ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಲಯನ್ಸ್ ಇಂಟರ್‌ನ್ಯಾಶನಲ್, ಲಯನ್ಸ್ ಕ್ಲಬ್, ಕಾರವಾರ ಸಿಟಿ ಹಾಗೂ ಡಾ. ಎಸ್.ಆರ್. ಚಂದ್ರಶೇಖರ್ ವಾಕ್ ಮತ್ತು ಶ್ರವಣ ಸಂಸ್ಥೆ, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಸಪ್ಟೆಂಬರ್ 27 ಶನಿವಾರದಂದು ಉಚಿತ ವಾಕ್ (ಮಾತು) ಶ್ರವಣ (ಕಿವಿ) ದೋಷ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ನಡೆಯಲಿದೆ.
ಕಾರವಾರದ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿ ನಡೆಸಿದ ಲಯನ್ಸ್ ಕ್ಲಬ್ ಪ್ರತಿನಿಧಿಗಳು ವಿಷಯ ತಿಳಿಸಿದ್ದಾರೆ. ಅಂದು ಮಧ್ಯಾಹ್ನ 3 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಪಿಕಳೆ ರಸ್ತೆ ಪಕ್ಕದ ನ್ಯೂ ಲುಕ್ ಅಫ್ಟಿಕ್ ನಲ್ಲಿ ಶಿಬಿರ ನಡೆಯಲಿದೆ.
ಉಚ್ಛಾರಣೆ ತೊಂದರೆ, ಭಾಷೆ ತೊಂದರೆ, ಕಲಿಕೆ ತೊಂದರೆ, ಕಿವಿ ಸೋರುವಿಕೆ, ನೋವು, ಕಿವಿ ಕೇಳದವರು, ಸೀಳು ತುಟಿ, ಪಾರ್ಶ್ವವಾಯು ರೋಗ, ಬುದ್ಧಿ ಮಾಂದ್ಯತೆ, ಧ್ವನಿ ತೊಂದರೆ, ಧ್ವನಿಯಲ್ಲಿ ಏರುಪೇರು ಇರುವ ರೋಗಿಗಳು ಶಿಬಿರದಲ್ಲಿಭಾಗವಹಿಸಬಹುದಾಗಿದೆ.
ಶಿಬಿರಕ್ಕೆ ಬರುವವರು ಕಡ್ಡಾಯವಾಗಿ ಆಧಾರ್ ಕಾರ್ಡ್ ಮತ್ತು ರೇಶನ್ ಕಾರ್ಡ್ ಪ್ರತಿಯನ್ನು ತರತಕ್ಕದ್ದು ಎಂದು ಸಂಘಟಕರು ತಿಳಿಸಿದ್ದಾರೆ. ತೀವೃವಾದ ಕಿವಿ ಸಮಸ್ಯೆ ಉಳ್ಳವರಿಗೆ ವೈದ್ಯರ ಸಲಹೇ ಮೇರೆಗೆ ಉಚಿತ ಮಷಿನ್ ನೀಡಲಾಗುವುದು ಎಂದು ಲಾಯನ್ ಅಧ್ಯಕ್ಷ ಸಾದೀಕ್ ಖಾನ್ , ಕಾರ್ಯದರ್ಶಿ ಲಾಯನ್ ದಿಲೀಪ್ ಆರ್ ರೇವಣಕರ ಮತ್ತು ಸದಸ್ಯ ಅಲ್ತಾಪ್ ಶೇಖ್ ತಿಳಿಸಿದ್ದಾರೆ.
ಹೆಚ್ವಿನ ಮಾಹಿತಿಗಾಗಿ ಅಲ್ತಾಪ್ ಮೊಬೈಲ್ ಸಂಖ್ಯೆ 8497896419 ಸಂಪರ್ಕಿಸಬಹುದಾಗಿದೆ.
ಇದನ್ನು ಓದಿ : ಶಾಸಕ ದಿನಕರ ಶೆಟ್ಟಿ ಅವರಿಗೆ 673 ಮತಗಳ ಅಂತರದಿಂದ ಗೆಲುವು.
ಯುಟ್ಯೂಬರ್ ಮುಕಳೆಪ್ಪ ವಿರುದ್ದ ಪ್ರಮೋದ್ ಮುತಾಲಿಕ್ ಆಕ್ರೋಶ
ಅಕ್ಟೋಬರ್ 2ರಿಂದ 5ರವರೆಗೆ ಕಾರವಾರದಲ್ಲಿ ಕರ್ನಾಟಕ ಪ್ರಾಂತೀಯ ಯುವ ಸಮ್ಮೇಳನ ಯುವ ಜನೋತ್ಸವ.
ಸಚಿವರ ಆಪ್ತ ಸಹಾಯಕ ಎಂದು ಜಿಲ್ಲಾದಿಕಾರಿಗೆ ವಂಚನೆ. ಕಾರವಾರ ವಿದ್ಯಾರ್ಥಿ ಬಂಧನ