ಕಾರವಾರ(KARWAR) : ಅಂಕೋಲಾದ ಶಿರೂರು(ANKOLA SHIRURU) ದುರಂತಕ್ಕೆ ಸಂಬಂಧಿಸಿ ಮತ್ತೆ ಶುಕ್ರವಾರದಿಂದ ಕಾರ್ಯಾಚರಣೆ ಆರಂಭವಾಗಲಿದೆ. ಈಗಾಗಲೇ ಗೋವಾದ ಪಣಜಿಯಿಂದ(GOA PANAJI) ಯಂತ್ರೋಪಕರಣಗಳು ಆಗಮಿಸಿವೆ.
ಮಳೆಯ ಕಾರಣಕ್ಕಾಗಿ ಸ್ಥಗಿತಗೊಂಡಿದ್ದ ಕಾರ್ಯಾಚರಣೆ ತಿಂಗಳ ಬಳಿಕ ಮತ್ತೆ ಮುಂದುವರಿಯಲಿದೆ. ಅಂಕೋಲಾದ ಶಿರೂರು ಗ್ರಾಮದ ಸಮೀಪ ಗಂಗಾವಳಿ ನದಿಯಲ್ಲಿ (GANGAVALI RIVER) ಬಾರ್ಜ್ ಮತ್ತು ಡ್ರೆಜ್ಜಿಂಗ್ ಯಂತ್ರಗಳ ಮೂಲಕ ಶೋಧ ನಡೆಯಲಿದೆ.
ಜುಲೈ 16ರಂದು ಬೆಳಿಗ್ಗೆ ಸಂಭವಿಸಿದ ದುರಂತದಿಂದ 11 ಜನರು ಮೃತರಾಗಿದ್ದರು. ಅದರಲ್ಲಿ ಎಂಟು ಜನರ ಮೃತದೇಹ ದೊರತಿತ್ತು. ರಕ್ಷಣಾ ತಂಡಗಳು ಸಾಕಷ್ಟು ಶ್ರಮಿಸಿದ್ದರೂ ಕೂಡ ಯಾವುದೇ ಪ್ರಯೋಜನ ಆಗಿರಲಿಲ್ಲ. ಇದೀಗ ಮೂವರ ಮೃತದೇಹ ಮತ್ತು ನದಿಯಲ್ಲಿ ಹುದುಗಿರುವ ಟ್ರಕ್ಗಳನ್ನ ತೆರವುಗೊಳಿಸಲು ಜಿಲ್ಲಾಡಳಿತ ಮುಂದಾಗಿದೆ.
ಕಾರವಾರ ಶಾಸಕರಾದ ಸತೀಶ್ ಸೈಲ್(MLA SATISH SAIL) ಅವರ ಆಸಕ್ತಿಯಿಂದ ಈಗಾಗಲೇ ಬೃಹತ್ ಯಂತ್ರೋಪಕರಣಗಳು ಆಗಮಿಸಿವೆ. ಅಭಿಶೇನಿಯಾ ಒಸಿಯನ್ ಸರ್ವಿಸ್ ಕಂಪನಿಗೆ ಕಾರ್ಯಾಚರಣೆಯ ಗುತ್ತಿಗೆ ನೀಡಲಾಗಿದ್ದು, ಈಗಾಗಲೆ ಬಾರ್ಜ್, ಡ್ರೆಜ್ಜಿಂಗ್ ಯಂತ್ರ, ಇಟಾಚಿ, ಕ್ರೇನ್, ಮತ್ತು ಟಗ್ ಗಳು ಸಿದ್ದವಾಗಿದೆ. ಕಾರ್ಯಾಚರಣೆಗೆ ಬೇಕಾಗುವ ಹಣವನ್ನ ವಿವಿಧ ಮೂಲಗಳಿಂದ ಹೊಂದಿಸಿದ್ದೇವೆ ಎಂದು ಶಾಸಕ ಸತೀಶ ಸೈಲ್ ಹೇಳಿದ್ದಾರೆ. ಸುಮಾರು 90 ಲಕ್ಷ ರೂಪಾಯಿ ವೆಚ್ಚದಲ್ಲಿ ನದಿಯಲ್ಲಿ ಬಾರ್ಜ್, ಡ್ರೆಜ್ಜಿಂಗ್ ಯಂತ್ರಗಳ ಮೂಲಕ ಕಾರ್ಯಾಚರಣೆ ನಡೆಯಲಿದೆ.
ನಾಪತ್ತೆಯಾಗಿರುವ ಶಿರೂರಿನ ಜಗನ್ನಾಥ ನಾಯ್ಕ, ಗಂಗೆಕೊಳ್ಳದ ಲೋಕೇಶ ಹಾಗೂ ಕೇರಳದ ಅರ್ಜುನ್ ಮೃತದೇಹದ ಶೋಧ ನಡೆಯಲಿದ್ದು, ಅದೇ ರೀತಿ ನದಿಯಲ್ಲಿ ಬಿದ್ದಿರುವ ಟ್ರಕ್, ಮರಗಿಡಗಳನ್ನ ತೆರವುಗೊಳಿಸುವ ಕಾರ್ಯ ನಡೆಯಲಿದೆ. ಈಗಾಗಲೇ ಗಂಗಾವಳಿ ನದಿಯ ಸುಮಾರು ಏಳು ನೂರು ಮಿಟರ್ ಸುತ್ತಲಿನ ಪ್ರದೇಶಗಳ ಹೈಡ್ರೋಲಿಕ್ ಸರ್ವೆ(HAIDROLIC SERVE) ಮಾಡಲಾಗಿದೆ. ನದಿಯಲ್ಲಿ ಹೆಚ್ಚು ಆಳವಿರುವ ಸ್ಥಳಗಳಲ್ಲಿ ತೆಗೆದ ಮಣ್ಣನ್ನ ವಿಲೇವಾರಿ ಮಾಡಲಾಗುತ್ತದೆ. ನದಿಯಲ್ಲಿ ಸುಲಭವಾಗಿ ಕಾರ್ಯಚರಣೆ ನಡೆಸಲು ಈ ಯಂತ್ರಗಳ ಮೂಲಕ ಸಾಧ್ಯವಾಗಲಿದೆ. ಒಟ್ಟು ಎಂಟು ಕಾರ್ಮಿಕರು ಇವೆಲ್ಲ ಯಂತ್ರಗಳನ್ನ ಆಪರೇಟ್ ಮಾಡಲಿದ್ದಾರೆ. ಸುಮಾರು 10 ದಿನಗಳ ಕಾರ್ಯಾಚರಣೆ ಅಂದಾಜು ಮಾಡಲಾಗಿದೆ. ನಾಪತ್ತೆಯಾದವರ ದೇಹಕ್ಕಾಗಿ ಪ್ರಯತ್ನ ಸಾಗಲಿದೆ.
ಇದನ್ನು ಓದಿ : ಮೀನುಗಾರರ ಮೇಲೆ ನೌಸೇನಾ ಸಿಬ್ಬಂದಿಗಳ ದರ್ಪ