ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ತಾಲೂಕಿನ ಮೈಂಗಿಣಿ ಅರಣ್ಯ(Maingini Forest) ಪ್ರದೇಶದಿಂದ ಅಕ್ರಮವಾಗಿ ಗೋವಾ ಸರಾಯಿ(Goa Liquor) ಸಾಗಾಟ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ(Police Raid) ನಡೆಸಿದ ಘಟನೆ ಮಂಗಳವಾರ ಸಂಜೆ ನಡೆದಿದೆ
ಖಚಿತ ಮಾಹಿತಿ ಮೇರೆಗೆ ಚಿತ್ತಾಕುಲ ಪೊಲೀಸರು(Chittakul Police) ದಾಳಿ ನಡೆದಿದ್ದರು. ಈ ಸಂದರ್ಭದಲ್ಲಿ ಮೂವರನ್ನು ಬಂಧಿಸಲಾಗಿದೆ. ಹೊಟೆಗಾಳಿ ನೀಳ್ಯಾಭಾಗದ ರಾಜೇಂದ್ರ ಹರಿಶ್ಚಂದ್ರ ಪಡವಳಕರ (42) ಅರವ ಅಸ್ನೋಟಿಯ ಗಣಪತಿ ಮಹಾದೇವ ಕಲ್ಲುಟಕರ (58), ಹೊಟೆಗಾಳಿಯ ದಿಲೀಪ ಕುಶಾಲಿ ಮಾಳಸೇಕರ (52) ಎಂಬುವವರನ್ನು ಬಂಧಿಸಿದ್ದಾರೆ.
ಯಾವುದೇ ಪಾಸ್ ಅಥವಾ ಪರ್ಮಿಟ ಇಲ್ಲದೇ ಗೋವಾ ರಾಜ್ಯದಲ್ಲಿ ತಯಾರಾದ 1,34.482ರೂ. ಮೊತ್ತದ ಅಕ್ರಮ ಸರಾಯಿ ಬಾಟಲಿಗಳನ್ನು ಗ್ರಾಹಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಗೋವಾ ರಾಜ್ಯದ ಗಡಿಯಿಂದ ಮೈಂಗಿಣಿ ಅರಣ್ಯ ಪ್ರದೇಶದ ಕಾಲುದಾರಿಯಲ್ಲಿ ಹೊತ್ತುಕೊಂಡು ಬಂದು ಸಾಗಿಸುತ್ತಿದ್ದರು.
ಎಸ್ಪಿ ದೀಪನ್ ಎಂ ಎನ್. ಅಡಿಷನಲ್ ಎಸ್ಪಿ ಕೃಷ್ಣಮೂರ್ತಿ.ಜಿ , ಜಗದೀಶ.ಎಂ , ಡಿವೈಎಸ್ಪಿ ಎಸ್.ವಿ ಗಿರೀಶ, ಕದ್ರಾ ಸಿಪಿಐ ಪ್ರಭಾಕರ ಧರ್ಮಟ್ಟಿ, ಮಾರ್ಗದರ್ಶನದಲ್ಲಿ ಚಿತ್ತಾಕುಲ ಪಿಎಸ್ಐ ಪರಶುರಾಮ ಮಿರ್ಜಗಿ, ಸಿಬ್ಬಂದಿಗಳಾದ ಪಿ. ದೇವರಾಜ, ಗೌತಮ ರೊಡ್ಡನ್ನವರ, ಖಲಂಧರ ಡಾಲಾಯತ್, ಚಾಲಕ ಅಭಿಜಿತ್ ಆರ್ ಎಲ್ ತಂಡ ರಚಿಸಿಕೊಂಡು ದಾಳಿ ಮಾಡಿದ್ದರು.
ಇದನ್ನು ಓದಿ : ಭಟ್ಕಳಕ್ಕೆ ಬಂತು ಹವಾಲ ಹಣ, ಬಂಗಾರ. ಪತ್ತೆ ಮಾಡಿದ ಪೊಲೀಸರು. ಓರ್ವ ಆರೆಸ್ಟ್.
ಹೊನ್ನಾವರ ವಾಣಿಜ್ಯ ಬಂದರು ಯೋಜನೆ. ಸಿಎಂ ಭೇಟಿಯಾದ ಖ್ಯಾತ ಪರಿಸರವಾದಿ ಮೇದಾ ಪಾಟ್ಕರ್.
ಅರಬ್ಬಿ ಸಮುದ್ರದಲ್ಲಿ ಮತ್ಸ್ಯ ವೈಭವ
ದಾಂಡೇಲಿಯಲ್ಲಿ ಸ್ಕೂಟಿಗೆ ಟ್ರಾಕ್ಟರ್ ಢಿಕ್ಕಿ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷಗೆ ಗಂಭೀರ ಗಾಯ.

