ ನರ್ಸಿಂಗ್ ವಿದ್ಯಾರ್ಥಿನಿ ಅಲ್ಲ ಎಂಬುದು ಗೊತ್ತಾಗಿದೆ.

ಸಿಬ್ಬಂದಿಗಳು ವಿಚಾರಿಸಿದಾಗ ಸನಾ ಶೇಖ್  ತಾನು ಡೈರೆಕ್ಟರ್ ಪರಿಚಿತೆ ಎಂದು ಹೇಳಿ ಧಮ್ಕಿ ಹಾಕಿದ್ದಾಳೆ ಎನ್ನಲಾಗಿದೆ. ನಂತರ ಸುರಕ್ಷತಾ ಸಿಬ್ಬಂದಿ ಅವಳನ್ನು ಹಿಡಿದು ಆಸ್ಪತ್ರೆಗೆ ಸಂಬಂಧಿಸಿದ ಹಿರಿಯ ವೈದ್ಯಾಧಿಕಾರಿಗಳ ಮುಂದೆ ಹಾಜರುಪಡಿಸಿದ್ದಾರೆ.

ಪ್ರಾಥಮಿಕ ವಿಚಾರಣೆಯಲ್ಲಿ ಸನಾ ಶೇಖ್ ಪ್ರಸ್ತುತ ಬೆಳಗಾವಿಯ ಕುಮಾರಸ್ವಾಮಿ ಲೇಔಟ್‌ನಲ್ಲಿ ವಾಸಿಸುತ್ತಿದ್ದಳು ಮತ್ತು ಇನ್ನೊಂದು ಖಾಸಗಿ ಆಸ್ಪತ್ರೆಯಲ್ಲಿಯೂ ಪ್ರಾಕ್ಟೀಸ್ ಮಾಡುತ್ತಿದ್ದಾಳೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ.

ಈ ಘಟನೆಗೆ ಸಂಬಂಧಿಸಿದಂತೆ ಬಿಮ್ಸ್‌ ನಿರ್ದೇಶಕ ಅಶೋಕ್ ಶೆಟ್ಟಿ ಮತ್ತು ವೈದ್ಯಕೀಯ ಅಧೀಕ್ಷಕ ಡಾ. ಈರಣ್ಣ ಪಲ್ಲೇದ್ ಅವರ ನೇತೃತ್ವದಲ್ಲಿ ಮೂರು ಸದಸ್ಯರ ತನಿಖಾ ಸಮಿತಿ ರಚಿಸಲಾಗಿದೆ. ಸಮಿತಿ ಒಂದು ವಾರದೊಳಗೆ ಸಂಪೂರ್ಣ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಆಸ್ಪತ್ರೆಯ ಆಡಳಿತದಿಂದಲೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಈ ಘಟನೆ ಬೆಳಕಿಗೆ ಬಂದ ಬಳಿಕ ಚಿಕಿತ್ಸೆ ಪಡೆದ ರೋಗಿಗಳು ಹಾಗೂ ಸಾರ್ವಜನಿಕರಲ್ಲಿ ಆತಂಕ ವ್ಯಕ್ತವಾಗಿದೆ.

ಇದನ್ನು ಓದಿ : ಬೆಂಗಳೂರಿನಲ್ಲಿ ಶಾಸಕ ಸತೀಶ ಸೈಲ್ ಬಂಧಿಸಿದ ಇಡಿ ಅಧಿಕಾರಿಗಳು. ಕೇಸ್ ಹಿಸ್ಟ್ರೀ ಏನು?

ಕಟ್ಟುನಿಟ್ಟಿನ ನಿಯಮದಿಂದ  ಕಂಗಾಲಾದ ನಟ. ನ್ಯಾಯಾಧೀಶರ ಬಳಿ ಕೇಳಿದ್ದೇನು?

ದೇವಾಲಯದಲ್ಲಿ ಕಳ್ಳರ ಕರಾಮತ್ತು. ಲಕ್ಷಾಂತರ ರೂ. ಮೌಲ್ಯದ ಬೆಳ್ಳಿ  ಕಳ್ಳತನ.