ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಹೊನ್ನಾವರ(Honnavar) : ತಾಲೂಕಿನ ನಾಜಗಾರಿನ ಶ್ರೀ ಕ್ಷೇತ್ರ ಉಪ್ಪಿನಹೊಯ್ಗೆ ನಾರಾಯಣ ದೇವಸ್ಥಾನಕ್ಕೆ ಮಾರ್ಚ್. 29 ರವಿವಾರದಂದು ಗೇರುಸೊಪ್ಪ ಸೀಮೆಯ ಶ್ರೀ ಗೋವರ್ಧನಗಿರಿ ಮುಖ್ಯಪ್ರಾಣ ದೇವರ ಪಲ್ಲಕ್ಕಿಯು ಪ್ರಥಮ ಬಾರಿಗೆ ಆಗಮಿಸುತ್ತಿದೆ.

ಮದ್ಯಾಹ್ನ 4 ಗಂಟೆಗೆ ನಾಜಗಾರ್ ಕ್ರಾಸ್ ತಲುಪಲಿದ್ದು, ಅಲ್ಲಿಂದ ಪೂರ್ಣಕುಂಭ, ವಾದ್ಯ ಘೋಷದ ಮೂಲಕ ಮುಖ್ಯಪ್ರಾಣ ದೇವರ ಪಲ್ಲಕ್ಕಿಯ ಭವ್ಯ ಮೆರವಣಿಗೆಯ ಮೂಲಕ ನಾರಾಯಣ ದೇವರ ಸನ್ನಿದಿಗೆ ಬರಮಾಡಿ ಕೊಳ್ಳಲಾಗುವುದು. ಅದೇ ದಿನ ಸಂಜೆ ದಂಡಾವಳಿ ಮಹಾ ಪೂಜೆ ಹಾಗೂ ಪ್ರಸಾದ ವಿತರಣೆ, ನಂತರ ಭಜನಾ ಕಾರ್ಯಕ್ರಮ ನಡೆಯಲಿದೆ.

ಊರಿನ ಸದ್ಭಕ್ತರು ಈ ಧಾರ್ಮಿಕ ಮೆರವಣಿಗೆ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಆಡಳಿತ ಮಂಡಳಿಯ ಅಧ್ಯಕ್ಷರು, ಸದಸ್ಯರು ವಿನಂತಿ ಮಾಡಿಕೊಂಡಿದ್ದಾರೆ.

ಇದನ್ನು ಓದಿ : ಬೈಕ್ ಅಪಘಾತ. ಸವಾರ ಸ್ಥಳದಲ್ಲಿ ಸಾವು.