ಹಳಿಯಾಳ (HALIYAL) : ಹೆಂಡತಿಯ ಶೀಲ ಶಂಕಿಸಿ ಅವಳ ಕುತ್ತಿಗೆಗೆ ಚಾಕು ಇರಿದು ಕೊಲೆ ಮಾಡಿದ ಆರೋಪಿಗೆ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ  ಜೀವಾವಧಿ ಶಿಕ್ಷೆ ವಿಧಿಸಿದೆ.

ಹಳಿಯಾಳ ತಾಲೂಕಿನ ಯಡೋಗ ಗ್ರಾಮದ(Yadoga village) ರಾಜಕುಮಾರ ಕುಂದರಕೇರ್ ಈತನಿಗೆ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಧೀಶರಾದ ಕಿರಣ ಕಿಣಿ ಇವರು ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.

ದಿನಾಂಕ 10-02-2022ರಂದು ಹಳಿಯಾಳ ಪೋಲಿಸ್ ಠಾಣೆ(Haliyal police station) ವ್ಯಾಪ್ತಿಯ ಯಡೋಗಾ ಗ್ರಾಮದಲ್ಲಿ ನಡೆದ ಘಟನೆ ನಡೆದಿತ್ತು. ಘಟನೆಗೆ ಸಂಬಂಧಿಸಿದಂತೆ ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ರಾಜೇಶ್ ಎಂ.ಮಳಗಿಕರ್ ರವರು ನ್ಯಾಯಾಲಯದ ಪ್ರಕರಣ ವಿದ್ಯಮಾನಗಳನ್ನು ಮತ್ತು ಲಭ್ಯವಿದ್ದ ಸಾಕ್ಷಿದಾರರನ್ನು ಸಾಕ್ಷ್ಯವನ್ನು ಗಂಭೀರವಾಗಿ ತೆಗೆದುಕೊಂಡು ಆರೋಪಿತರಿಗೆ ಶಿಕ್ಷೆ ವಿಧಿಸಬೇಕೆಂದು ತಮ್ಮ ಸುದೀರ್ಘ ವಾದ ಮಂಡಿಸಿದರು.

ಪ್ರಕರಣದಲ್ಲಿ ಆರೋಪಿಗೆ ಜೀವಾವಧಿ ಶಿಕ್ಷೆ, 25 ಸಾವಿರ ರೂ ದಂಡ ಹಾಗೂ ಜಿಲ್ಲಾ ಕಾನೂನು ಪ್ರಾಧಿಕಾರದಿಂದ ಮೃತಳ ಅವಲಂಭಿತರ ಮಕ್ಕಳಿಗೆ ಪರಿಹಾರ ರೂಪದಲ್ಲಿ ನೀಡಬೇಕೆಂದು ಆದೇಶ ಹೊರಡಿಸಲಾಗಿದೆ.

ಅಂದಿನ ಕೋರ್ಟ್ ಪೊಲೀಸರಾದ ಶಂಕರಲಿಂಗ ಚನ್ನಪ್ಪ ಕ್ಷತ್ರಿಯ ಪೊಲೀಸ್ ಕಾನ್ಸೆಟೇಬಲ್ ಹಳಿಯಾಳ ಪೊಲೀಸ್ ಠಾಣೆ ರವರು ಎಲ್ಲ ಸಾಕ್ಷಿದಾರರನ್ನು ಮಾನ್ಯ ನ್ಯಾಯಾ ಲಯಕ್ಕೆ ಕರಿಯಿಸಿ ಮತ್ತೆ ಪ್ರಕರಣದಲ್ಲಿನ ಮುದ್ದೆ ಮಾಲು ಮಾನ್ಯ ನ್ಯಾಯಾಲಯಕ್ಕೆ ವಿಚಾರಣೆಯೇ ಕಾಲಕ್ಕೆ ಹಾಜರುಪಡಿಸಿದರು. ಹಾಲಿ ಪಿಎಸ್‌ಐ ರವರಾದ ವಿನೋದ, ಎಸ್,ಕೆ ಮತ್ತೆ ಅಮೀನ್ ಅತ್ತಾರ ಪಿಎಸ್‌ಐರವರು ಹಳಿಯಾಳ ಪೊಲೀಸ್ ಠಾಣೆಯವರು ಕೋರ್ಟ್ ಮೋನಿಟರಿಂಗ್ ಮಾಡಿದರು. ಮತ್ತೆ ವಿಚಾರಣೆಯ ಕಾಲಕ್ಕೆ ಎಲ್ಲ ಸಾಕ್ಷಿದಾರರಿಗೆ ಬ್ರಿಪ್ ಮಾಡಿಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗುವಂತೆ ನೋಡಿಕೊಂಡರು

ಇದನ್ನು ಓದಿ : ಮೂಡಭಟ್ಕಳ ಬಳಿ ಟ್ಯಾಂಕರ್ ಪಲ್ಟಿ

ಕೈಯಾರೆ ನೇಮಕಾತಿ ಪತ್ರ ನೀಡಿದ ಕುಮಾರಸ್ವಾಮಿ

ಮುರ್ಡೇಶ್ವರ, ಮಂಗಳೂರಿನಲ್ಲಿ ಪ್ರವಾಸಿ ಬಂದರು

ಬೆಂಗಳೂರಿನಿಂದ ಕಾರವಾರಕ್ಕೆ ವಿಶೇಷ ರೈಲು