ಕಾರವಾರ (KARWAR ): ಮೀನುಗಾರ ಸಮುದಾಯದ(Fisherman community) ಹಿರಿಯರು, ಹಿರಿಯ ಚಿತ್ರ ಕಲಾವಿದರಾಗಿದ್ದ(Senior artist) ತೇಕು ವಿಠೋಬ ತಾಂಡೇಲ ಸೋಮವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಅವರಿಗೆ 85 ವರ್ಷ ವಯಸ್ಸಾಗಿತ್ತು. ತಮ್ಮ ಸ್ವಗೃಹದಲ್ಲಿ ನಿಧಾನರಾಗಿದ್ದಾರೆ. ಚಿತ್ತಾಕುಲ ಸೀಬರ್ಡ್ ಕಾಲೋನಿಯಲ್ಲಿ(Chittakula seabird Colony) ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು. ಇಬ್ಬರು ಪುತ್ರರಾದ ನಂದೀಶ್, ಜ್ಞಾನೇಶ್ವರ, ಪುತ್ರಿಯರಾದ ಭಾರತಿ, ಆಶಾ ಹಾಗೂ ಸೊಸೆಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಗಳು ಇದ್ದಾರೆ.
ತೇಕು ತಾಂಡೇಲ ರಚಿಸಿದ ಚಿತ್ರಕಲೆಗಳಿಗೆ ಹಲವು ಪ್ರಶಸ್ತಿಗಳು(Awards) ಒಲಿದಿವೆ. ದೇವರ ಚಿತ್ರ, ವ್ಯಕ್ತಿ ಚಿತ್ರ, ಪ್ರಕೃತಿ, ಪರಿಸರ ಸೇರಿದಂತೆ ಹಲವು ಕಲಾಕೃತಿಗಳು ಅವರ ಕಲಾ ಕುಂಚದಿಂದ ಅರಳಿವೆ. ತಾವೂ ಬಿಡಿಸಿದ ದೇವರ ಚಿತ್ರಗಳನ್ನೇ ಆತ್ಮೀಯರಿಗೆ ನೀಡುತ್ತಾ ಖುಷಿ ಪಡುತ್ತಿದ್ದರು. ಅವರು ಪುಸ್ತಕ ರೂಪದಲ್ಲಿಯೂ ಕೂಡ ಅವರು ಬಿಡಿಸಿದ ಚಿತ್ರಗಳನ್ನು ಸಂಗ್ರಹ ಮಾಡಿದ್ದಾರೆ. ಕಳೆದ ಬಾರಿ ಅವರು ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಸಲ್ಲಿಸಿದ್ದರೂ, ಜಿಲ್ಲಾಡಳಿತ ಗುರುತಿಸರಲಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದರು.
ತೇಕು ತಾಂಡೇಲ ನಿಧನಕ್ಕೆ ಮೀನುಗಾರ ಸಮುದಾಯದ ನಾಗರಿಕರು, ಚಿತ್ರ ಕಲಾವಿದರು ಸಂತಾಪ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ : 128 ಪ್ರಕರಣಗಳ ಆರೋಪಿ ಬಂಧನ