ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal) : ಪಟ್ಟಣದ ಮೀನು ಮಾರುಕಟ್ಟೆ(Fish Market) ಸ್ಥಳಾಂತರ ಮಾಡುತ್ತಾರೆಂಬ ಗೊಂದಲಕ್ಕೆ ತಾತ್ಕಾಲಿಕ ತೆರೆ ಬಿದ್ದಿದೆ. ಮೀನು ಮಾರಾಟ ಮಾಡುವ ಮಹಿಳೆಯರಿಗೆ ತಪ್ಪು ಮಾಹಿತಿ ನೀಡಿ ಗೊಂದಲಮಯ ವಾತಾವರಣ ಸೃಷ್ಟಿ ಮಾಡಿದ ಹಿನ್ನಲೆಯಲ್ಲಿ ಇಂದು ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯ(Minister Mankal Vaidya) ಸ್ಥಳಕ್ಕೆ ಭೇಟಿ ನೀಡಿ ಮೀನುಗಾರ ಮಹಿಳೆಯರ ಜೊತೆ ಮುಕ್ತವಾಗಿ ಚರ್ಚಿಸಿದ್ದಾರೆ.
ಈ ವೇಳೆ ಮೀನು ಮಾರಾಟಗಾರರು ತಮ್ಮ ಸಮಸ್ಯೆಗಳ ಬಗ್ಗೆ ಸಚಿವರ ಮುಂದೆ ಹೇಳಿಕೊಂಡರು. ತಾವು ಹಳೆ ಕಾಲದಿಂದಲೂ ಇಲ್ಲಿ ಮೀನು ಮಾರಾಟ ಮಾಡಿ ಬದುಕು ಸಾಗಿಸುತ್ತಿದ್ದೇವೆ. ಹೀಗಾಗಿ ಇಲ್ಲಿಯೇ ಅವಕಾಶ ನೀಡಿ ಎಂದರು.
ಇದಕ್ಕೆ ಸಚಿವರು ಯಾವುದೇ ಕಾರಣಕ್ಕೂ ಹಳೆ ಮೀನು ಮಾರುಕಟ್ಟೆಯನ್ನು ಸ್ಥಳಾಂತರ ಮಾಡುವುದಿಲ್ಲ. ಅದು ಈಗಿದ್ದ ಜಾಗದಲ್ಲಿಯೇ ಮುಂದುವರಿಯಲಿದೆ ಮತ್ತು ಹೆಚ್ಚುತ್ತಿರುವ ಜನಸಂಖ್ಯೆ(Population) ಮತ್ತು ಬದಲಾಗುತ್ತಿರುವ ಪಟ್ಟಣದ ಪರಿಸ್ಥಿತಿಗೆ ತಕ್ಕಂತೆ ಜನರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಇನ್ನೊಂದು ಮೀನು ಮಾರುಕಟ್ಟೆ(Fish Market) ಪ್ರಾರಂಭಿಸುವುದಾಗಿ ತಿಳಿ ಹೇಳಿದರು.
ಮೀನುಗಾರರ ಕಷ್ಟ ಕಾರ್ಪಣ್ಯದ ಸಂಪೂರ್ಣ ಅರಿವು ನನಗಿದೆ. ನಿಮಗೆ ತೊಂದರೆಯಾಗುವ ಯಾವ ಕೆಲಸಕ್ಕೂ ನಾನು ಬೆಂಬಲ ನೀಡುವುದಿಲ್ಲ ಮತ್ತು ಮೀನುಗಾರರ ಜೊತೆ ನಾನು ಎಲ್ಲಾ ಸಂದರ್ಭಗಳಲ್ಲೂ ಇರುತ್ತೇನೆ ಎಂದು ಸಚಿವ ಮಂಕಾಳ ವೈದ್ಯ ಭರವಸೆ ನೀಡಿದರು.
ಸಚಿವರುಬೇಡಿಕೆಗೆಸ್ಪಂದಿಸಿರುವುದುಸ್ವಾಗತಾರ್ಹ:
ಭಟ್ಕಳ ನಗರ ಭಾಗದ ರಾಜಾಂಗಣದ (ಹಳೇ ಬಸ್ ನಿಲ್ದಾಣ)ದ ಪುರಾತನ ಇತಿಹಾಸ ಹೊಂದಿದ ಮೀನು ಮಾರುಕಟ್ಟೆಯ ಮೀನು ಮಾರಾಟಗಾರರ ಹಾಗೂ ಅದಕ್ಕೆ ಹೊಂದಿಕೊಂಡ ವಿವಿಧ ಅಂಗಡಿಕಾರರ ಹಾಗೂ ರಿಕ್ಷಾ ಚಾಲಕರ ನಿಸ್ವಾರ್ಥ ಹೋರಾಟಕ್ಕೆ ಮಣಿದು, ಇಂದು ಉಸ್ತುವಾರಿ ಸಚಿವರು ಭಟ್ಕಳದ ಮೀನು ಮಾರುಕಟ್ಟೆಗೆ ಆಗಮಿಸಿ ಮೀನು ಮಾರುಕಟ್ಟೆಯನ್ನು ಈಗಿರುವ ಸ್ಥಳದಲ್ಲೇ ಉಳಿಸಿಕೊಳ್ಳುವ ಬೇಡಿಕೆಗೆ ಸ್ಪಂದಿಸಿರುವುದು ಸ್ವಾಗತಾರ್ಹ ಎಂದು ಪುರಸಭೆ ಮಾಜಿ ಸದಸ್ಯ ಶ್ರೀಕಾಂತ ನಾಯ್ಕ ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಪ್ರಸ್ತುತ ಮೀನು ಮಾರುಕಟ್ಟೆಯನ್ನು ಅದೇ ಜಾಗದಲ್ಲಿ ನವೀಕರಣಕ್ಕೆ ಹೆಚ್ಚಿನ ಹಣ ಬಿಡುಗಡೆ ಮಾಡಲು ಮೀನು ಮಾರಾಟಗಾರರ ಪರವಾಗಿ ಶ್ರೀಕಾಂತ್ ನಾಯ್ಕ ಆಗ್ರಹಿಸಿದ್ದಾರೆ.
ಇದನ್ನು ಓದಿ : ದೇವಾಲಯದ ಹುಂಡಿ ಕಳ್ಳತನ. ಭಟ್ಕಳ ಪೊಲೀಸರಿಂದ 12 ಗಂಟೆಯೊಳಗೆ ಆರೋಪಿಗಳ ಬಂಧನ.
ಪತಿ ಕಿರುಕುಳದಿಂದ ಬೇಸತ್ತು ಪತ್ನಿ ಸಾವು. ಮುಂಡಳ್ಳಿಯಲ್ಲೊಂದು ಕರಾಳ ಘಟನೆ.
	
						
							
			
			
			
			
