ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಮುಂಡಗೋಡ(Mundgod) : ಪಟ್ಟಣದ ಕಿಲ್ಲೆ ಓಣಿಯಲ್ಲಿ(Kille Oni) ಇರುವ ಖಾದರಲಿಂಗ ದೇವಸ್ಥಾನದ ಸಮೀಪದ ಪೀಠೋಪಕರಣ ತಯಾರಿಕಾ ಘಟಕಕ್ಕೆ(Furniture Unit) ಬೆಂಕಿ(Fire) ಹೊತ್ತಿಕೊಂಡು ಸುಟ್ಟು ಭಸ್ಮವಾದ ಘಟನೆ ರವಿವಾರ ಬೆಳಿಗ್ಗೆ ಸಂಭವಿಸಿದೆ.

ಮುಂಜಾನೆ ನಾಲ್ಕು ಗಂಟೆಯ  ಸುಮಾರಿಗೆ ಈ ಘಟನೆ ಸಂಭವಿಸಿದೆ. ಮಹ್ಮದ್ ಯೂನುಸ್ ಹೊಸಕೊಪ್ಪ ಅವರಿಗೆ ಸೇರಿದ ಈ ಪೀಠೋಪಕರಣ ತಯಾರಿಕಾ ಘಟಕ(Furniture Unit) ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ.

ಕಟ್ಟಿಗೆಗಳು(Woodd), ಬೆಲೆಬಾಳುವ ಪೀಠೋಪಕರಣಗಳು(Valuable Furniture s), ಉತ್ಪಾದನಾ ಯಂತ್ರೋಪಕರಣಗಳು(Machinaries) ಸೇರಿದಂತೆ ಅಂದಾಜು ರು. 50 ಲಕ್ಷಕ್ಕೂ ಹೆಚ್ಚು ಮೌಲ್ಯದ ಸಾಮಾನುಗಳು ನಾಶವಾಗಿದೆ.

ಅಗ್ನಿಶಾಮಕ ದಳದ(Fire Brigade) ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದರೂ, ಆಷ್ಟರಲ್ಲಿ ಇಡೀ ಘಟಕ ಬೆಂಕಿಯ ಕೆನ್ನಾಲಿಗೆಗೆ ಉರಿದು ಭಸ್ಮವಾಗಿದೆ.  ಅಗ್ನಿ ಅವಘಡಕ್ಕೆ ಸ್ಪಷ್ಟ ಕಾರಣ ತಿಳಿದುಬರಬೇಕಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ನಡೆಸಿದ್ದಾರೆ.

ಇದನ್ನು ಓದಿ : ಎಂಡಿಎಮ್‌ಎ ಸಾಗಾಟ ಪ್ರಕರಣ. ನಾಲ್ವರ ಬಂಧನ. 50 ಲಕ್ಷ ರೂ. ಮೌಲ್ಯದ ಮಾದಕ ವಸ್ತು ವಶ

ಗೋವಾ ನೈಟ್‌ ಕ್ಲಬ್‌ನಲ್ಲಿ ಭೀಕರ ಅಗ್ನಿ ದುರಂತ – 25 ಜನ ಸಜೀವ ದಹನ

ಕಾರವಾರ ಜೈಲಿನಲ್ಲಿ ಗೂಂಡಾಗಳ ದರ್ಪ. ಜೈಲರ್, ವಾರ್ಡರ್ ಗಳ ಮೇಲೆ ಹಲ್ಲೆ.