ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar): ರಾಜ್ಯದ ಕರಾವಳಿಯಲ್ಲಿ ಇಂದಿನಿಂದ ಆಳ ಸಮುದ್ರ ಮೀನುಗಾರಿಕೆ(Seafishin Ban) ನಿಷೇಧವಾಗಿದೆ. ಹೀಗಾಗಿ ಯಾಂತ್ರಿಕ ದೋಣಿಗಳು ಬಂದರು ಸೇರಿಕೊಂಡಿವೆ.
ಜೂನ್ 1ರಿಂದ ಜುಲೈ 31ರವರೆಗೆ ಸರ್ಕಾರ ಮೀನುಗಾರಿಕಾ ನಿಷೇಧ(Fishing Ban) ಹೇರಿದೆ. ಪ್ರತಿವರ್ಷವೂ ಮಳೆಗಾಲದ ಆರಂಭದ ಸಮಯದಲ್ಲಿ ಎರಡು ತಿಂಗಳುಗಳ ಕಾಲ ಆಳ ಸಮುದ್ರ ಮೀನುಗಾರಿಕೆಗೆ ನಿಷೇದ ಹೇರಲಾಗುತ್ತದೆ. ಕರಾವಳಿ ಜಿಲ್ಲೆಗಳಾದ ಉತ್ತರಕನ್ನಡ(Uttarakannada), ಉಡುಪಿ(Udupi) ಹಾಗೂ ದಕ್ಷಿಣ ಕನ್ನಡದಲ್ಲಿ(Dakshinakannada) ಕಡಲ ಮಕ್ಕಳು ಸರ್ಕಾರದ ನಿಷೇಧವನ್ನು ಪಾಲಿಸುತ್ತಾರೆ.
ಮಳೆಗಾಲದಲ್ಲಿ ಮೀನುಗಳ ಮೊಟ್ಟೆ ಇಟ್ಟು ಸಂತಾನಾಭಿವೃದ್ಧಿ ಮಾಡುವ ಸಮಯ ಆಗಿರುವುದರಿಂದ ಮೀನುಗಾರಿಕೆಗೆ ನಿಷೇದ ಇರುತ್ತದೆ. ಅಲ್ಲದೇ ಆಳ ಸಮುದ್ರ(Deep sea) ತುಂಬಾ ಪ್ರಕ್ಷುಬ್ಧವಾಗಿರುತ್ತದೆ. ಹೀಗಾಗಿ ಎರಡು ತಿಂಗಳುಗಳ ಕಾಲ ಯಾವುದೇ ಕಾರಣಕ್ಕೂ ಮೀನುಗಾರರು ಕಡಲಿಗೆ ಮೀನುಗಾರಿಕೆ ಮಾಡಲು ಇಳಿಯುವಂತಿಲ್ಲ.
ಕಾರವಾರದ ಬೈತ್ಕೋಲ್, ಬೆಲೇಕೇರಿ, ತದಡಿ, ಹೊನ್ನಾವರ, ಭಟ್ಕಳದ ಅಳ್ವೆಕೋಡಿ, ತೆಂಗಿನಗುಂಡಿ, ಮಾವಿನಕುರ್ವೆ ಬಂದರುಗಳಲ್ಲಿ ಯಾಂತ್ರಿಕ ದೋಣಿಗಳು ಲಂಗರು ಹಾಕಿ ನಿಂತಿವೆ. ಒಟ್ಟಾರೆಯಾಗಿ ಬಂದರುಗಳಲ್ಲಿ ಸುಮಾರು ಎರಡು ಸಾವಿರಕ್ಕೂ ಅಧಿಕ ಬೋಟ್ ಗಳು, ಲಕ್ಷಾಂತರ ಸಂಖ್ಯೆಯ ಮಿನುಗಾರರು ಮೀನುಗಾರಿಕೆಯನ್ನ ನಂಬಿ ಜೀವನ ಸಾಗಿಸುತ್ತಿದ್ದರು.
ಎರಡು ತಿಂಗಳುಗಳ ಕಾಲ ಬೋಟ್ ಗಳ ರಿಪೇರಿ ಕಾರ್ಯ ಮಾಡುವುದು, ಬಲೆಗಳನ್ನ ಸರಿಪಡಿಸಿಕೊಳ್ಳುವ ಕಾರ್ಯ ಮಾಡಿಕೊಳ್ಳುತ್ತಾರೆ. ಹೊರ ರಾಜ್ಯದ ಕಾರ್ಮಿಕರು ಈ ಸಂದರ್ಭದಲ್ಲಿ ತಮ್ಮ ತಮ್ಮ ಊರಿನತ್ತ ಪ್ರಯಾಣ ಬೆಳೆಸುತ್ತಾರೆ.
ಆಳ ಸಮುದ್ರದಲ್ಲಿ ಮೀನುಗಾರಿಕೆ ನಿಷೇದ ಇರುವ ಸಂದರ್ಭದಲ್ಲಿ ಏಂಡಿ ಬಲೆ ಹಾಕಿ ಮೀನುಗಾರಿಕೆ ಮಾಡಲಾಗುತ್ತದೆ. ಚಿಕ್ಕ ಚಿಕ್ಕ ದೋಣಿಗಳ ಮೂಲಕ ತೀರದಲ್ಲಿ ಬಲೆ ಹಾಕಿ ಮೀನು ಹಿಡಿಯುವ ರೂಢಿ ಕರಾವಳಿಯಲ್ಲಿ(Coastal) ಇದೆ. ಇನ್ನೂ ಆಗಸ್ಟ್ ತಿಂಗಳಲ್ಲಿ ಮುಹೂರ್ತ ನಿಗದಿ ಮಾಡಿಕೊಂಡು ಮೀನುಗಾರಿಕೆ ಆರಂಭಿಸಲಾಗುತ್ತದೆ.
I